AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ ಯಶಸ್ಸಿನಲ್ಲಿ ಭಾಗಿದಾರರಾದ ಪ್ರಮುಖ 10 ಸಂಸ್ಥೆಗಳು ಮತ್ತವುಗಳ ಕೊಡುಗೆ

Chandrayaan-3: ಆಗಸ್ಟ್ 23ರಂದು ಸಂಜೆ ಭಾರತದ ಮೂರನೇ ಚಂದ್ರಯಾನದ ನೌಕೆ ಸೋಮನ ದಕ್ಷಿಣ ಧ್ರುವದ ಮೇಲೆ ಮೆದುವಾಗಿ ಇಳಿಯಿತು. ಇದರೊಂದಿಗೆ ಈ ಪ್ರದೇಶದಲ್ಲಿ ಅಡಿ ಇಟ್ಟ ಮೊದಲ ದೇಶ ಭಾರತವಾಗಿದೆ. ಈ ಯಾನದ ಯಶಸ್ಸಿನಲ್ಲಿ ಇಸ್ರೋ ಜೊತೆ ಹಲವು ಸಂಸ್ಥೆಗಳ ಯೋಗದಾನ ಇದೆ.

ಚಂದ್ರಯಾನ ಯಶಸ್ಸಿನಲ್ಲಿ ಭಾಗಿದಾರರಾದ ಪ್ರಮುಖ 10 ಸಂಸ್ಥೆಗಳು ಮತ್ತವುಗಳ ಕೊಡುಗೆ
ಚಂದ್ರಯಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 24, 2023 | 11:06 AM

ಭಾರತದ ಮೂರನೇ ಚಂದ್ರಯಾನ ಯೋಜನೆ ಯಶಸ್ವಿಯಾಗಿದೆ. ಮಿಷನ್​ನಲ್ಲಿ (Chandrayaan-3) ನಿರೀಕ್ಷಿತ ರೀತಿಯಲ್ಲಿ ಚಂದ್ರನ ಮೇಲೆ ಲ್ಯಾಂಡರ್ ಯಾವುದೇ ಅವಘಡ ಇಲ್ಲದೇ ಇಳಿದಿದೆ. ಲ್ಯಾಂಡರ್​ನಿಂದ ರೋವರ್ ಕೆಳಗಿಳಿದು ಚಂದ್ರನ ನೆಲದಲ್ಲಿ ಅನ್ವೇಷಣೆ ನಡೆಸತೊಡಗಿದೆ. ಆಗಸ್ಟ್ 23ರಂದು ಸಂಜೆ ಚಂದ್ರಯಾನದ ಲ್ಯಾಂಡರ್ ಯಶಸ್ವಿಯಾಗಿ ನೆಲ ಸ್ಪರ್ಶಿಸುವ ಕ್ಷಣಗಳು ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಲೈವ್ ಆಗಿ ತೋರಿಸಲಾಗಿತ್ತು. ಕೋಟ್ಯಂತರ ಜನರು ನೋಡಿ ಆನಂದತುಂದಿಲರಾಗಿದ್ದರು. ಇಸ್ರೋದ ವಿಜ್ಞಾನಿಗಳ ಮೊಗದಲ್ಲಿ ನಗು ಅವಿಸ್ಮರಣೀಯವಾಗಿತ್ತು. ದೂರದ ದಕ್ಷಿಣ ಆಫ್ರಿಕಾದಿಂದ ಪ್ರಧಾನಿ ಮೋದಿ ಕೂಡ ಆ ಕ್ಷಣಗಳನ್ನು ಕಣ್ತುಂಬಿಸಿಕೊಂಡು ಖುಷಿಪಟ್ಟರು.

ಚಂದ್ರಯಾನ ಯಶಸ್ವಿಯಾಗಿರುವುದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೊಂದು ಹೆಗ್ಗುರುತು ಸಿಕ್ಕಿದೆ. ಈ ಯೋಜನೆಯಲ್ಲಿ ಬಹಳಷ್ಟು ವ್ಯಕ್ತಿಗಳು ಮತ್ತು ಸಂಸ್ಥೆಗಳು ಇಸ್ರೋಗೆ ಬಲ ನೀಡಿವೆ. ಚಂದ್ರಯಾನ ಯೋಜನೆಯಲ್ಲಿ ಸಾಕಷ್ಟು ಸಂಸ್ಥೆಗಳ ಕೊಡುಗೆ ಇದೆ.

ಚಂದ್ರಯಾನ ಯೋಜನೆ ಯಶಸ್ಸಿನಲ್ಲಿ ಇಸ್ರೋಗೆ ಬಲ ನೀಡಿದ ಪ್ರಮುಖ ಸಂಸ್ಥೆಗಳು

  1. ಎಚ್​ಎಎಲ್
  2. ಎಲ್ ಅಂಡ್ ಟಿ
  3. ಬಿಎಚ್​ಇಎಲ್
  4. ಮಿಶ್ರ ಧಾತು ನಿಗಮ್ ಲಿ
  5. ವಾಲ್​ಚಂದ್ ಸಾಗರ್ ಇಂಡಸ್ಟ್ರೀಸ್
  6. ಸೆಂಟಮ್ ಎಲೆಕ್ಟ್ರಾನಿಕ್ಸ್
  7. ಲಿಂಡೆ ಇಂಡಿಯಾ
  8. ಪರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್
  9. ಗೋದ್ರೇಜ್ ಏರೋಸ್ಪೇಸ್
  10. ಎಂಟಿಎಆರ್ ಟೆಕ್ನಾಲಜೀಸ್

ಇದನ್ನೂ ಓದಿ: Chandrayaan-3: ಯೂಟ್ಯೂಬ್​ನಲ್ಲಿ ದಾಖಲೆ ಧೂಳೀಪಟ; ಇಲ್ಲಿದೆ ಅತಿಹೆಚ್ಚು ನೇರ ವೀಕ್ಷಣೆ ಕಂಡ ಘಟನೆಗಳ ಪಟ್ಟಿ; ಚಂದ್ರಯಾನ ಯಶಸ್ಸು ಕಂಡು ರೋಮಾಂಚಿತಗೊಂಡ ವೀಕ್ಷಕರು

ದೇಶದ ಪ್ರಮುಖ ಎಂಜಿನಿಯರಿಂಗ್ ಕಂಪನಿ ಲಾರ್ಸನ್ ಅಂಡ್ ಟೌಬ್ರೋ ಸಂಸ್ಥೆ ಚಂದ್ರಯಾನದ ಬೂಸ್ಟರ್ ಭಾಗಗಳನ್ನು ತಯಾರಿಸಿಕೊಟ್ಟಿದೆ. ವಾಲ್​ಚಂದರ್​ನಗರ್ ಇಂಡಸ್ಟ್ರೀಸ್ ಸಂಸ್ಥೆ ಕೂಡ ಕೆಲ ಬೂಸ್ಟರ್ ಸೆಗ್ಮೆಂಟ್​ಗಳನ್ನು ತಯಾರಿಸಿಕೊಟ್ಟಿದೆ.

ಬೆಂಗಳೂರು ಮೂಲದ ಎಚ್​ಎಎಲ್ ಸಂಸ್ಥೆ ಪಿಎಸ್​ಎಲ್​ವಿ ರಾಕೆಟ್ ತಯಾರಿಕೆಯಲ್ಲಿ ನೆರವಾಗಿದೆ. ಹಅಗೆಯೇ, ಚಂದ್ರಯಾನ ಮಿಷನ್​ಗೆ ಬೇಕಾದ ಹಲವು ಬಿಡಿಭಾಗಗಳನ್ನು ಅದು ಒದಗಿಸಿದೆ. ಇನ್ನು, ಬಿಎಚ್​ಇಎಲ್ ಸಂಸ್ಥೆ ಬೈ-ಮೆಟಾಲಿಕ್ ಅಡಾಪ್ಟರ್​​ಗಳನ್ನು ಸರಬರಾಜು ಮಾಡಿದೆ.

ಹೈದರಾಬಾದ್​ನ ಮಿಶ್ರ ಧಾತು ನಿಗಮ್ ಸಂಸ್ಥೆ ಬಹಳ ಅಗತ್ಯವೆನಿಸಿರುವ ಕೋಬಾಲ್ಟ್ ಬೇಸ್ ಅಲಾಯ್, ನಿಕೆಲ್ ಬೇಸ್ ಅಲಾಯ್, ಟೈಟೇನಿಯಮ್ ಅಲಾಯ್ ಮೊದಲಾದ ಪ್ರಮುಖ ವಸ್ತುಗಳನ್ನು ಪೂರೈಸಿದೆ. ಹೈದರಾಬಾದ್ ಮೂಲದ ಇನ್ನೊಂದು ಸಂಸ್ಥೆ ಎಂಟಿಎಆರ್ ಟೆಕ್ನಾಲಜೀಸ್ ಕೂಡ ಪ್ರಮುಖ ವಸ್ತುಗಳನ್ನು ಸರಬರಾಜು ಮಾಡಿದೆ.

ಇದನ್ನೂ ಓದಿ: ಚಂದ್ರಯಾನ 3: ವಿಕ್ರಮ್ ಲ್ಯಾಂಡರ್​ನಿಂದ ಹೊರಬಂದ ರೋವರ್ ಪ್ರಗ್ಯಾನ್​ನಿಂದ ಮೂನ್ ವಾಕ್

ಒಟ್ಟಾರೆ, ಇಸ್ರೋ ರೂಪಿಸಿದ ಚಂದ್ರಯಾನ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡಿರುವುದು ವಿಶೇಷ. ಇದರ ವೆಚ್ಚ ಕೇವಲ 615 ಕೋಟಿ ರೂ ಮಾತ್ರ. ಇದರಲ್ಲಿ ಲ್ಯಾಂಡರ್ ಮತ್ತು ರೋವರ್​ಗಳ ಅಭಿವೃದ್ಧಿಗೆ 250 ಕೋಟಿ ರೂ ವೆಚ್ಚವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ