Clean Science And Technology: ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಶೇ 98ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್

ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಷೇರು ಜುಲೈ 19ನೇ ತಾರೀಕಿನ ಸೋಮವಾರದಂದು ಲಿಸ್ಟಿಂಗ್ ಆಗಿದ್ದು, 837 ರೂಪಾಯಿಗೆ ವಿತರಿಸಿದ ಷೇರು 884.40 ರೂಪಾಯಿ ಅಥವಾ ಶೇ 98.27ರಷ್ಟು ಮೇಲಕ್ಕೆ ಏರಿ ಲಿಸ್ಟಿಂಗ್ ಆಗಿದೆ.

Clean Science And Technology: ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಶೇ 98ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Jul 19, 2021 | 12:33 PM

ಸ್ಪೆಷಾಲಿಟಿ ಕೆಮಿಕಲ್ಸ್ ಕಂಪೆನಿಯಾದ ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ (Clean Science And Technology) ಷೇರು ಜುಲೈ 19ನೇ ತಾರೀಕಿನ ಸೋಮವಾರದಂದು ಶೇ 98ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಆಗಿದೆ. ಈ ಕಂಪೆನಿಯ ರಿಟರ್ನ್ಸ್ ರೇಷಿಯೋ, ವೈವಿಧ್ಯಮಯ ಉತ್ಪನ್ನಗಳ ಪೋರ್ಟ್​ಫೋಲಿಯೋ, ಪರಿಸರದ ಮೇಲೆ ಪ್ರಬಲ ಗಮನ, ಸಾಮಾಜಿಕ ಹಾಗೂ ಕಾರ್ಪೊರೇಟ್ ಗವರ್ನೆನ್ಸ್ (ESG), ಸ್ಥಿರವಾದ ಆರ್ ಅಂಡ್ ಡಿ ಅಭಿಯಾನಗಳು ಮತ್ತು ಪ್ರಬಲವಾದ ಗ್ರಾಹಕರ ಬೇಸ್ ಕಾರಣಗಳಿಗೆ ಈ ಕಂಪೆನಿಯ ಮೇಲೆ ವಿಶ್ಲೇಷಕರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಬಿಎಸ್​ಇ ಸೂಚ್ಯಂಕದಲ್ಲಿ ಕಂಪೆನಿಯ ಷೇರು ಸೋಮವಾರದಂದು 1784.40 ರೂಪಾಯಿಯೊಂದಿಗೆ ಲಿಸ್ಟಿಂಗ್ ಆಯಿತು.

ಅಂದಹಾಗೆ ಈ ಕಂಪೆನಿಯ ಷೇರನ್ನು 837 ರೂಪಾಯಿಗೆ ವಿತರಿಸಲಾಗಿತ್ತು. ಆ ವಿತರಣೆಯ ಮೊತ್ತಕ್ಕಿಂತ 884.40 ರೂಪಾಯಿ ಅಥವಾ ಶೇ 98.27ರಷ್ಟು ಮೇಲಕ್ಕೆ ಏರಿತು. ಕ್ಲಿನಿಕಲ್ ಸೈನ್ಸ್​ನಿಂದ ಪರ್ಫಾರ್ಮೆನ್ಸ್ ಕೆಮಿಕಲ್ಸ್, ಫಾರ್ಮಾಸ್ಯುಟಿಕಲ್ಸ್ ಇಂಟರ್​ಮೀಡಿಯಟ್ಸ್, ಎಫ್​ಎಂಸಿಜಿ ಕೆಮಿಕಲ್ಸ್​ನಂಥ ಸ್ಪೆಷಾಲಿಟಿ ಕೆಮಿಕಲ್ಸ್​ಗಳನ್ನು ತಯಾರಿಸಲಾಗುತ್ತದೆ. ವೇಪರ್- ಪೇಸ್ ತಂತ್ರಂಜ್ಞಾನದಲ್ಲಿ ಫೆನಾಲ್​ನಿಂದ ಅನಿಸೋಲ್ ಉತ್ಪಾದನೆಗೆ ಕಡಿಮೆ ವೆಚ್ಚ ತಗುಲುತ್ತಿರುವುದು ಜಾಗತಿಕವಾಗಿ ಈ ಕಂಪೆನಿಯಲ್ಲಿ ಮಾತ್ರ.

ಈ ಕಂಪೆನಿ ಇರುವ ಗ್ರಾಹಕರಿಗೇ ನೇರವಾಗಿ ಉತ್ಪಾದನೆ ಆದ ವಸ್ತುಗಳನ್ನು ತಲುಪಿಸಲಾಗುತ್ತದೆ. ಜತೆಗೆ ಸಂಸ್ಥೆಗಳಿಗೂ ವಿತರಿಸಲಾಗುತ್ತದೆ. ಕಂಪೆನಿಯ ಬಹುಪಾಲು ಆದಾಯವು ಗ್ರಾಹಕರಿಗೆ ಮಾಡುವ ನೇರ ಮಾರಾಟದಿಂದ ಬರುತ್ತದೆ. ಬೇಯರ್ ಎಜಿ, ಎಸ್​ಆರ್​ಎಫ್, ಜೆನ್ನೆಕ್ಸ್ ಲ್ಯಾಬೊರೇಟರೀಸ್, ವಿನತಿ ಆರ್ಗಾನಿಕ್ಸ್ ಇಂಥ ಗ್ರಾಹಕರನ್ನು ಕಂಪೆನಿ ಹೊಂದಿದೆ. ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಕಂಪೆನಿಯು ಜುಲೈ 7ರಿಂದ 9ರ ಮಧ್ಯೆ ಐಪಿಒ ಮೂಲಕ 1546.62 ಕೋಟಿ ರೂಪಾಯಿಯನ್ನು ಸಂಗ್ರಹಿಸಿದೆ. ಇದು ಆಫರ್ ಫಾರ್ ಸೇಲ್ ಆಗಿದ್ದರಿಂದ ಈಗಾಗಲೇ ಇದ್ದ ಷೇರುದಾರರಿಗೆ ಹಣ ಹೋಗಿರುತ್ತದೆ.

ಕ್ಲೀನ್ ಸೈನ್ಸ್ ಶೇ 28ರಷ್ಟು ಆದಾಯ ಬೆಳವಣಿಗೆ ಸಿಎಜಿಆರ್ ದಾಖಲಿಸಿದೆ. ಬಡ್ಡಿ, ತೆರಿಗೆ, ಸವಕಳಿ ಮತ್ತು ಅಮಾರ್ಟೈಸೇಷನ್ ಕಳಿಯುವ ಮುಂಚಿನ ಆದಾಯ (EBITDA) ಶೇ 28ರಷ್ಟು ಬೆಳವಣಿಗೆ ದಾಖಲಿಸಿದ್ದರೆ, FY18- FY21ರ ಮಧ್ಯೆ ಶೇ 60ರಷ್ಟು ಲಾಭ ಗಳಿಸಿದೆ. ಇನ್ನು ಇದೇ ಅವಧಿಯಲ್ಲಿ ಮಾರ್ಜಿನ್ ಶೇ 30.2ರಿಂದ ಶೇ 50.5ಕ್ಕೆ ಹೆಚ್ಚಳವಾಗಿದೆ.

ಇದನ್ನೂ ಓದಿ: GR Infra Projects: ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್ ಐಪಿಒ ಶೇ 100ಕ್ಕೂ ಹೆಚ್ಚು ಪ್ರೀಮಿಯಂಗೆ ಲಿಸ್ಟಿಂಗ್; ಹೂಡಿಕೆದಾರರಿಗೆ ಬಂಪರ್

(Specialty chemical company Clean Science And Technology listed with 98% premium on July 19, 2021)