ಅಲಿಬಾಬ ಸಮೂಹದ ಹೋಲ್ಡಿಂಗ್ ಲಿಮಿಟೆಡ್., ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಬೈದು ಇಂಕ್., ಕಂಪೆನಿಗಳೂ ಸೇರಿದಂತೆ ಇತರ ಕಂಪೆನಿಗಳಿಗೆ ಚೀನಾದ ಸ್ಪರ್ಧೆಯ ನಿಗಾ ಸಂಸ್ಥೆಯಿಂದ ಒಟ್ಟು 21.5 ಮಿಲಿಯನ್ ಯುವಾನ್ (3.4 ಮಿಲಿಯನ್ ಅಮೆರಿಕನ್ ಡಾಲರ್) ದಂಡವನ್ನು ಪಾವತಿಸಲು ಆದೇಶಿಸಲಾಗಿದೆ. ಇದು ಚೀನಾದಲ್ಲಿ ಕಂಪೆನಿಗಳ ಏಕಸ್ವಾಮ್ಯದ ಮೇಲೆ ನಡೆಯುತ್ತಿರುವ ದಮನದಲ್ಲಿ ಇತ್ತೀಚಿನ ಸುತ್ತಿನ ದಂಡವಾಗಿದೆ. ಒಟ್ಟು 43 ವಿಶ್ವಾಸ ಧಕ್ಕೆ ಉಲ್ಲಂಘನೆಗಳಿಗೆ ಕಂಪೆನಿಗಳು ತಲಾ 5,00,000 ಯುವಾನ್ ಪಾವತಿಸಬೇಕು ಎಂದು ಮಾರುಕಟ್ಟೆ ನಿಯಂತ್ರಣಕ್ಕಾಗಿ ಇರುವ ರಾಜ್ಯ ಆಡಳಿತವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ. ಒಂದು ಪ್ರಕರಣಕ್ಕೆ 5,00,000 ಯುವಾನ್ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 58,17,169.26 ಆಗುತ್ತದೆ. ಒಟ್ಟು 47 ಪ್ರಕರಣಕ್ಕೆ 25,01,38,278.18 (25.01 ಕೋಟಿ ) ರೂಪಾಯಿ ಆಗುತ್ತದೆ.
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಏಕಸ್ವಾಮ್ಯಕ್ಕಾಗಿ ಡೇಟಾವನ್ನು ಸಂಗ್ರಹಿಸುವ “ಪ್ಲಾಟ್‌ಫಾರ್ಮ್” ಕಂಪೆನಿಗಳ ಮೇಲೆ ಕಣ್ಣಿಡುವ ಉದ್ದೇಶವನ್ನು ಮಾರ್ಚ್‌ನಲ್ಲಿ ಘೋಷಿಸಿದರು. ಮತ್ತು ಬೀಜಿಂಗ್ ಚೀನಾದ ವಿಸ್ತಾರವಾದ ಖಾಸಗಿ ವಲಯದ ಮೇಲೆ, ವಿಶೇಷವಾಗಿ ಡಿಜಿಟಲ್ ಕ್ಷೇತ್ರದಲ್ಲಿ ವಿಶ್ವಾಸ ಧಕ್ಕೆ ಮೇಲ್ವಿಚಾರಣೆಯನ್ನು ಹೆಚ್ಚಿಸುತ್ತಿದೆ.
ಅಲಿಬಾಬ ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗ ಮಾಡಿಸಿಕೊಂಡಿದ್ದಕ್ಕಾಗಿ ಈ ವರ್ಷದ ಆರಂಭದಲ್ಲಿ 2.8 ಶತಕೋಟಿ ಡಾಲರ್ ತೆರಿಗೆಯನ್ನು ವಿಧಿಸಲಾಯಿತು. ಆದರೆ ಏಕಸ್ವಾಮ್ಯ-ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಹಾರ-ವಿತರಣೆ ಮುಂಚೂಣಿಯಲ್ಲಿ ಇರುವ ಮೀಟುವಾನ್‌ಗೆ ಕಳೆದ ತಿಂಗಳು 533 ಮಿಲಿಯನ್ ಡಾಲರ್ಗೆ ದಂಡ ವಿಧಿಸಲಾಯಿತು.
ಇದನ್ನೂ ಓದಿ: ಪಾಕಿಸ್ತಾನದಿಂದ ಚೀನಾಗೆ ಸಾಗಿಸುತ್ತಿದ್ದ ರೇಡಿಯೋಆ್ಯಕ್ಟಿವ್ ಕಂಟೇನರ್ಗಳು ಗುಜರಾತ್ನಲ್ಲಿ ವಶಕ್ಕೆ