ಚಂದ್ರಯಾನ 3: ವಿಕ್ರಮ್ ಲ್ಯಾಂಡರ್ನಿಂದ ಹೊರಬಂದ ರೋವರ್ ಪ್ರಗ್ಯಾನ್ನಿಂದ ಮೂನ್ ವಾಕ್
ಭಾರತೀಯರ ಹಲವು ವರ್ಷಗಳ ಕನಸು ಈಗ ನನಸಾಗಿದೆ, ಭಾರತವು ಚಂದ್ರನ ಮೇಲೆ ಹೆಜ್ಜೆ ಇರಿಸಿದೆ. ಇದೀಗ ವಿಕ್ರಮ್ ಲ್ಯಾಂಡರ್ನಿಂದ ಹೊರಬಂದಿರುವ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ವಾಕ್ ಮಾಡಿದೆ ಎಂದು ಇಸ್ರೋ(Isro) ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇಸ್ರೋ ಮೇಡನ್ ಇನ್ ಇಂಡಿಯಾ ಮೇಡ್ ಫಾರ್ ಮೂನ್ ಎಂದು ಟ್ವೀಟ್ ಮಾಡಿದೆ.
ಭಾರತೀಯರ ಹಲವು ವರ್ಷಗಳ ಕನಸು ಈಗ ನನಸಾಗಿದೆ, ಭಾರತವು ಚಂದ್ರನ ಮೇಲೆ ಹೆಜ್ಜೆ ಇರಿಸಿದೆ. ಇದೀಗ ವಿಕ್ರಮ್ ಲ್ಯಾಂಡರ್ನಿಂದ ಹೊರಬಂದಿರುವ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ವಾಕ್ ಮಾಡಿದೆ ಎಂದು ಇಸ್ರೋ(Isro) ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇಸ್ರೋ ಮೇಡನ್ ಇನ್ ಇಂಡಿಯಾ ಮೇಡ್ ಫಾರ್ ಮೂನ್ ಎಂದು ಟ್ವೀಟ್ ಮಾಡಿದೆ. ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ (ಆಗಸ್ಟ್ 23) ಸಂಜೆ 6.04 ಕ್ಕೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ದೇಶದ ಜನತೆಯವರೆಗೂ ಈ ದೃಶ್ಯವನ್ನು ಲೈವ್ ಆಗಿ ವೀಕ್ಷಿಸಿದ್ದಾರೆ.
ಈ ಸಾಧನೆಗೆ ಭಾರತಕ್ಕೆ ಅಮೆರಿಕ, ಯುರೋಪ್, ರಷ್ಯಾ ಮತ್ತು ನೆರೆಯ ಪಾಕಿಸ್ತಾನದಿಂದಲೂ ಅಭಿನಂದನೆಗಳು ಬಂದಿವೆ.ಇಸ್ರೋದ ಈ ಸಾಧನೆಯನ್ನು ಬಾಹ್ಯಾಕಾಶ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣ ಎಂದು ಹೇಳಲಾಗಿದೆ. ಇದಕ್ಕೂ ಕೆಲವು ದಿನಗಳ ಹಿಂದೆ ರಷ್ಯಾದ ಮಾನವ ರಹಿತ ಲೂನಾ-25 ಬಾಹ್ಯಾಕಾಶ ನೌಕೆ ನಿಯಂತ್ರಣ ತಪ್ಪಿ ಚಂದ್ರನ ಮೇಲೆ ಬಿದ್ದಿತ್ತು.
ರಷ್ಯಾದ ಸರ್ಕಾರಿ ಬಾಹ್ಯಾಕಾಶ ನಿಗಮ ‘ರಾಸ್ಕೊಸ್ಮಾಸ್’ ಕೂಡ ಭಾರತವನ್ನು ಅಭಿನಂದಿಸಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ರೋಸ್ಕಾಸ್ಮಾಸ್ ಭಾರತವನ್ನು ಅಭಿನಂದಿಸುತ್ತದೆ ಎಂದು ರೋಸ್ಕಾಸ್ಮಾಸ್ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತಷ್ಟು ಓದಿ: ಚಂದ್ರಯಾನ-3 ಯಶಸ್ವಿ; ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ ಮೋದಿ
ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಇಸ್ರೋ (ISRO) ಕಚೇರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಬೆಂಗಳೂರಿನಲ್ಲಿರುವ (Bangalore) ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 26ರಂದು ಸಂಜೆ 5.55ಕ್ಕೆ ಎಚ್ಎಎಲ್ ಏರ್‌ಪೋರ್ಟ್‌ಗೆ ಆಗಮಿಸಲಿರುವ ಪ್ರಧಾನಿ, ಸಂಜೆ 6.30ರವರೆಗೆ ಏರ್‌ಪೋರ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ರಾತ್ರಿ 7 ಗಂಟೆಗೆ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ರಾತ್ರಿ 8 ಗಂಟೆಯವರೆಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ನಂತರ ರಾತ್ರಿ 8.35ಕ್ಕೆ ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.
ಪ್ರಸ್ತುತ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಮೋದಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಅಲ್ಲಿನ ಜೊಹಾನ್ಸ್‌ಬರ್ಗ್‌ನಲ್ಲಿದ್ದಾರೆ. ಅಲ್ಲಿಂದಲೇ ಅವರು ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ನಲ್ಲಿ 4 ವೈಜ್ಞಾನಿಕ ಉಪಕರಣಗಳಿವೆ. ಅವುಗಳು ಚಂದ್ರನಲ್ಲಿ ಕಂಪನದ, ಚಂದ್ರನ ಮೇಲ್ಮೈನಲ್ಲಿ ಶಾಖ ಸಾಗುವ ರೀತಿಯನ್ನು, ಚಂದ್ರನ ಮೇಲ್ಮೈನ ಬಳಿ ಇರುವ ಪ್ಲಾಸ್ಮಾ ವಾತಾವರಣವನ್ನು ಅಧ್ಯಯನ ನಡೆಸಲಿದ್ದು, ಭೂಮಿಯಿಂದ ಚಂದ್ರನ ದೂರವನ್ನು ನಿಖರವಾಗಿ ಅಳೆಯಲಿವೆ.
ಈ ನಾಲ್ಕು ಉಪಕರಣಗಳು ಒಂದೊಂದು ರೀತಿಯ ಅಧ್ಯಯನ ಮಾಡಲಿವೆ. ಮೊದಲ ಉಪಕರಣ, ಚಂದ್ರನ ಅಂಗಳದಲ್ಲಿ ಸಂಭವಿಸಬಹುದಾದ ಕಂಪನದ ಬಗ್ಗೆ ಅಧ್ಯಯನ ಮಾಡಲಿದೆ. ಎರಡನೇ ಉಪಕರಣ, ಚಂದ್ರನ ಮೇಲ್ಮೈನಲ್ಲಿ ಶಾಖ ಸಾಗುವ ರೀತಿಯನ್ನು ಅಧ್ಯಯನ ಮಾಡುತ್ತೆ. ವಿಕ್ರಮ್ ಲ್ಯಾಂಡರ್ನ ಮೂರನೇ ಉಪಕರಣ, ಚಂದ್ರನ ಮೇಲ್ಮೈ ಬಳಿ ಇರುವ ಪ್ಲಾಸ್ಮಾ ವಾತಾವರಣದ ಕುರಿತು ಅಧ್ಯಯನ ಮಾಡುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:15 am, Thu, 24 August 23