AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್ ಆಫ್ ಬರೋಡಾದಲ್ಲಿ ಗೃಹಸಾಲ ದರ ಶೇ. 8ರಿಂದ ಆರಂಭ; ಯುವಕರು, ಮಹಿಳೆಯರಿಗೆ ಇನ್ನೂ ಕಡಿಮೆ

Bank of Baroda home loan interest rates starts from 8%: ಬ್ಯಾಂಕ್ ಆಫ್ ಬರೋಡಾದಲ್ಲ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲಾಗಿದೆ. ಈಗ ವರ್ಷಕ್ಕೆ ಶೇ. 8ರ ದರದೊಂದಿಗೆ ಗೃಹಸಾಲ ಆರಂಭವಾಗುತ್ತದೆ. ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿದ್ದರೆ ಕನಿಷ್ಠ ಬಡ್ಡಿದರದಲ್ಲಿ ಹೋಮ್ ಲೋನ್ ನೀಡಲಾಗುತ್ತದೆ. ಮಹಿಳೆಯರು ಮತ್ತು 40 ವರ್ಷದೊಳಗಿನ ವಯಸ್ಸಿನ ಯುವಜನರಿಗೆ ಇನ್ನೂ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಗೃಹಸಾಲ ದರ ಶೇ. 8ರಿಂದ ಆರಂಭ; ಯುವಕರು, ಮಹಿಳೆಯರಿಗೆ ಇನ್ನೂ ಕಡಿಮೆ
ಬ್ಯಾಂಕ್ ಆಫ್ ಬರೋಡಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 05, 2025 | 7:13 PM

Share

ನವದೆಹಲಿ, ಮೇ 5: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ಗೃಹಸಾಲಗಳ ದರಗಳನ್ನು (Home loan rates) ಇಳಿಸಿದೆ. ಕಳೆದ ತಿಂಗಳು ಆರ್​​ಬಿಐ ರಿಪೋ ದರ ಇಳಿಸಿದ ಬೆನ್ನಲ್ಲೇ ಬಿಒಬಿ ತನ್ನ ಸಾಲದ ದರಗಳನ್ನು ಕಡಿಮೆಗೊಳಿಸಿದೆ. ಗೃಹಸಾಲಗಳಿಗೆ ಅದು ಈ ಮೊದಲು ವರ್ಷಕ್ಕೆ ವಿಧಿಸುತ್ತಿದ್ದ ಬಡ್ಡಿದರ ಶೇ. 8.40ರಿಂದ ಆರಂಭವಾಗುತ್ತಿತ್ತು. ಈಗ ಈ ಕನಿಷ್ಠ ಬಡ್ಡಿದರವನ್ನು ಶೇ. 8ಕ್ಕೆ ಇಳಿಸಿದೆ. ಹೊಸ ಮನೆಗಳಿಗೆ ಸಾಲ ಹಾಗೂ ಗೃಹ ನವೀಕರಣಕ್ಕೆ ಸಾಲಗಳಿಗೆ ಈ ಹೊಸ ದರಗಳು ಅನ್ವಯ ಆಗುತ್ತವೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಮಹಿಳೆಯರು, ಯುವಜನರಿಗೆ ಕಡಿಮೆ ಬಡ್ಡಿ

15 ಲಕ್ಷ ರೂಗೂ ಮೇಲ್ಪಟ್ಟ ಸಾಲಗಳಿಗೆ ಹೊಸ ಬಡ್ಡಿದರ ಅನ್ವಯ ಆಗುತ್ತದೆ. 40 ವರ್ಷದೊಳಗಿನ ವಯಸ್ಸಿನ ಯುವಜನರಿಗೆ 10 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆ ಮಾಡಲಾಗುತ್ತದೆ. ಮಹಿಳೆಯರಾದರೆ 5 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆ ಮಾಡಲಾಗುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ಇಂದು ಸೋಮವಾರ (ಮೇ 5) ಹೇಳಿದೆ.

ಇದನ್ನೂ ಓದಿ: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ

ಇದನ್ನೂ ಓದಿ
Image
ನೀವೆಷ್ಟು ಅನುಕೂಲಸ್ಥರು? ಇಗೋ ನೋಡಿ 4 ಪರ್ಸೆಂಟ್ ಸೂತ್ರ
Image
ರೀಫಂಡ್​​ಗೋಸ್ಕರ ತಪ್ಪು ಐಟಿಆರ್ ಸಲ್ಲಿಸಿದರೆ ಏನಾಗುತ್ತೆ?
Image
ಈ ಎನ್​​ಬಿಎಫ್​​ಸಿ ಡೆಪಾಸಿಟ್ ಪ್ಲಾನ್​​ನಲ್ಲಿ ಶೇ. 8.4 ಬಡ್ಡಿ
Image
ಸಾಲ ಉಪಯೋಗಿಸಿ ಶ್ರೀಮಂತರಾಗೋದು ಹೇಗೆ?

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದವರಿಗೆ ಕಡಿಮೆ ಬಡ್ಡಿ

ಇಲ್ಲಿ ಬ್ಯಾಂಕ್ ಆಫ್ ಬರೋಡಾ ಹೇಳಿದ ಶೇ. 8ರ ಬಡ್ಡಿದರವು ಎಲ್ಲರಿಗೂ ಅನ್ವಯ ಆಗುವುದಿಲ್ಲ. ನೀವು ಮನೆಪತ್ರವನ್ನು ಅಡಮಾನವಾಗಿ ಇಟ್ಟರೂ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರವಾಗಿ ಬಡ್ಡಿದರವನ್ನು ಬ್ಯಾಂಕ್ ನಿರ್ಧರಿಸುತ್ತದೆ. ಕ್ರೆಡಿಟ್ ಸ್ಕೋರ್ ಅತ್ಯುತ್ತಮ ಸ್ಥಿತಿಯಲ್ಲಿ ಇದ್ದು, ನಿಮ್ಮ ಸಾಲ ತೀರಿಸುವಿಕೆಯ ಶಕ್ತಿ ಬಗ್ಗೆ ಬ್ಯಾಂಕ್​​ಗೆ ವಿಶ್ವಾಸ ಬಂದಲ್ಲಿ ಶೇ. 8ರ ವಾರ್ಷಿಕ ಬಡ್ಡಿದರದಲ್ಲಿ ಗೃಹ ಸಾಲ ಸಿಗುತ್ತದೆ.

ಬ್ಯಾಂಕ್ ಆಫ್ ಬರೋಡಾದಿಂದ ಸಾಲ ವರ್ಗಾವಣೆ ಸೌಲಭ್ಯ

ಬ್ಯಾಂಕ್ ಆಫ್ ಬರೋಡಾ ‘ಹೋಮ್ ಲೋನ್ ಬ್ಯಾಲನ್ಸ್ ಟ್ರಾನ್ಸ್​​ಫರ್’ ಸ್ಕೀಮ್ ಅನ್ನು ಆಫರ್ ಮಾಡಿದೆ. ಹೆಚ್ಚಿನ ಬಡ್ಡಿದರ ಇರುವ ಇತರ ಬ್ಯಾಂಕು ಹಾಗೂ ಎನ್​​ಬಿಎಫ್​​ಸಿಗಳಲ್ಲಿ ಗೃಹಸಾಲ ಇದ್ದರೆ ಅದನ್ನು ಬ್ಯಾಂಕ್ ಆಫ್ ಬರೋಡಾಗೆ ವರ್ಗಾಯಿಸಲು ಅವಕಾಶ ಇದೆ. ಇದರ ಪ್ರಕ್ರಿಯೆ ಕೂಡ ಸರಳವಾಗಿರುವುದರಿಂದ ಗ್ರಾಹಕರಿಗೆ ತಲೆನೋವು ಕಡಿಮೆ.

ಇದನ್ನೂ ಓದಿ: ಆರ್​​ಬಿಐ ಬಡ್ಡಿದರ ಕಡಿತದ ಬಳಿಕ ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್​​ಡಿ ದರಗಳಿವು

ಬ್ಯಾಂಕ್ ಆಫ್ ಬರೋಡಾ ಭಾರತದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದು. ಭಾರತದಾದ್ಯಂತ ಸುಮಾರು 10,000 ಶಾಖೆಗಳನ್ನು ಹೊಂದಿದೆ. ಬೆಂಗಳೂರಿನಲ್ಲೇ ನೂರಕ್ಕೂ ಹೆಚ್ಚು ಬ್ರ್ಯಾಂಚ್​​ಗಳಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Mon, 5 May 25

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ