Sign In

By signing in or creating an account, you agree with Associated Broadcasting Company's Terms & Conditions and Privacy Policy.

Richest China: ಅಮೆರಿಕವನ್ನು ಹಿಂದಿಕ್ಕಿ ಅತಿ ಶ್ರೀಮಂತ ದೇಶವಾದ ಚೀನಾ

ಅಮೆರಿಕವನ್ನು ಹಿಂದಿಕ್ಕಿ ಚೀನಾ ವಿಶ್ವದ ಅತ್ಯಂತ ಶ್ರೀಮಂತ ದೇಶ ಎನಿಸಿಕೊಂಡಿದೆ. ಅಂದ ಹಾಗೆ ವಿಶ್ವದ ಟಾಪ್ 10 ಶ್ರೀಮಂತ ದೇಶಗಳ ಪಟ್ಟಿ ಇಲ್ಲಿದೆ.

Richest China: ಅಮೆರಿಕವನ್ನು ಹಿಂದಿಕ್ಕಿ ಅತಿ ಶ್ರೀಮಂತ ದೇಶವಾದ ಚೀನಾ
ಚೀನಾ ಬಾವುಟ
Follow us
TV9 Web
| Updated By: Srinivas Mata

Updated on: Nov 16, 2021 | 3:07 PM

ಅಮೆರಿಕವನ್ನೂ ಹಿಂದಿಕ್ಕಿ ಚೀನಾ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಕಳೆದ ಎರಡು ದಶಕದಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಬೆಳೆದಿದೆ. ಅದರಲ್ಲಿ ಚೀನಾವು ಅಮೆರಿಕಾವನ್ನು ಪಕ್ಕಕ್ಕೆ ಸರಿಸಿ, ಮೊದಲ ಸ್ಥಾನ ಅಲಂಕರಿಸಿದೆ. ಇದನ್ನು ಹೇಳುತ್ತಿರುವುದು ಒಂದ ಹೊಸ ವರದಿ. ಮೆಕ್​ಕಿನ್ಸೆ ಅಂಡ್ ಕೋ ಕನ್ಸಲ್ಟೆಂಟ್ಸ್​ನ ಸಂಶೋಧನಾ ಅಂಗಸಂಸ್ಥೆಯ ವರದಿ ಇದು. ವಿಶ್ವದ ಶೇ 60ಕ್ಕೂ ಹೆಚ್ಚು ಆದಾಯವನ್ನು ಪ್ರತಿನಿಧಿಸುವ ಆ ಹತ್ತು ದೇಶಗಳ ಬ್ಯಾಲೆನ್ಸ್​ ಶೀಟ್ ಅನ್ನು ಅದು ಪರಿಶೀಲಿಸಿದೆ. “ನಾವು ಈ ಹಿಂದೆಂದಿಗಿಂತಲೂ ಸಂಪತ್ತು ಹೊಂದಿದ್ದೇವೆ,” ಎಂದು ಜ್ಯೂರಿಚ್​ನ ಮೆಕ್​ಕಿನ್ಸೆ ಗ್ಲೋಬಲ್​ ಇನ್​ಸ್ಟಿಟ್ಯೂಟ್​ ಆಫ್ ಸಹಭಾಗಿ ಆದ ಜಾನ್ ಮಿಶ್ಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ವಿಶ್ವದಾದ್ಯಂತ ನಿವ್ವಳ ಮೌಲ್ಯ 2020ರಲ್ಲಿ 514 ಲಕ್ಷ ಕೋಟಿ ಡಾಲರ್​ಗೆ ಏರಿಕೆ ಆಗಿದೆ. 2000ನೇ ಇಸವಿಯಲ್ಲಿ ಈ ಪ್ರಮಾಣ 156 ಲಕ್ಷ ಕೋಟಿ ಡಾಲರ್ ಇತ್ತು. ಇದು ಅಧ್ಯಯನ ತೆರೆದಿಡುವ ಅಂಕಿ- ಅಂಶವಾಗಿದೆ. ಈ ಏರಿಕೆ ಆಗಿರುವುದರಲ್ಲಿ ಚೀನಾದ ಪಾಲು ಮೂರನೇ ಒಂದು ಭಾಗದಷ್ಟಿದೆ. 2000ನೇ ಇಸವಿಯಲ್ಲಿ, ಅದು ವಿಶ್ವ ವಾಣಿಜ್ಯ ಸಂಸ್ಥೆ ಸೇರುವ ಮುನ್ನ 7 ಲಕ್ಷ ಕೋಟಿ ಇದ್ದದ್ದು ಇಪ್ಪತ್ತು ವರ್ಷದ ಅಂತರದಲ್ಲಿ 120 ಲಕ್ಷ ಕೋಟಿ ಡಾಲರ್ ಆಗಿದೆ.

ಅಮೆರಿಕದ ಸಂಪತ್ತು ಮೌಲ್ಯ ಈ ಅವಧಿಯಲ್ಲಿ ದುಪ್ಪಟ್ಟಿಗಿಂತ ಹೆಚ್ಚಾಗಿ 90 ಲಕ್ಷ ಕೋಟಿ ಅಮೆರಿಕನ್ ಡಾಲರ್ ಆಗಿದೆ. ಈ ಎರಡೂ ದೇಶಗಳಿವೆಯಲ್ಲ, ಅಂದರೆ ಚೀನಾ ಹಾಗೂ ಅಮೆರಿಕ ವಿಶ್ವದ ಎರಡು ಅತಿ ದೊಡ್ಡ ಆರ್ಥಿಕತೆಗಳು. ಮೂರನೇ ಎರಡಕ್ಕಿಂತ ಹೆಚ್ಚಿನ ಸಂಪತ್ತನ್ನು ಶೇ 10ರಷ್ಟಿರುವ ಶ್ರೀಮಂತ ಕುಟುಂಬಗಳು ಹೊಂದಿವೆ. ಮತ್ತು ಅವರು ಪಾಲು ಏರಿಕೆ ಆಗುತ್ತಲೇ ಇದೆ ಎಂದು ವರದಿ ಹೇಳಿದೆ. ಅಂಕಿ- ಅಂಶಗಳನ್ನು ಒಗ್ಗೂಡಿಸಿರುವ ಮೆಕ್​ಕಿನ್ಸೆ, ಜಾಗತಿಕ ಸಂಪತ್ತಿನ ಶೇ 68ರಷ್ಟು ನಿವ್ವಳ ಮೌಲ್ಯವು ರಿಯಲ್​ ಎಸ್ಟೇಟ್​ನಲ್ಲಿ ಸಂಗ್ರಹವಾಗಿದೆ ಎಂದಿದೆ. ಬಾಕಿ ಮೂಲಸೌಕರ್ಯ, ಮಶೀನರಿ ಮತ್ತು ಸಲಕರಣೆ ಮತ್ತು ತುಂಬ ಕಡಿಮೆ ಪ್ರಮಾಣದಲ್ಲಿ ಪೇಟೆಂಟ್ಸ್​ ಮತ್ತು ಬೌದ್ಧಿಕ ಆಸ್ತಿಯಂಥದ್ದರಲ್ಲಿ ಇದೆ. ಹಣಕಾಸು ಆಸ್ತಿಗಳನ್ನು ಜಾಗತಿಕ ಆಸ್ತಿ ಲೆಕ್ಕಾಚಾರದಲ್ಲಿ ಅಳತೆ ಮಾಡಿಲ್ಲ. ಏಕೆಂದರೆ ಅವು ಸಾಲದ ಜತೆಗೆ ಆಫ್​ಸೆಟ್ ಆಗಿರುತ್ತವೆ: ವಯಕ್ತಿಕ ಹೂಡಿಕೆದಾರರ ಬಳಿ ಇರುವ ಕಾರ್ಪೊರೇಟ್​ ಬಾಂಡ್​ಗಳು, ಉದಾಹರಣೆಗೆ, ಆ ಕಂಪೆನಿಯ I.O.U ಪ್ರತಿನಿಧಿಸುತ್ತದೆ.

ಕಳೆದ ಎರಡು ದಶಕದಲ್ಲಿ ಹೀಗೆ ತೀವ್ರ ಸ್ವರೂಪದಲ್ಲಿ ನಿವ್ವಳ ಮೌಲ್ಯ ಏರಿಕೆ ಆಗಿ ಜಾಗತಿಕ ಜಿಡಿಪಿ ಕೂ ಭಾರೀ ಹೆಚ್ಚಳವಾಗಿದೆ. ಇದಕ್ಕೆ ಕಾರಣವಾದ ಅಂಶಗಳೇನೆಂದರೆ, ಆಸ್ತಿಗಳ ಮೌಲ್ಯದಲ್ಲಿನ ಏರಿಕೆ ಮತ್ತು ಅದಕ್ಕೆ ಮೂಲವಾದ ಬಡ್ಡಿ ದರದಲ್ಲಿನ ಇಳಿಕೆ ಎಂದು ಮೆಕ್​ಕಿನ್ಸೆ ವರದಿ ಹೇಳುತ್ತದೆ. ಆದಾಯಕ್ಕೆ ಹೋಲಿಸಿದಲ್ಲಿ ಆಸ್ತಿ ಬೆಲೆಗಳು ದೀರ್ಘಾವಧಿ ಸರಾಸರಿಯಲ್ಲಿ ಹತ್ತಿರಹತ್ತಿರ ಶೇ 50ರಷ್ಟು ಏರಿಕೆಯಾಗಿದೆ. ಈ ಕಾರಣಕ್ಕೆ ಸಂಪತ್ತಿನ ಏರಿಕೆ ಹಾಗೇ ಉಳಿಯಬಹುದೆ ಎಂಬ ಪ್ರಶ್ನೆ ಉಳಿಯುತ್ತದೆ. “ಹಣದುಬ್ಬರದ ಮೇಲೆ ಮತ್ತು ಮೀರಿದ ಬೆಲೆ ಹೆಚ್ಚಳದ ಮೂಲಕ ನಿವ್ವಳ ಮೌಲ್ಯವು ಹಲವು ವಿಧಗಳಲ್ಲಿ ಪ್ರಶ್ನಾರ್ಹವಾಗಿದೆ,” ಎಂದು ಮಿಶ್ಕೆ ಹೇಳಿದ್ದಾರೆ. “ಇದು ಎಲ್ಲ ರೀತಿಯ ಅಡ್ಡ ಪರಿಣಾಮಗಳೊಂದಿಗೆ ಬರುತ್ತದೆ.”

ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಮೌಲ್ಯಗಳಿಂದ ಅನೇಕರಿಗೆ ಮನೆ ಮಾಲೀಕತ್ವ ಕೈಗೆಟುಕುವಂತಿಲ್ಲ ಮತ್ತು ಹಣಕಾಸಿನ ಬಿಕ್ಕಟ್ಟಿನ ಅಪಾಯವನ್ನು ಹೆಚ್ಚಿಸಿದೆ – ಅಮೆರಿಕದಲ್ಲಿ 2008ರಲ್ಲಿ ಹೌಸಿಂಗ್ ಕ್ಷೇತ್ರದ ಗುಳ್ಳೆ ಒಡೆದ ನಂತರ ಚೀನಾ ಎವರ್‌ಗ್ರಾಂಡ್ ಸಮೂಹದಂತಹ ಪ್ರಾಪರ್ಟಿ ಡೆವಲಪರ್‌ಗಳ ಸಾಲದಿಂದ ಚೀನಾವು ಇದೇ ರೀತಿಯ ತೊಂದರೆಗೆ ಒಳಗಾಗಬಹುದು. ವರದಿ ಪ್ರಕಾರ, ಹೆಚ್ಚು ಉತ್ಪಾದಕ ಹೂಡಿಕೆಗಳಲ್ಲಿ ಪ್ರಪಂಚದ ಸಂಪತ್ತು ತೊಡಗಿಸುವುದು ಜಾಗತಿಕ ಜಿಡಿಪಿಯನ್ನು ವಿಸ್ತರಿಸುವ ಮಾರ್ಗವಾಗಿದೆ. ಒಂದು ವೇಳೆ ದುಃಸ್ವಪ್ನದಂತೆ ಸನ್ನಿವೇಶವು ಬದಲಾಗಿ, ಆಸ್ತಿ ಬೆಲೆಗಳಲ್ಲಿ ಕುಸಿತವಾದರೆ ಅದು ಜಾಗತಿಕ ಸಂಪತ್ತಿನ ಮೂರನೇ ಒಂದು ಭಾಗದಷ್ಟು ಅಳಿಸಿಹಾಕುತ್ತದೆ. ಇದು ಪ್ರಪಂಚದ ಆದಾಯಕ್ಕೆ ಅನುಗುಣವಾಗಿ ಹೆಚ್ಚು ಆಗುತ್ತದೆ.

ವಿಶ್ವದ ಟಾಪ್ 10 ಶ್ರೀಮಂತ ದೇಶಗಳಿವು: ಚೀನಾ, ಅಮೆರಿಕಾ, ಜರ್ಮನಿ, ಫ್ರಾನ್ಸ್, ಯು.ಕೆ., ಕೆನಡಾ, ಆಸ್ಟ್ರೇಲಿಯಾ, ಜಪಾನ್, ಮೆಕ್ಸಿಕೋ, ಸ್ವೀಡನ್.

ಇದನ್ನೂ ಓದಿ: Rich: ಭಾರತದ ಟಾಪ್ ಶೇ 10ರಷ್ಟು ಶ್ರೀಮಂತರ ಬಳಿ ಶೇ 50ಕ್ಕೂ ಹೆಚ್ಚು ಸಂಪತ್ತು ಸಂಗ್ರಹ ಎಂದಿದೆ ಈ ಸಮೀಕ್ಷೆ

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ