Housing Loan: ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ ಪ್ರಮುಖ 10 ಬ್ಯಾಂಕ್​ಗಳಿವು

ಭಾರತದ ಯಾವ ಬ್ಯಾಂಕ್​ನಲ್ಲಿ ಹೌಸಿಂಗ್ ಲೋನ್ ಬಡ್ಡಿ ದರ ಎಷ್ಟಿದೆ? ಯಾವ ಬ್ಯಾಂಕ್​ನಲ್ಲಿ ಆ ಪೈಕಿ ಕಡಿಮೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Housing Loan: ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ ಪ್ರಮುಖ 10 ಬ್ಯಾಂಕ್​ಗಳಿವು
ಸಾಂದರ್ಭಿಕ ಚಿತ್ರ
Edited By:

Updated on: Dec 24, 2021 | 11:06 AM

ಮನೆ ಕಟ್ಟಬೇಕು ಅಥವಾ ಖರೀದಿ ಮಾಡಬೇಕು ಅಂದುಕೊಳ್ಳುವವರಿಗೆ ಈಗಿನದು ಸರಿಯಾದ ಸಮಯ. ಏಕೆಂದರೆ, ಗೃಹ ಸಾಲದ ಮೇಲಿನ ಬಡ್ಡಿ ದರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಇನ್ನು ಕೈಗೆಟುಕುವ ದರದ ಮನೆಗಳಿಗೆ ಪ್ರಧಾನಮಂತ್ರಿ ಆವಾಸ ಯೋಜನಾ ಅಡಿಯಲ್ಲಿ ಸರ್ಕಾರದ ಇನ್ಸೆಂಟಿವ್ (ಪ್ರೋತ್ಸಾಹಕ) ಸಹ ಸಿಗುತ್ತದೆ. ಬಡ್ಡಿ ದರದ ಸಬ್ಸಿಡಿ ಶೇ 3ರಿಂದ ಶೇ 6.5 ದೊರೆಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಎಂಐಜಿ (ಮಿಡ್ಲ್ ಇನ್​ಕಮ್​ ಗ್ರೂಪ್) ಸಬ್ಸಿಡಿ ಮುಗಿದಿದ್ದು, ಸದ್ಯಕ್ಕೆ ಎಲ್​ಐಜಿ ಹಾಗೂ ಇಡಬ್ಲ್ಯುಎಸ್ ವರ್ಗಗಳಿಗೆ ಮಾತ್ರ ಸಬ್ಸಿಡಿ ದೊರೆಯುತ್ತಿದೆ. ಅದು 2022ರ ಮಾರ್ಚ್​ ತನಕ ದೊರೆಯಲಿದೆ. ಈಗಾಗಲೇ ಹಣದುಬ್ಬರದ ಆತಂಕ ಎದುರಾಗಿದ್ದು, ನವೆಂಬರ್​ ತಿಂಗಳ ಸಗಟು ದರ ಸೂಚ್ಯಂಕವು ನವೆಂಬರ್​ ತಿಂಗಳಲ್ಲಿ 12 ವರ್ಷದ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಜಾಗತಿಕ ಮಟ್ಟದಲ್ಲೇ ಹಣದುಬ್ಬರವನ್ನು ಹತೋಟಿಗೆ ತರುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಮುಂಬರುವ ಆರ್​ಬಿಐ ಸಮಿತಿ ಸಭೆಯಲ್ಲಿ ಬಡ್ಡಿ ದರದ ಏರಿಕೆಯಾದರೂ ಅಚ್ಚರಿ ಪಡುವಂತಿಲ್ಲ.

ಈಗಿನ ಅವಕಾಶವನ್ನು ಬಳಸಿಕೊಂಡು, ಗೃಹ ಸಾಲವನ್ನು ಪಡೆಯಬೇಕು ಅಂತಿದ್ದೀರಾ? ಹಾಗಿದ್ದಲ್ಲಿ ಯಾವ ಬ್ಯಾಂಕ್​ನಲ್ಲಿ ಬಡ್ಡಿ ದರ ಕಡಿಮೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದನ್ನೇ ಈ ಲೇಖನದಲ್ಲಿ ನೀಡಲಾಗುತ್ತಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ: ವೇತನದಾರರಿಗೆ- ಶೇ 6.4ರಿಂದ 7.8 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.65ರಿಂದ ಶೇ 8.3
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ವೇತನದಾರರಿಗೆ- ಶೇ 6.4ರಿಂದ 7.25 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.5ರಿಂದ ಶೇ 7.35
ಬ್ಯಾಂಕ್ ಆಫ್ ಬರೋಡ: ವೇತನದಾರರಿಗೆ- ಶೇ 6.5ರಿಂದ 7.85 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.5ರಿಂದ ಶೇ 7.85
ಬ್ಯಾಂಕ್ ಆಫ್ ಇಂಡಿಯಾ: ವೇತನದಾರರಿಗೆ- ಶೇ 6.5ರಿಂದ 8.2 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.5ರಿಂದ ಶೇ 8.35
ಕೊಟಕ್ ಮಹೀಂದ್ರಾ ಬ್ಯಾಂಕ್: ವೇತನದಾರರಿಗೆ- ಶೇ 6.55ರಿಂದ 7.10 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.65ರಿಂದ ಶೇ 7.25
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ವೇತನದಾರರಿಗೆ- ಶೇ 6.60ರಿಂದ 7.35 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.65ರಿಂದ ಶೇ 7.6
ಐಸಿಐಸಿಐ ಬ್ಯಾಂಕ್: ವೇತನದಾರರಿಗೆ- ಶೇ 6.7ರಿಂದ 7.4 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.9ರಿಂದ ಶೇ 7.55
ಆಕ್ಸಿಸ್ ಬ್ಯಾಂಕ್: ವೇತನದಾರರಿಗೆ- ಶೇ 6.75ರಿಂದ 7.1 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.90ರಿಂದ ಶೇ 7.2
ಐಡಿಬಿಐ ಬ್ಯಾಂಕ್: ವೇತನದಾರರಿಗೆ- ಶೇ 6.75ರಿಂದ 8.4 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.85ರಿಂದ ಶೇ 9.9
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ: ವೇತನದಾರರಿಗೆ- ಶೇ 6.75ರಿಂದ 7.15 ಹಾಗೂ ಸ್ವ ಉದ್ಯೋಗಿಗಳಿಗೆ ಶೇ 6.9ರಿಂದ ಶೇ 7.3

ಇಲ್ಲಿರುವ ಬಡ್ಡಿ ದರಗಳ ಪೈಕಿ ಗೃಹ ಸಾಲಕ್ಕೆ ಮಹಿಳೆಯರಿಗೆ ವಿಶೇಷ ರಿಯಾಯಿತಿ ಸಿಗುವಂಥವು ಸಹ ಇವೆ. ಉದಾಹರಣೆಗೆ, ಎಸ್​ಬಿಐನಿಂದ ಮಹಿಳೆಯರಿಗೆ ಗೃಹ ಸಾಲದ ಮೇಲೆ 5 ಬಿಪಿಎಸ್​ ವಿನಾಯಿತಿ ಇದೆ. ಜತೆಗೆ ಬ್ಯಾಂಕ್​ನ ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಸಾಲ ಪಡೆದುಕೊಂಡಲ್ಲಿ 5 ಬೇಸಿಸ್ ಪಾಯಿಂಟ್ ರಿಯಾಯಿತಿ ದೊರೆಯುತ್ತದೆ.

ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?

Published On - 2:22 pm, Sat, 18 December 21