ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಜುಲೈ 4ನೇ ತಾರೀಕಿನ ಸೋಮವಾರದಂದು ಏರಿಕೆಯಲ್ಲಿ ಮುಕ್ತಾಯ ಕಂಡಿವೆ. ನಿಫ್ಟಿ ಸೂಚ್ಯಂಕವು 15,800 ಪಾಯಿಂಟ್ಸ್ ಮೇಲ್ಪಟ್ಟು ವ್ಯವಹಾರವನ್ನು ಚುಕ್ತಾ ಮಾಡಿದೆ. ಬಿಎಸ್ಇ ಸೆನ್ಸೆಕ್ಸ್ 326.84 ಪಾಯಿಂಟ್ಸ್ ಅಥವಾ ಶೇ 0.62ರಷ್ಟು ಹೆಚ್ಚಳವಾಗಿ 53,234.77 ಪಾಯಿಂಟ್ಸ್ನಲ್ಲಿ ವಹಿವಾಟು ಮುಗಿಸಿದ್ದರೆ, ನಿಫ್ಟಿ 83.40 ಅಥವಾ ಶೇ 0.53ರಷ್ಟು ಮೇಲೇರಿ 15,835.40 ಪಾಯಿಂಟ್ಸ್ನಲ್ಲಿ ಕೊನೆಗೊಂಡಿದೆ. ಇಂದಿನ ವಹಿವಾಟಿನಲ್ಲಿ 1976 ಕಂಪೆನಿ ಷೇರುಗಳು ಏರಿಕೆಯೊಂದಿಗೆ ಮುಕ್ತಾಯ ಕಂಡಿದ್ದರೆ, 1330 ಕಂಪೆನಿ ಷೇರುಗಳು ಇಳಿಕೆಯಲ್ಲಿ ವ್ಯವಹಾರ ಕೊನೆಗೊಳಿಸಿದವು. ಇನ್ನು 171 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.
ವಲಯವಾರು ಗಮನಿಸುವುದಾದರೆ, ಎಫ್ಎಂಸಿಜಿ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್ ಶೇ 1ರಿಂದ 2ರಷ್ಟು ಹೆಚ್ಚಳವನ್ನು ದಾಖಲಿಸಿದವು. ಆದರೆ ಲೋಹದ ಸೂಚ್ಯಂಕವು ಶೇ 1.5ರಷ್ಟು ಇಳಿಕೆಯನ್ನು ದಾಖಲಿಸಿತು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇ 0.8ರಷ್ಟು ಮೇಲೇರಿದ್ದರೆ, ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇ 0.6ರಷ್ಟು ನೆಲ ಕಚ್ಚಿತು.
ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಹಿಂದೂಸ್ತಾನ್ ಯುನಿಲಿವರ್ ಶೇ 4.07
ಬ್ರಿಟಾನಿಯಾ ಶೇ 3.24
ಇಂಡಸ್ಇಂಡ್ ಬ್ಯಾಂಕ್ ಶೇ 3.07
ಐಟಿಸಿ ಶೇ 2.66
ಐಸಿಐಸಿಐ ಬ್ಯಾಂಕ್ ಶೇ 2.30
ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಜೆಎಸ್ಡಬ್ಲ್ಯು ಸ್ಟೀಲ್ ಶೇ -4.72
ಒಎನ್ಜಿಸಿ ಶೇ -3.85
ಟಿಸಿಎಸ್ ಶೇ -2.41
ಟಾಟಾ ಸ್ಟೀಲ್ ಶೇ -2.10
ಸಿಪ್ಲಾ ಶೇ -1.96
Published On - 4:27 pm, Mon, 4 July 22