ಪಾಕಿಸ್ತಾನದಿಂದ ಚೀನಾಗೆ ಸಾಗಿಸುತ್ತಿದ್ದ ರೇಡಿಯೋಆ್ಯಕ್ಟಿವ್ ಕಂಟೇನರ್​ಗಳು ಗುಜರಾತ್​ನಲ್ಲಿ ವಶಕ್ಕೆ

ಪಾಕಿಸ್ತಾನದ ಕರಾಚಿಯಿಂದ ಗುಜರಾತ್‌ನ ಮುಂದ್ರಾ ಬಂದರಿನ ಮೂಲಕ ಚೀನಾಕ್ಕೆ ರವಾನಿಸುತ್ತಿದ್ದ ರೇಡಿಯೋಆ್ಯಕ್ಟೀವ್ ಸಾಮಗ್ರಿಗಳ ಕಂಟೇನರ್‌ಗಳನ್ನು ಗುಜರಾತ್ ಕರಾವಳಿಯ ಮುಂದ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿದೆ.

ಪಾಕಿಸ್ತಾನದಿಂದ ಚೀನಾಗೆ ಸಾಗಿಸುತ್ತಿದ್ದ ರೇಡಿಯೋಆ್ಯಕ್ಟಿವ್ ಕಂಟೇನರ್​ಗಳು ಗುಜರಾತ್​ನಲ್ಲಿ ವಶಕ್ಕೆ
ಮಂದ್ರಾ ಬಂದರು
Follow us
S Chandramohan
| Updated By: ಸುಷ್ಮಾ ಚಕ್ರೆ

Updated on:Nov 20, 2021 | 3:28 PM

ನವದೆಹಲಿ: ಪಾಕಿಸ್ತಾನದಿಂದ ಭಾರತದ ಜಲಪ್ರದೇಶದ ಮೂಲಕ ಚೀನಾದ ಶಾಂಘೈಗೆ ಹೋಗುತ್ತಿದ್ದ ರೇಡಿಯೋ ಆ್ಯಕ್ಟೀವ್ ಕಂಟೇನರ್ ಗಳನ್ನು ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿದೆ. ಈ ರೇಡಿಯೋ ಆ್ಯಕ್ಟೀವ್ ಸಾಮಗ್ರಿ ಬಗ್ಗೆ ಈಗ ರೆವಿನ್ಯೂ ಇಂಟಲಿಜೆನ್ಸ್ ಹಾಗೂ ಅಟಾಮಿಕ್ ಎನರ್ಜಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೇಡಿಯೋ ಆ್ಯಕ್ಟೀವ್ ಪ್ರಮಾಣ ಎಷ್ಟು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆದರೇ, ಈ ರೇಡಿಯೋ ಆ್ಯಕ್ಟೀವ್ ಸಾಮಗ್ರಿಗಳನ್ನು ಭಾರತದ ಬಂದರುಗಳಿಗೆ ಕಳಿಸುತ್ತಿರಲಿಲ್ಲ. ಆದರೇ, ಇದರ ಬಗ್ಗೆ ಈಗ ಭಾರತದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪಾಕಿಸ್ತಾನದ ಕರಾಚಿಯಿಂದ ಗುಜರಾತ್‌ನ ಮುಂದ್ರಾ ಬಂದರಿನ ಮೂಲಕ ಚೀನಾಕ್ಕೆ ರವಾನಿಸುತ್ತಿದ್ದ ರೇಡಿಯೋಆ್ಯಕ್ಟೀವ್ ಸಾಮಗ್ರಿಗಳ ಕಂಟೇನರ್‌ಗಳನ್ನು ಗುಜರಾತ್ ಕರಾವಳಿಯ ಮುಂದ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿದೆ. ಕಸ್ಟಮ್ಸ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಿಂದ ಚೀನಾಕ್ಕೆ ಅಪಾಯಕಾರಿ ರೇಡಿಯೋಆ್ಯಕ್ಟೀವ್ ಸಾಮಗ್ರಿಗಳನ್ನು ಸಾಗಿಸುವ ಕಂಟೇನರ್‌ಗಳ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎರಡು ದಿನಗಳ ಕಾರ್ಯಾಚರಣೆಯ ನಂತರ ಚೀನಾದ ಶಾಂಘೈಗೆ ಹೊರಟಿದ್ದ ಸರಕುಗಳನ್ನು ಭಾರತದ ಜಲಪ್ರದೇಶದಲ್ಲಿ ತಡೆದು ಮುಂದ್ರಾ ಬಂದರಿಗೆ ಕೊಂಡೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.

ಸರಕುಗಳ ನಿಖರವಾದ ಸ್ವರೂಪವು ತಕ್ಷಣವೇ ತಿಳಿದಿಲ್ಲವಾದರೂ, ಅನಾಮಧೇಯತೆಯ ಷರತ್ತಿನ ಮೇಲೆ ವಿಷಯವನ್ನು ಅಪಾಯದ ವರ್ಗ 7 ಎಂದು ವರ್ಗೀಕರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ನಿರ್ದಿಷ್ಟ ವರ್ಗವು ಪುಷ್ಟೀಕರಿಸಿದ ಯುರೇನಿಯಂನಂತಹ ರೇಡಿಯೋಆ್ಯಕ್ಟೀವ್ ಸಾಮಗ್ರಿಗಳ ಜೊತೆಗೆ ವ್ಯವಹರಿಸುತ್ತದೆ. ಪರಮಾಣು ಶಕ್ತಿ ಇಲಾಖೆ (ಡಿಎಇ) ಪ್ರಸ್ತುತ ರೇಡಿಯೋ ಆ್ಯಕ್ಟೀವ್ ಪ್ರಮಾಣವನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿ ಹೇಳಿದರು.

ಕರಾಚಿಯಿಂದ ಶಾಂಘೈಗೆ ಕಂಟೇನರ್‌ಗಳು ಹೋಗುತ್ತಿವೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಸಂಸ್ಥೆಗಳಿಗೆ ಸಿಕ್ಕಿತ್ತು. ಕಂಟೇನರ್‌ ಅನ್ನು ಗುಜರಾತ್ ಕರಾವಳಿಯಲ್ಲಿ ಅಧಿಕಾರಿಗಳು ತಡೆದರು ಮತ್ತು ಮುಂದ್ರಾ ಬಂದರಿನ ಕಡೆಗೆ ತೆರಳಲು ಸೂಚಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಘೋಷಿತವಾದ ರೇಡಿಯೋಆ್ಯಕ್ಟೀವ್‌ ಸಾಮಗ್ರಿಗಳ ಬಗ್ಗೆಯೂ ಎಚ್ಚರಿಕೆಯ ಸುಳಿವು ನೀಡಿದೆ. ಈ ಏಳು ಕಂಟೇನರ್‌ಗಳಲ್ಲಿ ರವಾನೆಯಾಗಿರುವ ವಸ್ತುವನ್ನು ಅಧಿಕಾರಿಗಳು ಪ್ರಸ್ತುತ ವಿಶ್ಲೇಷಿಸುತ್ತಿದ್ದಾರೆ. ಅಗತ್ಯವಿದ್ದರೆ ವಿವಿಧ ಏಜೆನ್ಸಿಗಳ ತನಿಖಾಧಿಕಾರಿಗಳನ್ನು ತನಿಖೆಗೆ ಸೇರ್ಪಡೆ ಆಗಲು ಮನವಿ ಮಾಡಲಾಗುತ್ತೆದೆ. ಒಂದು ಹೇಳಿಕೆಯಲ್ಲಿ, ಮುಂದ್ರಾ ಬಂದರನ್ನು ನಿರ್ವಹಿಸುವ ಅದಾನಿ ಪೋರ್ಟ್ಸ್ ಸರಕುಗಳನ್ನು “ಅಪಾಯಕಾರಿಯಲ್ಲ” ಎಂದು ಪಟ್ಟಿ ಮಾಡಿದೆ. ಭಾರತದ ಯಾವುದೇ ಬಂದರಿಗೆ ಈ ರೇಡಿಯೋ ಆ್ಯಕ್ಟೀವ್‌ ಸಾಮಗ್ರಿ ಕಳಿಸುತ್ತಿರಲಿಲ್ಲ ಎಂದು ಹೇಳಿದೆ.

ನವೆಂಬರ್ 18ರಂದು ಜಂಟಿ ಕಸ್ಟಮ್ಸ್ ಮತ್ತು DRI ತಂಡವು ಮುಂದ್ರಾ ಬಂದರಿನಲ್ಲಿ ವಿದೇಶಿ ಹಡಗಿನಿಂದ ಹಲವಾರು ಕಂಟೇನರ್‌ಗಳಲ್ಲಿ ಅಘೋಷಿತ ಅಪಾಯಕಾರಿ ಸರಕುಗಳನ್ನು ಹೊಂದಿದೆ ಎಂಬ ಕಳವಳದ ಮೇಲೆ ವಶಪಡಿಸಿಕೊಂಡಿತು. ಸರಕನ್ನು ಅಪಾಯಕಾರಿಯಲ್ಲ ಎಂದು ಪಟ್ಟಿ ಮಾಡಲಾಗಿದ್ದರೂ, ವಶಪಡಿಸಿಕೊಂಡ ಕಂಟೈನರ್‌ಗಳು ಅಪಾಯದ ವರ್ಗ 7 ಗುರುತು ಹೊಂದಿದ್ದವು (ಇದು ರೇಡಿಯೋಆ್ಯಕ್ಟೀವ್‌ ವಸ್ತುಗಳನ್ನು ಸೂಚಿಸುತ್ತದೆ). ಕಂಟೇನರ್‌ಗಳು ಮುಂದ್ರಾ ಬಂದರು ಅಥವಾ ಭಾರತದ ಯಾವುದೇ ಬಂದರಿಗೆ ಉದ್ದೇಶಿಸಿಲ್ಲವಾದರೂ, ಪಾಕಿಸ್ತಾನದ ಕರಾಚಿಯಿಂದ ಚೀನಾದ ಶಾಂಘೈಗೆ ಹೋಗುವ ಮಾರ್ಗದಲ್ಲಿದ್ದರೂ, ಹೆಚ್ಚಿನ ತಪಾಸಣೆಗಾಗಿ ಸರ್ಕಾರಿ ಅಧಿಕಾರಿಗಳು ಅವುಗಳನ್ನು ಮುಂದ್ರಾ ಬಂದರಿನಲ್ಲಿ ಅನ್​ಲೋಡ್ ಮಾಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಕಳೆದ ವರ್ಷ ಡಿಆರ್‌ಐ ದಾಖಲಿಸಿದ ಇದೇ ರೀತಿಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಿತ್ತು, ಇದರಲ್ಲಿ ಕರಾಚಿಗೆ ಉದ್ದೇಶಿಸಲಾದ ‘ಡಾ ಕುಯಿ ಯುನ್’ ಎಂದು ಗುರುತಿಸಲಾದ ನೌಕೆಯು ಕ್ಷಿಪಣಿಗಳನ್ನು ಉಡಾಯಿಸಲು ಬಳಸುವ ಪ್ರೆಶರ್ ಚೇಂಬರ್ ಅನ್ನು ಹೊಂದಿತ್ತು. ಸಾಮೂಹಿಕ ವಿನಾಶ ಮತ್ತು ವಿತರಣಾ ವ್ಯವಸ್ಥೆಗಳ ಶಸ್ತ್ರಾಸ್ತ್ರಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆ, 2005ರ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ ಇತರ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ; ಆಹಾರ ಪದ್ಧತಿ ಬಗ್ಗೆ ಸ್ಪಷ್ಟನೆ ನೀಡಿದ ಗುಜರಾತ್​ ಸಿಎಂ

India-China Border: ಗಡಿ ಒಪ್ಪಂದ ಉಲ್ಲಂಘನೆಗೆ ಚೀನಾ ಸೂಕ್ತ ವಿವರಣೆ ನೀಡಿಲ್ಲ; ಕೇಂದ್ರ ಸಚಿವ ಜೈಶಂಕರ್

Published On - 3:27 pm, Sat, 20 November 21