Closing bell: ಷೇರುಪೇಟೆಯ ಸೂಚ್ಯಂಕ ಸೆನ್ಸೆಕ್ಸ್ 557 ಪಾಯಿಂಟ್ಸ್, ನಿಫ್ಟಿ 168 ಪಾಯಿಂಟ್ಸ್ ಏರಿಕೆ

|

Updated on: Apr 27, 2021 | 5:20 PM

ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರದಂದು (ಏಪ್ರಿಲ್ 27, 2021) ಉತ್ತಮ ಏರಿಕೆ ಕಂಡಿವೆ. ಸೆನ್ಸೆಕ್ಸ್ 550ಕ್ಕೂ ಹೆಚ್ಚು ಮತ್ತು ನಿಫ್ಟಿ 168 ಪಾಯಿಂಟ್ಸ್ ಹೆಚ್ಚಳವಾಗಿವೆ.

Closing bell: ಷೇರುಪೇಟೆಯ ಸೂಚ್ಯಂಕ ಸೆನ್ಸೆಕ್ಸ್ 557 ಪಾಯಿಂಟ್ಸ್, ನಿಫ್ಟಿ 168 ಪಾಯಿಂಟ್ಸ್ ಏರಿಕೆ
ಪ್ರಾತಿನಿಧಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ಎರಡನೇ ದಿನವಾದ ಮಂಗಳವಾರ (ಏಪ್ರಿಲ್ 27, 2021) ಕೂಡ ಏರಿಕೆಯನ್ನು ದಾಖಲಿಸಿವೆ. ಈ ಏರಿಕೆಗೆ ಮುಖ್ಯವಾಗಿ ಲೋಹ ಹಾಗೂ ಹಣಕಾಸು ವಲಯದ ಷೇರುಗಳು ಕಾರಣವಾಗಿವೆ. ದಿನಾಂತ್ಯದ ವ್ಯವಹಾರ ಕೊನೆಯಾಗುವ ಹೊತ್ತಿಗೆ ಸೆನ್ಸೆಕ್ಸ್ 557.63 ಪಾಯಿಂಟ್ಸ್ ಅಥವಾ ಶೇ 1.15ರಷ್ಟು ಮೇಲೇರಿ 48,944.14 ಪಾಯಿಂಟ್​ನೊಂದಿಗೆ ವಹಿವಾಟು ಮುಗಿಸಿದರೆ, ನಿಫ್ಟಿ ಸೂಚ್ಯಂಕವು 168 ಪಾಯಿಂಟ್ಸ್ ಅಥವಾ ಶೇ 1.16ರಷ್ಟು ಹೆಚ್ಚಳವಾಗಿ 14,653 ಪಾಯಿಂಟ್​ನಲ್ಲಿ ವ್ಯವಹಾರವನ್ನು ಮುಕ್ತಾಯ ಮಾಡಿದೆ.

ಈ ದಿನದ ವಹಿವಾಟಿನಲ್ಲಿ 1915 ಕಂಪೆನಿಯ ಷೇರುಗಳು ಮೇಲೇರಿದರೆ, 984 ಕಂಪೆನಿ ಷೇರುಗಳು ಇಳಿಕೆ ಕಂಡಿವೆ ಮತ್ತು 158 ಕಂಪೆನಿ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಲ್ಲ ವಲಯಗಳು ಸಹ ಏರಿಕೆಯಲ್ಲೇ ದಿನದ ವಹಿವಾಟನ್ನು ಮುಗಿಸಿವೆ. ಬಿಎಸ್​ಇ ಮಿಡ್​ಕ್ಯಾಪ್ ಹಾಗೂ ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಹೆಚ್ಚಳವಾಗಿವೆ. ಇನ್ನು ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ದಿನಾಂತ್ಯಕ್ಕೆ ರೂಪಾಯಿ 74.66ರಲ್ಲಿ ವ್ಯವಹಾರ ಮುಗಿಸಿದೆ. ಬೆಳಗಿನ ವಹಿವಾಟಿನಲ್ಲಿ 5 ಪೈಸೆ ಏರಿಕೆಯೊಂದಿಗೆ 74.67ರಲ್ಲಿ ಇತ್ತು. ಈ ಹಿಂದಿನ ದಿನಾಂತ್ಯಕ್ಕೆ 74.72ರಲ್ಲಿ ವ್ಯವಹಾರ ಮುಗಿಸಿತ್ತು. ಈ ದಿನ 74.51 ಹಾಗೂ 74.73ರ ಮಧ್ಯೆ ವಹಿವಾಟು ನಡೆಸಿತು.

ನಿಫ್ಟಿಯಲ್ಲಿ ಭಾರೀ ಏರಿಕೆ ಕಂಡ ಕಂಪೆನಿ ಷೇರು ಮತ್ತು ಪರ್ಸೆಂಟ್
ಹಿಂಡಾಲ್ಕೋ ಶೇ 5.14
ಟಾಟಾ ಸ್ಟೀಲ್ ಶೇ 3.93
ಲಾರ್ಸನ್ ಶೇ 3.35
ಡಿವೀಸ್ ಲ್ಯಾಬ್ಸ್ ಶೇ 3.29
ಬಜಾಜ್ ಫೈನಾನ್ಸ್ ಶೇ 2.71

ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡ ಕಂಪೆನಿ ಷೇರು ಮತ್ತು ಪರ್ಸೆಂಟ್
ಎಚ್​ಡಿಎಫ್​ಸಿ ಲೈಫ್ ಶೇ -3.65
ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ -1.46
ಮಾರುತಿ ಸುಜುಕಿ ಶೇ -1.06
ನೆಸ್ಟ್ಲೆ ಶೇ -0.54
ಕೊಟಕ್ ಮಹೀಂದ್ರಾ ಶೇ -0.53

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

(Indian stock market index sensex and nifty surge on April 27, 2021. Metal and financial stocks supported the gain)

Published On - 5:11 pm, Tue, 27 April 21