Cryptocurrencies: ಕ್ರಿಪ್ಟೋಕರೆನ್ಸಿಗಳಿಗೆ ಹೊಸ ತೆರಿಗೆ ಕಾನೂನು ತರಲು ಕೇಂದ್ರ ಸರ್ಕಾರದ ಚಿಂತನೆ

| Updated By: Srinivas Mata

Updated on: Dec 04, 2021 | 3:02 PM

ಕ್ರಿಪ್ಟೋಕರೆನ್ಸಿಯ ತೆರಿಗೆ ಕಾನೂನಿಗೆ ಸಂಬಂಧಿಸಿದಂತೆ ಸರ್ಕಾರವು ಹೊಸದಾಗಿ ಕೆಲವು ಸೇರ್ಪಡೆ ಮಾಡಬಹುದಾಗಿದೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

Cryptocurrencies: ಕ್ರಿಪ್ಟೋಕರೆನ್ಸಿಗಳಿಗೆ ಹೊಸ ತೆರಿಗೆ ಕಾನೂನು ತರಲು ಕೇಂದ್ರ ಸರ್ಕಾರದ ಚಿಂತನೆ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಪ್ಲಾಟ್‌ಫಾರ್ಮ್‌ಗಳ ಮೂಲಕವಾಗಿ ಕ್ರಿಪ್ಟೋಕರೆನ್ಸಿಗಳಲ್ಲಿ ವ್ಯಾಪಾರ ಅಥವಾ ಹೂಡಿಕೆ ಮಾಡುವ ಭಾರತೀಯರು ಈಗ ತೆರಿಗೆದಾರರ ನಿಗಾ ಅಡಿಯಲ್ಲಿ ಬರಬಹುದು. ದೇಶದ ಹೊರಗೆ ಸಹ ಅಂತಹ ಕಾಯಿನ್​ಗಳನ್ನು ಹೊಂದಿರುವವರು ಸಹ ತೆರಿಗೆ ನಿಗಾ ಅಡಿ ಬರಬಹುದು. ಕ್ರಿಪ್ಟೋಕರೆನ್ಸಿಗೆ ಸಂಬಂಧಪಟ್ಟಂತೆ ಸದ್ಯಕ್ಕೆ ಇರುವ ಆದಾಯ ತೆರಿಗೆ ನಿಯಮಗಳು ಮತ್ತು ಬಹಿರಂಗಪಡುವ ಮಾನದಂಡಗಳನ್ನು ತಿದ್ದುಪಡಿ ಮಾಡಲು, ನಿಯಮಗಳನ್ನು ಮುಂಬರುವ ಬಜೆಟ್‌ನಲ್ಲಿ ಸೇರಿಸಲು ಪ್ರಸ್ತುತ ಸರ್ಕಾರವು ಆಲೋಚಿಸುತ್ತಿದೆ. ಕ್ರಿಪ್ಟೋಕರೆನ್ಸಿ ಆದಾಯ ಮತ್ತು ಭಾರತದ ಒಳಗೆ ಹಾಗೂ ಹೊರಗೆ ಹೂಡಿಕೆಗಳ ಲೆಕ್ಕವನ್ನು ಇಡಲು ಸರ್ಕಾರ ಬಯಸಿದೆ ಎಂದು ಈ ಬೆಳವಣಿಗೆ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 26A ಮತ್ತು ವಾರ್ಷಿಕ ಮಾಹಿತಿ ನಿಯಂತ್ರಣ (AIR) ತಿದ್ದುಪಡಿ ಮಾಡಲು ಸರ್ಕಾರವು ಚಿಂತಿಸುತ್ತಿದೆ. ಇದು ತೆರಿಗೆದಾರರಿಂದ ಮಾಡಿದ ಎಲ್ಲ ಹೂಡಿಕೆಗಳ ಡೇಟಾವನ್ನು ತೋರಿಸುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ‘ತೆರಿಗೆ ಪಾಸ್‌ಬುಕ್’ ಎಂದು ಕರೆಯಲಾಗುತ್ತದೆ.

“ಆದಾಯ ತೆರಿಗೆ ಕಾಯ್ದೆಯ ಕೆಲವು ಭಾಗಗಳಲ್ಲಿ ಕ್ರಿಪ್ಟೋಕರೆನ್ಸಿ, ಕ್ರಿಪ್ಟೋ ಸ್ವತ್ತುಗಳು ಅಥವಾ ಡಿಜಿಟಲ್ ಕರೆನ್ಸಿ ಪದಗಳನ್ನು ಸೇರಿಸಲು ಶಿಫಾರಸು ಇದೆ,” ಎಂದು ಮೂಲಗಳು ತಿಳಿಸಿವೆ. “ಇದರರ್ಥ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಕ್ರಿಪ್ಟೋಕರೆನ್ಸಿ ಹೂಡಿಕೆ ಅಥವಾ ವ್ಯಾಪಾರದಿಂದ ತಮ್ಮ ಆದಾಯವನ್ನು ನಿರ್ದಿಷ್ಟವಾಗಿ ಬಹಿರಂಗಪಡಿಸಬೇಕು.”

ಕ್ರಿಪ್ಟೋಕರೆನ್ಸಿ ಫ್ರೇಮ್​ವರ್ಕ್
ನಿಶ್ಚಿತ ಠೇವಣಿ, ಮ್ಯೂಚುವಲ್ ಫಂಡ್‌ಗಳು, ರೆಕರಿಂಗ್ ಡೆಪಾಸಿಟ್ಸ್ ಮತ್ತು ಆಭರಣಗಳಲ್ಲಿ 2 ಲಕ್ಷ ಮತ್ತು ಹೆಚ್ಚಿನ ಹೂಡಿಕೆ ಮಾಡಿದ್ದಲ್ಲಿ AIRನಲ್ಲಿ ಬಹಿರಂಗಪಡಿಸಬೇಕು. ತೆರಿಗೆ ಇಲಾಖೆಯು ಗ್ರಾಹಕರಿಂದ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಬಹಿರಂಗಪಡಿಸಲು ಕಾನೂನುಬದ್ಧವಾಗಿ ಬ್ಯಾಂಕ್‌ಗಳನ್ನು ಕೇಳಲು ಸಾಧ್ಯವಿಲ್ಲ. ಏಕೆಂದರೆ ಆಸ್ತಿಯನ್ನು ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ವ್ಯಾಖ್ಯಾನಿಸಿಲ್ಲ. ಅಂತಹ ತಿದ್ದುಪಡಿಯನ್ನು ಮಾಡಿದ ನಂತರ, ತೆರಿಗೆದಾರರು ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ವ್ಯಕ್ತಿಗಳ ವಹಿವಾಟಿನ ವಿವರಗಳನ್ನು ಪಡೆಯಬಹುದು.

ಹೆಚ್ಚಿನ ಸಂದರ್ಭಗಳಲ್ಲಿ, ಕ್ರಿಪ್ಟೋಕರೆನ್ಸಿ ಹೂಡಿಕೆ ಮತ್ತು ವ್ಯಾಪಾರದ ಮೂಲಕ ಮಾಡಿದ ಹಣವನ್ನು ಠೇವಣಿ ಮಾಡಲು ಭಾರತೀಯರು ಇವುಗಳನ್ನು ಬಳಸುತ್ತಿದ್ದಾರೆ. ವಿದೇಶೀ ಆಸ್ತಿ ಬಹಿರಂಗಪಡಿಸುವ ಮಾನದಂಡಗಳನ್ನು ತಿದ್ದುಪಡಿ ಮಾಡಲು ಸರ್ಕಾರವು ನೋಡುತ್ತಿದೆ. ಇದರಿಂದ ಭಾರತೀಯರು ವಿದೇಶದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಹೊಂದಿದ್ದಾರೆಯೇ ಎಂದು ಘೋಷಿಸಬೇಕಾಗುತ್ತದೆ. ಪ್ರಸ್ತುತ ನಿಯಮಗಳು ಭಾರತೀಯರು ಹೊಂದಿರುವ ಎಲ್ಲ ಆಸ್ತಿಗಳನ್ನು ಅಥವಾ ರಿಯಲ್ ಎಸ್ಟೇಟ್ ಅಥವಾ ವಿದೇಶಿ ಟ್ರಸ್ಟ್‌ಗಳ ಮೂಲಕ ವರ್ಷದಲ್ಲಿ ಅವರು ಮಾಡಿದ ಯಾವುದೇ ಆದಾಯವನ್ನು ಬಹಿರಂಗಪಡಿಸಲು ಕಡ್ಡಾಯಗೊಳಿಸುತ್ತವೆ. ಅಸ್ತಿತ್ವದಲ್ಲಿರುವ ತೆರಿಗೆ ಕಾನೂನಿನಲ್ಲಿರುವ ಎರಡು ಬದಲಾವಣೆಗಳು ಸರ್ಕಾರವು ಪರಿಚಯಿಸಲು ಬಯಸುತ್ತಿರುವ ಕ್ರಿಪ್ಟೋಕರೆನ್ಸಿ ಫ್ರೇಮ್‌ವರ್ಕ್‌ನಿಂದ ಪ್ರತ್ಯೇಕವಾಗಿದೆ.

ಇದನ್ನೂ ಓದಿ: Cryptocurrencies: ಕೆಲವರಿಗಷ್ಟೇ ಭಾರತದಲ್ಲಿ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಅವಕಾಶಕ್ಕೆ ಸರ್ಕಾರ ಚಿಂತನೆ