AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜೊತೆ ಹೀಗೆ ಕಿತ್ತಾಡ್ತಿದ್ರೆ ನಾಶವಾಗಿಬಿಡ್ತೀರಿ: ಪಾಕಿಸ್ತಾನಕ್ಕೆ ಮೂಡೀಸ್ ಎಚ್ಚರಿಕೆ

Moody's report on India Pakistan tension: ಪಹಲ್ಗಾಂ ಉಗ್ರ ದಾಳಿ ಘಟನೆ ಬಳಿಕ ಪಾಕಿಸ್ತಾನದ ಮೇಲೆ ಭಾರತ ನಾನಾ ರೀತಿಯಲ್ಲಿ ಒತ್ತಡ ಹಾಕಿ ಪಾಠ ಕಲಿಸಲು ಯತ್ನಿಸಿದೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗುವ ಹಂತಕ್ಕೆ ಬರುವ ಸಾಧ್ಯತೆ ಇದೆ. ರೇಟಿಂಗ್ ಏಜೆನ್ಸಿಯಾದ ಮೂಡೀಸ್ ಕೂಡ ಇಂಥದ್ದೇ ರೀತಿಯ ವಾರ್ನಿಂಗ್ ನೀಡಿದೆ.

ಭಾರತದ ಜೊತೆ ಹೀಗೆ ಕಿತ್ತಾಡ್ತಿದ್ರೆ ನಾಶವಾಗಿಬಿಡ್ತೀರಿ: ಪಾಕಿಸ್ತಾನಕ್ಕೆ ಮೂಡೀಸ್ ಎಚ್ಚರಿಕೆ
ಪಾಕಿಸ್ತಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2025 | 5:46 PM

Share

ಇಸ್ಲಾಮಾಬಾದ್, ಮೇ 5: ಆರ್ಥಿಕ ಸಂಕಷ್ಟದಿಂದ ಸ್ವಲ್ಪಸ್ವಲ್ಪವೆ ಚೇತರಿಸಿಕೊಳ್ಳುತ್ತಿರುವ ಪಾಕಿಸ್ತಾನ ಈಗ ಪಹಲ್ಗಾಂ ಉಗ್ರ ದಾಳಿ (pahalgam terror attack) ಘಟನೆಯ ಗಾಳಕ್ಕೆ ಸಿಕ್ಕು ಭಾರತದ ಕೆಂಗಣಿಗೆ ಪಾತ್ರವಾಗಿದೆ. ಎಲ್ಲಾ ರೀತಿಯಿಂದ ಪಾಕಿಸ್ತಾನವನ್ನು ಒತ್ತಡಕ್ಕೆ ಸಿಲುಕಿಸಲು ಭಾರತ ಪ್ರಯತ್ನಿಸುತ್ತಿದೆ. ಇದು ಪಾಕಿಸ್ತಾನದ ಮೇಲೆ ದೂರಗಾಮಿಯಾಗಿ ಸಾಕಷ್ಟು ಕೆಟ್ಟ ಪರಿಣಾಮ ಬೀರಬಹುದು ಎಂದು ಹಲವರು ಎಚ್ಚರಿಸಿದ್ದಾರೆ. ಮೂಡೀಸ್ ಎನ್ನುವ ರೇಟಿಂಗ್ ಏಜೆನ್ಸಿ ಪ್ರಕಾರ, ಭಾರತದೊಂದಿಗೆ ಇದೇ ರೀತಿಯಲ್ಲಿ ಸಂಘರ್ಷಮಯ ವಾತಾವರಣ ಮುಂದುವರಿದಲ್ಲಿ ಪಾಕಿಸ್ತಾನದ ದುರ್ಬಲ ಆರ್ಥಿಕತೆ ಚೆಲ್ಲಾಪಿಲ್ಲಿ ಆಗಲಿದೆಯಂತೆ.

ಇತ್ತೀಚಿನ ರಾಜತಾಂತ್ರಿಕ ಮತ್ತು ಭದ್ರತಾ ವಿದ್ಯಮಾನಗಳು ಪಾಕಿಸ್ತಾನದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಸಾಕಷ್ಟು ಹಾಳುಗೆಡವುವ ಅಪಾಯ ಇದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್​​ನ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ

ಇದನ್ನೂ ಓದಿ
Image
ಉತ್ತಮ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ: ಸಿಇಎ
Image
ಐಎಂಎಫ್​​​ಗೆ ಅಯ್ಯರ್; ಪಾಕಿಸ್ತಾನಕ್ಕೆ ಇದೆಯಾ ಆಪತ್ತು?
Image
ಯುದ್ಧಕ್ಕೆ ನಿಂತ್ರೆ ಪಾಕಿಸ್ತಾನ ಬದುಕೋದು 4 ದಿನ ಮಾತ್ರ?
Image
ಪಾಕಿಸ್ತಾನ ವಿರುದ್ಧ ಒಂದೇ ದಿನ 3 ಅಸ್ತ್ರ ಬಿಟ್ಟ ಭಾರತ

‘ಭಾರತದೊಂದಿಗೆ ಸಂಘರ್ಷವನ್ನು ಮುಂದುವರಿಸಿದರೆ, ಅದು ಪಾಕಿಸ್ತಾನದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಹಣಕಾಸು ಚೇತರಿಕೆಗೆ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ವ್ಯರ್ಥವಾಗಬಹುದು. ಸ್ಥೂಲ ಆರ್ಥಿಕ ಸ್ಥಿರತೆ ಸಾಧಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು,’ ಎಂದು ಮೂಡೀಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಕೋವಿಡ್ ಬಳಿಕ ಪಾಕಿಸ್ತಾನದ ಆರ್ಥಿಕತೆ ನೆಲಕಚ್ಚಿದ್ದು, ಇತ್ತೀಚೆಗಷ್ಟೇ ಚೇತರಿಸಿಕೊಂಡಿದೆ. ಅದರಲ್ಲೂ ಐಎಂಎಫ್​​ನಿಂದ ಸಾಲ ಸಿಕ್ಕ ಬಳಿಕ ಒಂದಷ್ಟು ಚೇತರಿಕೆ ಸಾಧ್ಯವಾಗಿದೆ. ಪಾಕಿಸ್ತಾನದ ಆಡಳಿತ ಮತ್ತು ಆರ್ಥಿಕ ನೀತಿಯಲ್ಲಿ ಬದಲಾವಣೆ ಮಾಡಲಾಗಿದ್ದರಿಂದ ಐಎಂಎಫ್ ಸಾಲ ನೀಡಲು ಒಪ್ಪಿತ್ತು. ಈಗ ಪಾಕಿಸ್ತಾನವು ಭಾರತದ ಜೊತೆಗೆ ಕಿತಾಪತಿ ಮಾಡಿಕೊಂಡು ಇದ್ದರೆ ಹೊರಗಿನಿಂದ ಮತ್ತೆ ದೊಡ್ಡ ಸಾಲ ಸಿಗುವುದು ಕಷ್ಟ.

ಇದನ್ನೂ ಓದಿ: ಆಮದು, ಬಂದರು, ಅಂಚೆ ನಿರ್ಬಂಧ… ಪಾಕಿಸ್ತಾನ ವಿರುದ್ಧ ಒಂದೇ ದಿನ ಭಾರತದಿಂದ 3 ಕ್ರಮ

ಪಾಕಿಸ್ತಾನದ ಬಳಿ ಸಾಕಷ್ಟು ಸಾಲ ಇದ್ದು, ಕಾಲ ಕಾಲಕ್ಕೆ ಸಾಲದ ಕಂತುಗಳನ್ನು ಕಟ್ಟಬೇಕಾಗುತ್ತದೆ. ಈ ಕಂತುಗಳನ್ನು ಕಟ್ಟಬೇಕಾದರೆ ಮತ್ತೆ ಹೊಸ ಬಾಹ್ಯ ಸಾಲಗಳು ಅಗತ್ಯ ಇವೆ. ಹೊರಗಿನಿಂದ ಸಾಲ ಸಿಗದೇ ಹೋದರೆ ಪಾಕಿಸ್ತಾನವು ಸಾಲದ ಕಂತು ಕಟ್ಟಲು ಆಗದೇ ಹೋಗಬಹುದು. ಹಾಗೇನಾದರೂ ಆದರೆ ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟ ಎದುರಾಗಬಹುದು.

ಭಾರತದ ಜೊತೆ ಪಾಕಿಸ್ತಾನವೇನಾದರೂ ಪೂರ್ಣಪ್ರಮಾಣದಲ್ಲಿ ಯುದ್ಧಕ್ಕೆ ಇಳಿದಲ್ಲಿ ಆರ್ಥಿಕತೆ ಅಧಃಪತನಗೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ