Social Security Scheme: ಸಾಮಾಜಿಕ ಭದ್ರತೆ ಯೋಜನೆಗೆ ಜೀವಿತಾವಧಿಯಲ್ಲಿ ಒಂದೇ ಸಂಖ್ಯೆ; ಕೇಂದ್ರದ ಯೋಜನೆ
ಸಾಮಾಜಿಕ ಭದ್ರತೆಯ ಎಲ್ಲ ಸಂಖ್ಯೆಯನ್ನು ಒಂದು ಮಾಡುವುದಕ್ಕೆ, ಪೋರ್ಟಬಲಿಟಿಗೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ವರದಿ ಆಗಿದೆ.
ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿನ ಎಲ್ಲ ಉದ್ಯೋಗಿಗಗಳಿಗೂ ಸಾಮಾಜಿಕ ಭದ್ರತಾ ಸಂಖ್ಯೆಯನ್ನು ಪೋರ್ಟ್ ಮಾಡಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ ನೀಡುವ ಸಾಧ್ಯತೆ ಇದೆ. ಅಧಿಕಾರಿಗಳು ಆಲೋಚಿಸುತ್ತಿರುವ ಪ್ರಕಾರ, ಒಬ್ಬ ಉದ್ಯೋಗಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಸಂಖ್ಯೆಯು ಆಧಾರ್ ಜೊತೆಗೆ ಜೋಡಣೆ ಆಗಿರುತ್ತದೆ. ಆ ಸಂಖ್ಯೆಯೇ ಸಂಘಟಿತವಾಗಿರಲಿ ಅಥವಾ ಅಸಂಘಟಿತ ವಲಯ ಆಗಿರಲಿ, ಆ ಉದ್ಯೋಗಿಯ ಜೀವಿತಾವಧಿಯ ಉದ್ದಕ್ಕೂ ಇರುತ್ತದೆ ಎಂದು ಮಿಂಟ್ ವರದಿ ಮಾಡಿದೆ. ಆದರೆ ಈ ಬಗ್ಗೆ ಪ್ರತ್ಯೇಕವಾಗಿ ಖಾತ್ರಿ ಆಗಿಲ್ಲ. ವಿಪರೀತ ಸಂಖ್ಯೆಯಲ್ಲಿ ಯೂನಿವರ್ಸಲ್ ಅಥವಾ ಯೂನಿಕ್ ಅಕೌಂಟ್ ನಂಬರ್ (ಯುಎಎನ್) ಆಗುವುದು ಸಾಮಾಜಿಕ ಭದ್ರತೆ ಎಕೋಸಿಸ್ಟಮ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಒಬ್ಬ ಉದ್ಯೋಗಿಯ ಜೀವಿತಾವಧಿಯಲ್ಲಿ ಒಂದು ಸಲ ನೋಂದಣಿ, ಒಂದು ಸಂಖ್ಯೆ ಇರುತ್ತದೆ. ಅದನ್ನು ಈಗ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಆಗಿದೆ.
ಸದ್ಯಕ್ಕೆ ಹೇಗಿದೆ ಅಂದರೆ, ಇಪಿಎಫ್ಒ ಹಾಗೂ ಇಎಸ್ಐಸಿಗೆ ನೋಂದಣಿ ಮಾಡುವ ಉದ್ಯೋಗಿಗಳಿಗೆ ವಿಶಿಷ್ಟ ಸಂಖ್ಯೆ ಇರುತ್ತದೆ. ಇನ್ನೂ ಮುಂದುವರಿದು, ಕಾರ್ಮಿಕ ಸಚಿವಾಲಯವು ಆಗಸ್ಟ್ 26ರಂದು ಅಸಂಘಟಿತ ವಲಯದ ಕಾರ್ಮಿಕರಿಗೆ ರಾಷ್ಟ್ರೀಯ ಡೇಟಾಬೇಸ್ ಅಥವಾ ಇ-ಶ್ರಮ್ ಪೋರ್ಟಲ್ಗೆ ಚಾಲನೆ ನೀಡಿದೆ. ಈ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ ಮಾಡಿಕೊಂಡು, ವಿವಿಧ ಸಾಮಾಜಿಕ ಭದ್ರತೆ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ಸರ್ಕಾರದ ನೀತಿಗಳ ಮೇಲ್ವಿಚಾರಣೆಗೆ ಹಾಗೂ ಉತ್ತಮವಾಗಿ ನಿಗಾ ವಹಿಸುವುದಕ್ಕೆ ಮತ್ತು ತಳಮಟ್ಟದಲ್ಲಿ ಅಸಂಘಟಿತ ವಲಯದ ನಿರ್ದಿಷ್ಟ ಗುಂಪನ್ನು ತಲುಪಲು ಸಹಾಯ ಆಗುತ್ತದೆ.
ಕಾರ್ಮಿಕ ಮಾರುಕಟ್ಟೆ ಬದಲಾಗುತ್ತಿದೆ. ಜನರು ಸಂಘಟಿತ ವಲಯದಿಂದ ಅಸಂಘಟಿತ ಹಾಗೂ ಗಿಗ್ (ಅಗತ್ಯಕ್ಕೆ ತಕ್ಕಂತೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ- ಕೆಲಸಕ್ಕೆ) ಕೆಲಸಕ್ಕೆ ಸಾಗುತ್ತಿದ್ದಾರೆ. ಮಾರುಕಟ್ಟೆ ಸನ್ನಿವೇಶ, ಆದಾಯ, ಆರಾಮ ಇವುಗಳ ಮೇಲೆ ಅವಲಂಬಿತ ಆಗುತ್ತದೆ. ಆರಾಮದಾಯಕ ಸಾಮಾಜಿಕ ಭದ್ರತೆ ಪೋರ್ಟಬಲ್ ವ್ಯವಸ್ಥೆಯಿಂದ ಅನುಕೂಲ ಆಗಲಿದೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಅಭಿಪ್ರಾಯ. ವಿವಿಧ ಸಂಸ್ಥೆಗಳು ಅಂತ ಕೆಲಸ ಬದಲಾಯಿಸಿದರೂ ಒಂದು ಸಾಮಾಜಿಕ ಭದ್ರತೆ ಸಂಖ್ಯೆ ಇರುವುದಕ್ಕೆ ಸಾಧ್ಯವಿದೆ. ಒಂದು ಸಲ ಇದು ಅಂತಿಮ ಆದ ಮೇಲೆ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: PF- Aadhaar Seeding: ಸೆಪ್ಟೆಂಬರ್ 1ರಿಂದ ಪಿಎಫ್- ಆಧಾರ್ ಜೋಡಣೆ ಕಡ್ಡಾಯ; ಆನ್ಲೈನ್ ಪ್ರಕ್ರಿಯೆ ಹೇಗೆ?
(Central Government Planning To Merge All Social Security Numbers And Portability According To Report)