ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಎರಡನೇ ದಿನವಾದ ಗುರುವಾರ (ಮಾರ್ಚ್ 25, 2021) ಸಹ ಇಳಿಕೆ ಕಂಡಿವೆ. ಪಿಎಸ್ಯು ಬ್ಯಾಂಕ್, ಎಫ್ಎಂಸಿಜಿ, ವಾಹನ ಹಾಗೂ ಎನರ್ಜಿ ಷೇರುಗಳು ಕುಸಿತ ಕಂಡಿದ್ದರ ಪರಿಣಾಮವಾಗಿ ಸೆನ್ಸೆಕ್ಸ್ ಸೂಚ್ಯಂಕವು 740.19 ಪಾಯಿಂಟ್ ಅಥವಾ ಶೇ 1.51ರಷ್ಟು ಕುಸಿದು 48,440.12 ಪಾಯಿಂಟ್ ಮುಟ್ಟಿತು. ಇನ್ನು ನಿಫ್ಟಿ 224.50 ಪಾಯಿಂಟ್ ಅಥವಾ ಶೇ 1.54ರಷ್ಟು ಕೆಳಗಿಳಿದು 14,324.90 ಪಾಯಿಂಟ್ನೊಂದಿಗೆ ದಿನಾಂತ್ಯದ ವಹಿವಾಟು ಚುಕ್ತಾ ಮಾಡಿತು. ಈ ದಿನದ ವಹಿವಾಟಿನಲ್ಲಿ 748 ಷೇರುಗಳು ಮೇಲೇರಿದರೆ, 2147 ಕಂಪೆನಿಯ ಷೇರುಗಳು ಕೆಳಗೆ ಇಳಿದವು. 170 ಕಂಪೆನಿ ಷೇರುಗಳಲ್ಲಿ ಯಾವ ಬದಲಾವಣೆಯೂ ಕಂಡುಬರಲಿಲ್ಲ.
ನಿಫ್ಟಿ ಪಿಎಸ್ಯು ಬ್ಯಾಂಕ್, ಎಫ್ಎಂಸಿಜಿ, ವಾಹನ, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಎನರ್ಜಿ ಸೂಚ್ಯಂಕಗಳು ಶೇ 2ರಿಂದ 3ರಷ್ಟು ನೆಲ ಕಚ್ಚಿದವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಶೇಕಡಾ 1.8ರಿಂದ ಶೇಕಡಾ 2.2ರಷ್ಟು ಇಳಿಕೆ ಕಂಡವು. ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟ ಕಂಡುಬಂದಿದ್ದರ ಮಧ್ಯೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ರೂ. 72.62ಕ್ಕೆ ಕೊನೆಯಾಯಿತು. ಈ ಹಿಂದಿನ ದಿನಾಂತ್ಯದಲ್ಲಿ 72.56ಕ್ಕೆ ವ್ಯವಹಾರ ಮುಗಿದಿತ್ತು. ಇವತ್ತಿನ ವ್ಯವಹಾರದಲ್ಲಿ ಡಾಲರ್ ವಿರುದ್ಧ ರೂಪಾಯಿ 72.57ರಿಂದ 72.69ರ ಮಧ್ಯೆ ವ್ಯವಹಾರ ನಡೆಯಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟಾಟಾ ಸ್ಟೀಲ್- ಶೇ 2.90
ಐಸಿಐಸಿಐ ಬ್ಯಾಂಕ್- ಶೇ 0.71
ಡಾ. ರೆಡ್ಡೀಸ್ ಲ್ಯಾಬ್ಸ್- ಶೇ 0.20
ಎಚ್ಡಿಎಫ್ಸಿ: ಶೇ 0.20
ಜೆಎಸ್ಡಬ್ಲ್ಯು ಸ್ಟೀಲ್- ಶೇ 0.15
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಮಾರುತಿ ಸುಜುಕಿ- ಶೇ 3.95
ಐಒಸಿ- ಶೇ 3.86
ಎಚ್ಯುಲ್- ಶೇ 3.52
ಕೋಲ್ ಇಂಡಿಯಾ- ಶೇ 3.17
ಹೀರೋ ಮೋಟೋಕಾರ್ಪ್- ಶೇ 3.04
ಇದನ್ನೂ ಓದಿ: Penny Stocks: ಕೊರೊನಾ ಆತಂಕವಿದ್ದರೂ ಬಂಗಾರದ ಫಸಲು ನೀಡಿದ ಚಿಲ್ಲರೆ ಬೆಲೆಯ ಷೇರುಗಳು ಇವು..