Credit Card Shocker: ಭಾರತದ ಹೊರಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ. 20ರಷ್ಟು ಟಿಸಿಎಸ್; ಸರ್ಕಾರದಿಂದ ಅಧಿಸೂಚನೆ; ಏನಿದು ಟಿಸಿಎಸ್?

20% TCS For International Credit Card Usage: ಭಾರತೀಯರು ವಿದೇಶಗಳಿಗೆ ಹೋಗಿ ಅಲ್ಲಿ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ವಿಧಿಸಲಾಗುವ ಟಿಸಿಎಸ್ ಅನ್ನು ಶೇ. 5ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಇದು ವೈದ್ಯಕೀಯ ಮತ್ತು ಶಿಕ್ಷಣ ವೆಚ್ಚಕ್ಕೆ ಅನ್ವಯ ಅಗುವುದಿಲ್ಲ.

Credit Card Shocker: ಭಾರತದ ಹೊರಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ. 20ರಷ್ಟು ಟಿಸಿಎಸ್; ಸರ್ಕಾರದಿಂದ ಅಧಿಸೂಚನೆ; ಏನಿದು ಟಿಸಿಎಸ್?
ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2023 | 1:08 PM

ನವದೆಹಲಿ: ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್​ಗಳಿಂದ ಮಾಡಲಾಗುವ ವೆಚ್ಚವನ್ನು ಕೇಂದ್ರ ಸರ್ಕಾರ ಎಲ್​ಆರ್​ಎಸ್ ಸ್ಕೀಮ್ (LRS- Liberalized Remittance Scheme) ವ್ಯಾಪ್ತಿಗೆ ತರಲಾಗುವಂತೆ ಫೆಮಾ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಇದರ ಪರಿಣಾಮವಾಗಿ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ವಿಧಿಸಲು ಸಾಧ್ಯವಾಗುತ್ತದೆ. ಟಿಸಿಎಸ್ ಎಂದರೆ ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್. ಅಂದರೆ ವಹಿವಾಟುಗಳನ್ನು ನಡೆಸುವಾಗಲೇ ತೆರಿಗೆಯನ್ನು ಮುರಿದುಕೊಳ್ಳಲಾಗುತ್ತದೆ. ಭಾರತೀಯರು ವಿದೇಶಗಳಿಗೆ ಹೋಗಿ ಮಾಡುವ ವೆಚ್ಚಕ್ಕೆ ಶೇ. 20ರಷ್ಟು ತೆರಿಗೆ ಬೀಳುತ್ತದೆ. ಆರ್​ಬಿಐ ಜೊತೆ ಸಮಾಲೋಚನೆ ನಡೆಸಿ ಕೇಂದ್ರ ಹಣಕಾಸು ಸಚಿವಾಲಯ ಈ ನಿರ್ಧಾರ ಕೈಗೊಂಡು ಮೊನ್ನೆ ಅಧಿಸೂಚನೆ ಹೊರಡಿಸಿದೆ. ಇದೇ ವೇಳೆ, ಐಟಿ ರಿಟರ್ನ್ ಫೈಲ್ ಮಾಡುವಾಗ ಈ ತೆರಿಗೆ ಮೊತ್ತದ ರೀಫಂಡ್​ಗೆ ಬೇಕಾದರೆ ಮನವಿ ಸಲ್ಲಿಸುವ ಅವಕಾಶವಂತೂ ಇರುತ್ತದೆ. ಜುಲೈ 1ರಿಂದ ಈ ಹೊಸ ನಿಯಮ ಅನುಷ್ಠಾನಕ್ಕೆ ಬರಲಿದೆ.

ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾಗುವ ವೆಚ್ಚಕ್ಕೆ ಮಾತ್ರ ಈ ಟಿಸಿಎಸ್ ಶುಲ್ಕ ಇರುತ್ತದೆ. ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಬಳಸಿ ಭಾರತದಲ್ಲಿ ವಿದೇಶೀ ಸರಕು ಮತ್ತು ಸೇವೆಗಳನ್ನು ಖರೀದಿಸಿದರೆ ಈ ನಿಯಮ ಅನ್ವಯ ಆಗುವುದಿಲ್ಲ. ಹಾಗೆಯೇ ವಿದೇಶಗಳಲ್ಲಿ ವೈದ್ಯಕೀಯ ಮತ್ತು ಶಿಕ್ಷಣಕ್ಕಾಗಿ ಮಾಡುವ ವೆಚ್ಚಕ್ಕೂ ಟಿಸಿಎಸ್ ಕಟ್ಟಬೇಕಿಲ್ಲ.

ಇದನ್ನೂ ಓದಿSP Hinduja Passes Away: ಹಿಂದೂಜಾ ಗ್ರೂಪ್ ಛೇರ್ಮನ್ ಎಸ್.ಪಿ. ಹಿಂದೂಜಾ ನಿಧನ; 109 ವರ್ಷದ ಹಳೆಯ ಕಂಪನಿಯ ನೊಗ ಹೊತ್ತು ಮುನ್ನಡೆಸಿದ್ದ ಧೀಮಂತ ಉದ್ಯಮಿ

ಈ ಹಿಂದೆ ಇದ್ದ ಫಾರೀನ್ ಎಕ್ಸ್​ಚೇಂಜ್ ಮ್ಯಾನೇಜ್ಮೆಂಟ್ ರೂಲ್ಸ್​ನ ರೂಲ್ ನಂಬರ್ 7 ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್​ಗಳಿಂದ ಮಾಡಲಾಗುವು ವೆಚ್ಚವನ್ನು ಎಲ್​ಆರ್​ಎಸ್ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಕೇಂದ್ರ ಸರ್ಕಾರ ಈಗ ಈ ನಿಯಮದಲ್ಲಿ ತಿದ್ದುಪಡಿಸಿ ಮಾಡಿ ವಿದೇಶಗಳಲ್ಲಿ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಮಾಡಲಾಗುವ ವೆಚ್ಚವನ್ನು ಎಲ್​ಆರ್​ಎಸ್ ವ್ಯಾಪ್ತಿಗೆ ತಂದಿದೆ. ದೇಶೀಯ ಪ್ರವಾಸೋದ್ಯಮದಿಂದ ಈ ಹೊಸ ನಿಯಮಕ್ಕಾಗಿ ಬೇಡಿಕೆ ಬಂದಿದ್ದರಿಂದ ಈ ಬದಲಾವಣೆ ಮಾಡಲಾಗಿರುವುದು ತಿಳಿದುಬಂದಿದೆ.

ವಿದೇಶ ಪ್ರವಾಸಗಳಿಗೆ ಹೋಗಿ ದಂಡಿ ಖರ್ಚು ಮಾಡುತ್ತಿರುವ ಭಾರತೀಯರು

ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ವಿಧಿಸಬೇಕೆನ್ನುವ ಬೇಡಿಕೆ ಬಂದಿದ್ದು ಭಾರತೀಯ ಪ್ರವಾಸೋದ್ಯಮದಿಂದ ಎಂಬುದು ಕುತೂಹಲ ಮೂಡಿಸುತ್ತದೆ. ಇದಕ್ಕೆ ಕಾರಣವೂ ಉಂಟು. ಭಾರತೀಯರು ವಿದೇಶ ಪ್ರವಾಸಕ್ಕೆ ಹೋಗಿ ಖರ್ಚು ಮಾಡುವುದು ಹೆಚ್ಚಾಗಿದೆಯಂತೆ. 2022-23ರ ಹಣಕಾಸು ವರ್ಷದಲ್ಲಿ ವಿದೇಶೀ ಪ್ರವಾಸಗಳಿಗೆ ಭಾರತೀಯರು 12.51 ಬಿಲಿಯನ್ ಡಾಲರ್​ನಷ್ಟು ಹಣ ಖರ್ಚು ಮಾಡಿದ್ದಾರಂತೆ. ಅಂದರೆ, ಸುಮಾರು 1 ಲಕ್ಷ ಕೋಟಿ ರೂಪಾಯಿಯಷ್ಟು ಹಣವನ್ನು ಭಾರತೀಯರು ವಿದೇಶಗಳಿಗೆ ಹೋಗಿ ವೆಚ್ಚ ಮಾಡಿದ್ದಾರೆ.

ಇದನ್ನೂ ಓದಿFertilizer Subsidy: ಮುಂಗಾರು ಬೆಳೆಗೆ ಒಂದು ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿ: ಕೇಂದ್ರ ಸಮಿತಿ ಅನುಮೋದನೆ; 12ಕೋಟಿ ರೈತರಿಗೆ ಪ್ರಯೋಜನ

ಟಿಸಿಎಸ್ ಹೇಗೆ ವಿಧಿಸಲಾಗುತ್ತದೆ?

ವಿದೇಶಗಳಲ್ಲಿ ಭಾರತೀಯರು ಮಾಡುವ ವೆಚ್ಚದ ಮೇಲೆ ಕಣ್ಗಾವಲು ಇಡಲು ಎಲ್​ಆರ್​ಎಸ್ ಅನ್ವಯ ಮಾಡಲಾಗಿದೆ. ಈವರೆಗೂ ಇಂಥ ಅಂತಾರಾಷ್ಟ್ರೀಯ ವೆಚ್ಚಕ್ಕೆ ಶೇ. 5ರಷ್ಟು ಮಾತ್ರವೇ ಟಿಸಿಎಸ್ ಇತ್ತು. ಈಗ ಅದನ್ನು ಶೇ. 20ಕ್ಕೆ ಏರಿಸಲಾಗಿದೆ. ಜೂನ್ 30ರವರೆಗೂ ಶೇ. 5ರಷ್ಟು ಮಾತ್ರವೇ ಟಿಸಿಎಸ್ ಇರುತ್ತದೆ.

ಹೊರ ದೇಶಗಳಿಗೆ ಹೋಗಿ ಅಲ್ಲಿ ಭಾರತೀಯರು ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿದಾಗ ಕ್ರೆಡಿಟ್ ಕಾರ್ಡ್​ನ ಬ್ಯಾಂಕ್ ಈ ಟಿಸಿಎಸ್ ವಿಧಿಸುತ್ತದೆ. ಅಂದರೆ ಟಿಸಿಎಸ್ ಶುಲ್ಕವನ್ನು ವಹಿವಾಟಿನ ವೇಳೆಯೇ ಕಟ್ಟಬೇಕಾಗುತ್ತದೆ. ಈ ಶುಲ್ಕವನ್ನು ಬ್ಯಾಂಕ್​ನವರು ಕೇಂದ್ರಕ್ಕೆ ರವಾನಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು