India-China Border: ಗಡಿ ಒಪ್ಪಂದ ಉಲ್ಲಂಘನೆಗೆ ಚೀನಾ ಸೂಕ್ತ ವಿವರಣೆ ನೀಡಿಲ್ಲ; ಕೇಂದ್ರ ಸಚಿವ ಜೈಶಂಕರ್

ಉಭಯ ದೇಶಗಳ ಸಂಬಂಧವನ್ನು ಬೀಜಿಂಗ್ ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬುದಕ್ಕೆ ಚೀನಾ ನಾಯಕರೇ ಉತ್ತರ ನೀಡಬೇಕು ಎಂದು ಸಚಿವ ಜೈಶಂಕರ್ ತಿಳಿಸಿದ್ದಾರೆ.

India-China Border: ಗಡಿ ಒಪ್ಪಂದ ಉಲ್ಲಂಘನೆಗೆ ಚೀನಾ ಸೂಕ್ತ ವಿವರಣೆ ನೀಡಿಲ್ಲ; ಕೇಂದ್ರ ಸಚಿವ ಜೈಶಂಕರ್
ಕೇಂದ್ರ ಸಚಿವ ಜೈಶಂಕರ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 19, 2021 | 4:11 PM

ನವದೆಹಲಿ: ಭಾರತ- ಚೀನಾ ಗಡಿಯಲ್ಲಿ ಒಪ್ಪಂದಗಳನ್ನು ಉಲ್ಲಂಘನೆ ಮಾಡಿ ಬೀಜಿಂಗ್ ಹಲವು ಕ್ರಮಗಳನ್ನು ಕೈಗೊಂಡಿರುವುದರಿಂದ ಭಾರತ ಮತ್ತು ಚೀನಾದ ಸಂಬಂಧಗಳು ಇನ್ನೂ ಸರಿಯಾಗಿಲ್ಲ. ಒಪ್ಪಂದಗಳನ್ನು ಉಲ್ಲಂಘಿಸಿರುವ ಚೀನಾ ಇದುವರೆಗೂ ಆ ಬಗ್ಗೆ ಸೂಕ್ತವಾದ ವಿವರಣೆ ನೀಡಿಲ್ಲ. ಈ ಮೂಲಕ ಚೀನಾ ಸರ್ಕಾರ  (China Government) ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುತ್ತಿದೆ ಎಂಬುದಕ್ಕೆ ಉತ್ತರಿಸಬೇಕು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಹೇಳಿದ್ದಾರೆ.

ಚೀನಾ ಭಾರತದೊಂದಿಗಿನ ಸಂಬಂಧದ ಬಗ್ಗೆ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ. ಎರಡೂ ದೇಶಗಳ ಸಂಬಂಧ ಸರಿಯಾದ ಮಾರ್ಗದಲ್ಲಿ ಸಾಗುತ್ತಿಲ್ಲ ಎಂದು ಚೀನಾಗೂ ಗೊತ್ತಿದೆ. ಕಳೆದ ವರ್ಷ ಮೇ 5ರಂದು ಪಾಂಗೊಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವಿನ ಪೂರ್ವ ಲಡಾಖ್ ಗಡಿ ಸ್ಟ್ಯಾಂಡ್‌ಆಫ್ ಸ್ಫೋಟಗೊಂಡಿತು. ಅದರಿಂದ ಎರಡೂ ಕಡೆಯವರು ಕ್ರಮೇಣ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜನೆ ಮಾಡುವ ಮೂಲಕ ಭದ್ರತೆಯನ್ನು ಹೆಚ್ಚಿಸಿದರು.

ಕಳೆದ ವರ್ಷ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಘರ್ಷಣೆಯ ನಂತರ ಉದ್ವಿಗ್ನತೆ ಉಲ್ಬಣಗೊಂಡಿತು. ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಸರಣಿಯ ಪರಿಣಾಮವಾಗಿ, ಫೆಬ್ರವರಿಯಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ ಮತ್ತು ಆಗಸ್ಟ್‌ನಲ್ಲಿ ಗೊಗ್ರಾ ಪ್ರದೇಶದಲ್ಲಿ ಉಭಯ ಪಕ್ಷಗಳು ವಿಭಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವು. ಅಕ್ಟೋಬರ್ 10 ರಂದು ಈ ಬಿಕ್ಕಟ್ಟು ಕೊನೆಯ ಸುತ್ತಿನ ಮಿಲಿಟರಿ ಮಾತುಕತೆಯಿಂದ ಕೊನೆಗೊಂಡಿತು.

ಉಭಯ ದೇಶಗಳ ಸಂಬಂಧವನ್ನು ಬೀಜಿಂಗ್ ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬುದಕ್ಕೆ ಚೀನಾ ನಾಯಕರೇ ಉತ್ತರ ನೀಡಬೇಕು. ನಾನು ಚೀನಾದ ವಿದೇಶಾಂಗ ಸಚಿವರ ಜೊತೆಯೂ ಹಲವು ಬಾರಿ ಮಾತಾಡಿದ್ದೇನೆ. ಗಡಿಯ ಪರಿಸ್ಥಿತಿ ಬಗ್ಗೆ ಸ್ಪಷ್ಟವಾಗಿಯೇ ತಿಳಿಸಿದ್ದೇನೆ ಎಂದು ಸಚಿವ ಜೈಶಂಕರ್ ತಿಳಿಸಿದ್ದಾರೆ.

ಭಾರತ- ಚೀನಾ ದೇಶಗಳ ಗಡಿಯಲ್ಲಿ ಭಾರತದ ಪ್ರದೇಶವನ್ನು ಅತಿಕ್ರಮಣದ ಮೂಲಕ ಸ್ವಾಧೀನಕ್ಕೆ ತೆಗೆದುಕೊಳ್ಳಲು ಚೀನಾ ಹವಣಿಸುತ್ತಲೇ ಇದೆ.  ಇದರ ನಡುವೆ ಚೀನಾ ಸೇನೆ ಅರುಣಾಚಲ ಪ್ರದೇಶದಲ್ಲಿ 60 ಕಟ್ಟಡಗಳ ಸಂಕೀರ್ಣವನ್ನು ನಿರ್ಮಿಸಿದೆ. ವಾಸ್ತವಿಕ ಗಡಿ ರೇಖೆ (ಎಲ್‌ಎಸಿ)ಯಿಂದ 6 ಕಿ. ಮೀ. ಒಳಗಡೆ ಭಾರತದ ಪ್ರದೇಶದಲ್ಲಿರುವ ಶಿ ಯೊಮಿ ಜಿಲ್ಲೆಯಲ್ಲಿ ಚೀನಾ ಸಣ್ಣ ಗ್ರಾಮ ನಿರ್ಮಿಸಿರುವುದು ಉಪಗ್ರಹಗಳ ಚಿತ್ರಗಳಿಂದ ದೃಢಪಟ್ಟಿದೆ. ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಘರ್ಷಣೆಯ ಕೇಂದ್ರಬಿಂದು ಪ್ರದೇಶದಿಂದ ಸಂಪೂರ್ಣವಾಗಿ ಸೇನೆಯನ್ನು ವಾಪಾಸ್ ಪಡೆಯುವ ಉದ್ದೇಶಕ್ಕಾಗಿ ಶೀಘ್ರದಲ್ಲಿಯೇ 14ನೇ ಸುತ್ತಿನ ಮಾತುಕತೆ ನಡೆಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.

ಇದನ್ನೂ ಓದಿ: Air Pollution: ವಾಯು ಮಾಲಿನ್ಯದಿಂದ ಕುಸಿಯುತ್ತಿದೆ ಮನುಷ್ಯರ ಆಯುಷ್ಯ; ಮಾಲಿನ್ಯದಿಂದ ಚೀನಾ ಬಚಾವಾಗಿದ್ದು ಹೇಗೆ?

ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಪೂರಕ ಕ್ರಮ: ಗೊಗ್ರಾದಿಂದ ಸೇನೆ ಹಿಂದೆ ಕರೆಸಿಕೊಳ್ಳಲು ಭಾರತ-ಚೀನಾ ನಿರ್ಧಾರ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ