
ನವದೆಹಲಿ, ಮೇ 5: ಒಂದು ದೇಶದ ಆರ್ಥಿಕತೆ ಉತ್ತಮವಾಗಿ ಬೆಳೆಯಬೇಕಾದರೆ ಮೂಲಸೌಕರ್ಯ (Infrastructure) ಉತ್ತಮವಾಗಿರಬೇಕು. ಇಂಥ ಮೂಲಸೌಕರ್ಯಗಳಲ್ಲಿ ರಸ್ತೆಯೂ ಒಳಗೊಂಡಿರುತ್ತದೆ. ಭಾರತ ಕಳೆದ ಕೆಲ ವರ್ಷಗಳಿಂದ ರಸ್ತೆ ಮತ್ತು ರೈಲು ಇನ್ಫ್ರಾಸ್ಟ್ರಕ್ಚರ್ ಅನ್ನು ಬಲಪಡಿಸುತ್ತಾ ಬಂದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ರಸ್ತೆ ನಿರ್ಮಾಣದ ವೇಗ ಉತ್ತಮವೇ ಇದೆ. ಚೀನಾ ಬಿಟ್ಟರೆ ಭಾರತವೇ ರಸ್ತೆ ನಿರ್ಮಾಣದಲ್ಲಿ ಸೈ ಎನಿಸಿರುವುದು. ಫೈನಾನ್ಷಿಯಲ್ ಟೈಮ್ಸ್ನಲ್ಲಿ ಬಂದ ವರದಿಯೊಂದು, ವಿವಿಧ ದೇಶಗಳು ಕಳೆದ 10 ವರ್ಷದಲ್ಲಿ ರಸ್ತೆ ನಿರ್ಮಾಣದಲ್ಲಿ ಎಷ್ಟು ಪ್ರಗತಿ ಸಾಧಿಸಿವೆ ಎನ್ನುವ ವಿಚಾರದ ಮೇಲೆ ಬೆಳಕು ಚೆಲ್ಲಿದೆ.
ಚೀನಾದ ರಸ್ತೆ ಜಾಲ ವಿಶ್ವದಲ್ಲೇ ಅತ್ಯುತ್ತಮ ಎನಿಸಿದೆ. ಕಳೆದ 10 ವರ್ಷದಲ್ಲಿ ಚೀನಾ ಬರೋಬ್ಬರಿ 50,000 ಕಿಮೀಯಷ್ಟು ದೂರದ ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸಿದೆಯಂತೆ. 2013ರಲ್ಲಿ ಚೀನಾದಲ್ಲಿ 1,27,000 ಕಿಮೀ ಎಕ್ಸ್ಪ್ರೆಸ್ವೇಗಳಿದ್ದುವು. 2023ರಲ್ಲಿ ಅದು 1,77,000 ಕಿಮೀಗೆ ಏರಿದೆ. ಹೊಸದಾಗಿ ನಿರ್ಮಿಸಲಾದ ಎಕ್ಸ್ಪ್ರೆಸ್ವೇಗಳಲ್ಲಿ 18,400 ಕಿಮೀಯಷ್ಟು ರಸ್ತೆಗಳು ಷಟ್ಪಥ ರಸ್ತೆಗಳಾಗಿವೆ. ಇದರೊಂದಿಗೆ ಚೀನಾ ವಿಶ್ವದ ಅತಿದೊಡ್ಡ ಎಕ್ಸ್ಪ್ರೆಸ್ವೇ ಜಾಲ ಇರುವ ದೇಶವೆನಿಸಿದೆ.
ಭಾರತದಲ್ಲಿ ಎಕ್ಸ್ಪ್ರೆಸ್ವೇಗಳು ಇತ್ತೀಚೆಗೆ ನಿರ್ಮಾಣ ಆಗತೊಡಗಿವೆ. ಇಲ್ಲಿಯವರೆಗೆ 2,138 ಕಿಮೀಯಷ್ಟು ಎಕ್ಸ್ಪ್ರೆಸ್ವೇಗಳು ಸಂಚಾರಕ್ಕೆ ತೆರೆದುಕೊಂಡಿವೆ. ಚೀನಾದ 1.77 ಲಕ್ಷ ಕಿಮೀಗೆ ಹೋಲಿಸಿದರೆ ಭಾರತದ ಎಕ್ಸ್ಪ್ರೆಸ್ವೇ ಜಾಲ ಇನ್ನೂ ಆರಂಭಿಕ ಹಂತದಲ್ಲಿದೆ.
ಇದನ್ನೂ ಓದಿ: ಭಾರತದ ಜೊತೆ ಹೀಗೆ ಕಿತ್ತಾಡ್ತಿದ್ರೆ ನಾಶವಾಗಿಬಿಡ್ತೀರಿ: ಪಾಕಿಸ್ತಾನಕ್ಕೆ ಮೂಡೀಸ್ ಎಚ್ಚರಿಕೆ
ಆದರೆ, ಹೆದ್ದಾರಿ ನಿರ್ಮಾಣದಲ್ಲಿ ಭಾರತ ಮುಂಚೂಣಿಯಲ್ಲಿದೆ. 2014ರಲ್ಲಿ ಭಾರತದ ಹೆದ್ದಾರಿ ನೆಟ್ವರ್ಕ್ 91,284 ಕಿಮೀಯಷ್ಟಿತ್ತು. 2023ರಲ್ಲಿ ಅದು 1,46,145 ಕಿಮೀಗೆ ವಿಸ್ತರಿಸಿದೆ. ಹತ್ತು ವರ್ಷದಲ್ಲಿ ಹೆದ್ದಾರಿಗಳು 54,858 ಕಿಮೀಯಷ್ಟು ಏರಿಕೆ ಆಗಿವೆ. ಮುಂಬರುವ ಕೆಲ ವರ್ಷಗಳಲ್ಲಿ 34,800 ಹೊಸ ಹೆದ್ದಾರಿಗಳ ನಿರ್ಮಾಣ ಆಗುವ ಸಾಧ್ಯತೆ ಇದೆ.
ಕಳೆದ 10 ವರ್ಷದಲ್ಲಿ ಯಾವ್ಯಾವ ದೇಶಗಳು ಎಷ್ಟು ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸಿವೆ ಎನ್ನುವ ವಿವರ ಈ ಕೆಳಕಂಡಂತಿದೆ:
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ
ಯುನೈಟೆಡ್ ಕಿಂಗ್ಡಂ ಅಥವಾ ಬ್ರಿಟನ್ನಲ್ಲಿ ಕಳೆದ 10 ವರ್ಷದಲ್ಲಿ ಕೇವಲ 105 ಕಿಮೀಯಷ್ಟು ಮಾತ್ರ ಎಕ್ಸ್ಪ್ರೆಸ್ವೇಗಳು ನಿರ್ಮಾಣ ಆಗಿವೆ. 1990ರಿಂದ ಈಚೆಗೆ ನಿರ್ಮಾಣ ಆಗಿರುವುದು ಕೇವಲ 679 ಕಿಮೀ ಮಾತ್ರ. ಈ ದೇಶದಲ್ಲಿ ಪರಿಸರವಾದಿಗಳು ಪ್ರಬಲವಾಗಿದ್ದಾರೆ. ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆಕ್ಷೇಪಿಸಿ ಇಲ್ಲಿ ರಸ್ತೆ ಅಭಿವೃದ್ಧಿಗೆ ತಡೆಗಳು ಒಡ್ಡುತ್ತಿದ್ದಾರೆ. ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಮರಗಿಡಗಳನ್ನು ನಾಶ ಮಾಡಬೇಕಾಗಬಹುದು. ಹೀಗಾಗಿ, ವಿರೋಧ ಹೆಚ್ಚು. ಇದೇ ಕಾರಣಕ್ಕೆ 35 ವರ್ಷಗಳಿಂದ ಬ್ರಿಟನ್ನಲ್ಲಿ ಎಕ್ಸ್ಪ್ರೆಸ್ವೇ ಪ್ರಾಜೆಕ್ಟ್ಗಳು ಆಮೆಗತಿಯಿಂದ ಸಾಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ