SP Hinduja Passes Away: ಹಿಂದೂಜಾ ಗ್ರೂಪ್ ಛೇರ್ಮನ್ ಎಸ್.ಪಿ. ಹಿಂದೂಜಾ ನಿಧನ; 109 ವರ್ಷದ ಹಳೆಯ ಕಂಪನಿಯ ನೊಗ ಹೊತ್ತು ಮುನ್ನಡೆಸಿದ್ದ ಧೀಮಂತ ಉದ್ಯಮಿ
Hinduja Group Chairman Srichand Paramanand Hinduja: ಹಿಂದೂಜಾ ಗ್ರೂಪ್ನ ಛೇರ್ಮನ್, 87 ವರ್ಷದ ಶ್ರೀಚಂದ್ ಪರಮಾನಂದ್ ಹಿಂದೂಜಾ ಲಂಡನ್ನಲ್ಲಿ ಮೇ 17ರಂದು ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಅವರು ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರೆನ್ನಲಾಗಿದೆ.
ಲಂಡನ್: ಭಾರತದ ಪ್ರಬಲ ಉದ್ಯಮಿ ಕುಟುಂಬಗಳಲ್ಲಿ ಒಂದೆನಿಸಿದ ಹಿಂದೂಜಾ ಮನೆತನದ ಎಸ್.ಪಿ. ಹಿಂದೂಜಾ (SP Hinduja) ಮೇ 17ರಂದು ಲಂಡನ್ನಲ್ಲಿ ನಿಧನರಾಗಿದ್ದಾರೆ. 87 ವರ್ಷದ ಶ್ರೀಚಂದ್ ಪರಮಾನಂದ್ ಹಿಂದೂಜಾ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಿಂದೂ ಕುಟುಂಬದ ನಾಲ್ವರು ಮಕ್ಕಳಲ್ಲಿ ಶ್ರೀಚಂದ್ ಹಿಂದೂಜಾ ಹಿರಿಯರು. ಗೋಪಿಚಂದ್ ಹಿಂದೂಜಾ, ಪ್ರಕಾಶ್ ಹಿಂದೂಜಾ ಮತ್ತು ಅಶೋಕ್ ಹಿಂದೂಜಾ ಅವರು ಮೃತರ ಕಿರಿಯ ಸಹೋದರರು.
‘ಹಿಂದೂಜಾ ಗ್ರೂಪ್ನ ಛೇರ್ಮನ್ ಮತ್ತು ನಮ್ಮ ಕುಟುಂಬದ ಮುಖ್ಯಸ್ಥರಾಗಿದ್ದ ಎಸ್.ಪಿ. ಹಿಂದೂಜಾ ಅವರು ಇಂದು ನಿಧನರಾದರೆಂದು ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟಂಬ ದುಃಖತಪ್ತರಾಗಿ ತಿಳಿಸುತ್ತಿದ್ದಾರೆ’ ಎಂದು ಹಿಂದೂಜಾ ಕುಟುಂಬದ ವಕ್ತಾರರೊಬ್ಬರು ಮೇ 17ರಂದು ಹೇಳಿಕೆ ನೀಡಿದ್ದಾರೆ.
ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ಈಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಜಾ ಗ್ರೂಪ್ ಕಂಪನಿ ಸ್ಥಾಪನೆಯಾಗಿದ್ದು. ಸಿಂಧಿ ಕುಟುಂಬದ ಪಿ.ಡಿ. ಹಿಂದೂಜಾ ಈ ಸಂಸ್ಥೆಯ ಸ್ಥಾಪಕರು. ಇವರ ಮಕ್ಕಳೇ ಎಸ್.ಪಿ. ಹಿಂದೂಜಾ, ಗೋಪಿಚಂದ್ ಮತ್ತಿತರರು. ಎಸ್.ಪಿ. ಹಿಂದೂಜಾ ಅವರು 1935ರಲ್ಲಿ ಕರಾಚಿಯಲ್ಲಿ ಜನಿಸಿದ್ದರು. 1952ರಲ್ಲಿ ಓದು ಮುಗಿಸಿ ಅಪ್ಪನ ವ್ಯವಹಾರ ನೋಡಿಕೊಳ್ಳಲು ಆರಂಭಿಸಿದ ಶ್ರೀಚಂದ್ ಹಿಂದೂಜಾ, ಬಹಳ ಚಾಕಚಕ್ಯತೆಯ ವ್ಯವಹಾರಕ್ಕೆ ಹೆಸರುವಾಸಿಯಾದವರು.
ಹಿಂದೂಜಾ ಕುಟುಂಬದೊಳಗೆ ಯಾವತ್ತೂ ಕೂಡ ಬಿರುಕು ಮೂಡಿದ್ದು ಕಂಡುಂಬದಿಲ್ಲ. ಬಹಳ ಒಗ್ಗಟ್ಟಾಗಿ ನಿಂತು ಎಲ್ಲರೂ ಹಿಂದೂಜಾ ಗ್ರೂಪ್ನ ಬೃಹತ್ ವ್ಯವಹಾರಗಳನ್ನು ನಿಭಾಯಿಸುತ್ತಾ ಬಂದಿದ್ದಾರೆ. ಕುಟುಂಬದ ಹಿರಿಯನಾಗಿ ಎಸ್.ಪಿ. ಹಿಂದೂಜಾ ಅವರಿಗೇ ಈ ಕ್ರೆಡಿಟ್ ಸಲ್ಲುತ್ತದೆ.
ಹಿಂದೂಜಾ ಕುಟುಂಬ ಬ್ರಿಟನ್ನಲ್ಲೇ ಅತಿದೊಡ್ಡ ಶ್ರೀಮಂತರು
ಹಿಂದೂಜಾ ಕುಟುಂಬ ಭಾರತ ಸೇರಿದಂತೆ ವಿಶ್ವದ ಹಲವೆಡೆ ವ್ಯವಹಾರ ಹೊಂದಿದೆ. ಆದರೆ ಕುಟುಂಬಸದಸ್ಯರು ಬ್ರಿಟನ್ ಪ್ರಜೆಗಳಾಗಿದ್ದು, ಅಲ್ಲಿಯೇ ನೆಲಸಿದ್ದಾರೆ. ಹಿಂದೂಜಾ ಕುಟುಂಬದವರು ಬ್ರಿಟನ್ನ ಅತ್ಯಂತ ಶ್ರೀಮಂತರು. ಏಷ್ಯಾದ ಶ್ರೀಮಂತರ ಪೈಕಿ ಇವರ ಕುಟುಂಬವೂ ಇದೆ.
ಇದನ್ನೂ ಓದಿ: Wistron Workers: ಕರ್ನಾಟಕದಲ್ಲಿ ಟಾಟಾಗೆ ವಿಸ್ಟ್ರಾನ್ ಭೂತ; ಐಫೋನ್ ಫ್ಯಾಕ್ಟರಿಯಲ್ಲಿ ಮತ್ತೆ ಕಾರ್ಮಿಕರ ಪ್ರತಿಭಟನೆ ಶುರು
ಹಿಂದೂಜಾ ಗ್ರೂಪ್ನ ಕಂಪನಿಗಳ ಪಟ್ಟಿ
ಹಿಂದೂಜಾ ಗ್ರೂಪ್ನ ಉದ್ಯಮ ಸಾಮ್ರಾಜ್ಯ ಅಗಾಧವಾದುದು. ಇಂಡಸ್ಇಂಡ್ ಬ್ಯಾಂಕ್, ಅಶೋಕ್ ಲೀಲ್ಯಾಂಡ್ ಇತ್ಯಾದಿ ಕಂಪನಿಗಳು ಹಿಂದೂಜಾ ಗ್ರೂಪ್ಗೆ ಸೇರಿದ್ದಾಗಿವೆ. ಬೆಂಗಳೂರಿನಲ್ಲಿರುವ ಹಿಂದೂಜಾ ಸಿಂಧಿ ಆಸ್ಪತ್ರೆ ಇವರದ್ದೆಯೇ. ಇವುಗಳ ಪಟ್ಟಿ ಇಲ್ಲಿದೆ:
- ಹಿಂದೂಜಾ ಹೌಸಿಂಗ್ ಫೈನಾನ್ಸ್
- ಅಶೋಕ್ ಲೀಲ್ಯಾಂಡ್
- ಸ್ವಿಚ್ ಮೊಬಿಲಿಟಿ
- ಅಶೋಕ್ ಲೀಲ್ಯಾಂಡ್ ಫೌಂಡ್ರೀಸ್
- ಪಿ.ಡಿ. ಹಿಂದೂಜಾ ನ್ಯಾಷನಲ್ ಹಾಸ್ಪಿಟಲ್ ಅಂಡ್ ಮೆಡಿಕಲ್ ರೀಸರ್ಚ್ ಸೆಂಟರ್
- ಪಿ.ಡಿ. ಹಿಂದೂಜಾ ಸಿಂಧಿ ಆಸ್ಪತ್ರೆ, ಬೆಂಗಳೂರು
- ಹಿಂದೂಜಾ ಹೆಲ್ತ್ಕೇರ್ ಲಿ
- ಹಿಂದೂಜಾ ಬ್ಯಾಂಕ್ (ಸ್ವಿಟ್ಜರ್ಲೆಂಡ್)
- ಇಂಡಸ್ಇಂಡ್ ಬ್ಯಾಂಕ್
- ಹಿಂದೂಜಾ ಲೀಲ್ಯಾಂಡ್ ಫೈನಾನ್ಸ್ ಲಿ
- ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್
- ಜಿಒಸಿಎಲ್ ಕಾರ್ಪೊರೇಷನ್ ಲಿ
- ಗಲ್ಫ್ ಆಯಿಲ್ ಇಂಟರ್ನ್ಯಾಷನಲ್ ಲಿ
- ಗಲ್ಫ್ ಆಯಿಲ್ ಲೂಬ್ರಿಕೆಂಟ್ಸ್ ಇಂಡಿಯಾ ಲಿ
- ಕ್ವಾಕರ್ ಹಾಟನ್ ಇಂಟರ್ನ್ಯಾಷನಲ್ ಲಿ
- ಗಲ್ಫ್ ಆಯಿಲ್ ಮಿಡಲ್ ಈಸ್ಟ್ ಲಿ
- ಹಿಂದೂಜಾ ನ್ಯಾಷನಲ್ ಪವರ್ ಕಾರ್ಪೊರೇಷನ್
- ಹಿಂದೂಜಾ ರಿನಿವಬಲರ್ಸ್ ಎನರ್ಜಿ ಪ್ರೈ ಲಿ
- ಹಿಂದೂಜಾ ರಿಯಾಲ್ಟಿ ವೆಂಚರ್ಸ್ ಲಿ
- ಹಿಂದೂಜಾ ಗ್ರೂಪ್ ಇಂಡಿಯಾ ಲಿ
- ಕೆಪಿಬಿ ಹಿಂದೂಜಾ ಕಾಲೇಜ್ ಆಫ್ ಕಾಮರ್ಸ್
- ಎನ್ಎಕ್ಸ್ಟಿ ಡಿಜಿಟಲ್ ಲಿ
- ಸೈಕ್ಯುರೆಕ್ಸ್ ಸಿಸ್ಟಮ್ಸ್ ಪ್ರೈ ಲಿ
- ಬ್ರಿಟಿಷ್ ಮೆಟಲ್ ಕಾರ್ಪೊರೇಷನ್ ಪ್ರೈ ಲಿ
- ಹಿಂದೂಜಾ ಇನ್ವೆಸ್ಟ್ಮೆಂಟ್ ಅಂಡ್ ಪ್ರಾಜೆಕ್ಟ್ ಸರ್ವಿಸಸ್ ಲಿ