Stock Market Prediction For July: ಷೇರು ಮಾರುಕಟ್ಟೆಯಲ್ಲಿ ಜುಲೈನಲ್ಲಿ ಏನೇನಾಗಲಿದೆ? ಇಲ್ಲಿದೆ ಖ್ಯಾತ ಟಾರೋ ಕಾರ್ಡ್ ರೀಡರ್ ಭವಿಷ್ಯ
ಜುಲೈ ತಿಂಗಳಲ್ಲಿ ಷೇರು ಮಾರುಕಟ್ಟೆ ಹೇಗೆ ವ್ಯವಹಾರ ನಡೆಸಲಿದೆ ಎಂಬುದನ್ನು ಖ್ಯಾತ ಟಾರೋ ಕಾರ್ಡ್ ರೀಡರ್ ಆದ ಪ್ರಕಾಶ ದಳವಿ ಅವರು ಟಾರೋ ಕಾರ್ಡ್ ರೀಡಿಂಗ್ ಮೂಲಕ ತಿಳಿಸಿದ್ದಾರೆ.
ಷೇರುಪೇಟೆ (Stock Market) ಹೂಡಿಕೆದಾರರಿಗೆ ಟಿವಿ9 ಕನ್ನಡ ಡಿಜಿಟಲ್ನ ಈ ಹೊಸ ಪ್ರಯತ್ನದ ಬಗ್ಗೆ ಗಮನ ಸೆಳೆಯಬೇಕಿದೆ. ಈ ಲೇಖನವು ಒಂದು ತಿಂಗಳಲ್ಲಿ, ಅಂದರೆ ಈಗ 2022ರ ಜುಲೈನಲ್ಲಿ ಷೇರುಪೇಟೆಯಲ್ಲಿ ಏನೇನು ಬೇಳವಣಿಗೆ ಆಗಬಹುದು ಎಂದು ಊಹಿಸಿರುವ ಟಾರೋ ಕಾರ್ಡ್ ರೀಡಿಂಗ್ನ ಲೇಖನ. ಮಹಾರಾಷ್ಟ್ರ ಮೂಲದ ಖ್ಯಾತ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಅವರು ಈ ರೀಡಿಂಗ್ ನೀಡಿದ್ದಾರೆ. ಇದನ್ನು ಕೊನೆಯ ತನಕ ನೀವು ಓದಿದರೆ ಏನು ಹೇಳುವುದಕ್ಕೆ ಪ್ರಯತ್ನ ಪಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ನಮ್ಮ ಮಟ್ಟಿಗೆ ಹೊಸ ಪ್ರಯತ್ನವಾದ್ದರಿಂದ ನಿಮ್ಮ ಫೀಡ್ಬ್ಯಾಕ್ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಇನ್ನು ತಡ ಮಾಡದಿರಿ. ಜುಲೈ ತಿಂಗಳಲ್ಲಿ ಷೇರು ಪೇಟೆ ವಹಿವಾಟು ಹೇಗಿರಲಿದೆ ಎಂಬುದನ್ನು ಓದಲು ಶುರು ಮಾಡಿ. ಅಂದಹಾಗೆ ಇಲ್ಲಿರುವ ಅಭಿಪ್ರಾಯಗಳು ಮತ್ತು ಸಲಹೆ ಆಯಾ ಲೇಖಕರವೇ ಹೊರತು ಟಿವಿ9 ನೆಟ್ವರ್ಕ್ನ ಯಾವ ಸಂಸ್ಥೆಯು ಜವಾಬ್ದಾರ ಅಲ್ಲ- ಸಂಪಾದಕರು, ಟಿವಿ9 ಕನ್ನಡ ಡಿಜಿಟಲ್.
****
ಟಿವಿ9 ಕನ್ನಡ ಡಿಜಿಟಲ್ನ ಎಲ್ಲ ಓದುಗರಿಗೆ ನನ್ನ ನಮಸ್ಕಾರ. ನಮ್ಮ ಈ ಬಾಂಧವ್ಯ ಹೀಗೇ ಮುಂದುವರಿಯಲಿ ಎಂಬ ಆಶಯದೊಂದಿಗೆ ಈ ಲೇಖನ ಶುರು ಮಾಡುತ್ತೇನೆ. ಟಾರೋ ಕಾರ್ಡ್ ರೀಡಿಂಗ್ ಎಂಬುದು ಜ್ಯೋತಿಷ್ಯದ ಒಂದು ಭಾಗ. ಅದರ ಮೂಲಕ ನಾನಾ ಸಂಗತಿಗಳನ್ನು ತಿಳಿಯಬಹುದು. ಈಗ ಜುಲೈ ತಿಂಗಳಲ್ಲಿ ಭಾರತದ ಷೇರುಪೇಟೆ ಹೇಗೆ ವಹಿವಾಟು ನಡೆಸಬಹುದು ಅಥವಾ ವರ್ತಿಸಬಹುದು ಎಂಬುದನ್ನು ಟಾರೋ ಕಾರ್ಡ್ ರೀಡಿಂಗ್ ಮೂಲಕ ನಿಮಗೆ ತಿಳಿಸುತ್ತಿದ್ದೇನೆ. ಆರಂಭದಲ್ಲೇ ಹೇಳುತ್ತಿದ್ದೇನೆ, ಇದು ಆ ಭಗವಂತನ ಸ್ಮರಣೆ ಮಾಡಿ, ಪಾಸಿಟಿವ್ ಎನರ್ಜಿಯೊಂದಿಗೆ, ಕಾರ್ಡ್ ಮೂಲಕ ತಿಳಿದಿದ್ದನ್ನು ನಿಮಗೆ ದಾಟಿಸಬೇಕು ಎಂಬ ಉದ್ದೇಶವಷ್ಟೇ ನನ್ನದು. ಇಲ್ಲಿ ನಾನು ತಿಳಿಸಿರುವ ವಿಚಾರದಲ್ಲಿ ವೈಯಕ್ತಿಕ ಲಾಭ, ಹಿತಾಸಕ್ತಿಗಳು ಇಲ್ಲ ಎಂಬುದನ್ನು ಆರಂಭದಲ್ಲೇ ಖಾತ್ರಿಪಡಿಸಿಬಿಡುತ್ತೇನೆ.
ಇನ್ನು ಜೂನ್ 30ನೇ ತಾರೀಕಿನ ಕೊನೆಗೆ ಸೆನ್ಸೆಕ್ಸ್ 53,000 ಪಾಯಿಂಟ್ಸ್ಗಿಂತ ಸ್ವಲ್ಪ ಮೇಲೆ ಮತ್ತು ನಿಫ್ಟಿ 15,780 ಪಾಯಿಂಟ್ಸ್ನೊಂದಿಗೆ ಮುಕ್ತಾಯ ಕಂಡಿದೆ. ಜಲೈ 1ರಿಂದ 10ನೇ ತಾರೀಕು ತನಕ ಸೆನ್ಸೆಕ್ಸ್ ಮತ್ತು ನಿಫ್ಟಿ ಮತ್ತಷ್ಟು ಕೆಳಗೆ ಇಳಿಯುತ್ತದೆ. ಇಂಟ್ರಾಡೇ ವಹಿವಾಟು ನಡೆಸುವವರಿಗೆ ಈಗಿನ ಮಾರ್ಕೆಟ್ ಟ್ರೆಂಡ್ ಚೆನ್ನಾಗಿರುವುದಿಲ್ಲ. ಆದರೆ ಟಾಪ್ ಕಂಪೆನಿಗಳ ಷೇರುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಇರಾದೆ ಇರುವವರಿಗೆ ಅದ್ಭುತವಾದ ಅವಕಾಶ ಇದಾಗಲಿದೆ.
ಜುಲೈ 11ರಿಂದ 20ನೇ ತಾರೀಕಿನ ತನಕ ಸೂಚ್ಯಂಕದ ಚಲನೆ ನಿಧಾನ ಗತಿಯಲ್ಲಿ ಇರುತ್ತದೆ. ಅಷ್ಟೇ ಅಲ್ಲ, ಇಂತಿಷ್ಟು ಮಿತಿಯಲ್ಲಿ ಎಂದು ವಹಿವಾಟು ನಡೆಸುತ್ತದೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಯಾವುದೇ ಏರಿಕೆಯನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ.
ಜುಲೈ 21ರಿಂದ 31ರ ಮಧ್ಯೆ ಈ ಅವಧಿಯಲ್ಲಿ ಷೇರು ಮಾರುಕಟ್ಟೆಯು ಚೇತರಿಕೆ ಕಾಣಿಸಿಕೊಳ್ಳುತ್ತದೆ. ಯಾವ ಹೂಡಿಕೆದಾರರು ಜುಲೈ 1ರಿಂದ 10ನೇ ತಾರೀಕಿನ ಮಧ್ಯೆ ಖರೀದಿ ಮಾಡಿದಂಥ ಹೂಡಿಕೆದಾರರಿಗೆ ಅಲ್ಪಾವಧಿಯಲ್ಲಿ ಲಾಭ ನಗದೀಕರಣಕ್ಕೆ ಅವಕಾಶ ಸಿಗುತ್ತದೆ. ಆದರೆ ದೊಡ್ಡ ಮಟ್ಟದಲ್ಲಿ ಚೇತರಿಕೆ ಕಾಣಿಸಲ್ಲ.
ಬ್ಯಾಂಕ್ ನಿಫ್ಟಿ: 30ನೇ ಜೂನ್ಗೆ ಬ್ಯಾಂಕ್ ನಿಫ್ಟಿ 33,425 ಪಾಯಿಂಟ್ಸ್ನಲ್ಲಿ ಮುಕ್ತಾಯ ಕಂಡಿದೆ. 2022ರ ಜುಲೈನಲ್ಲಿ ಇನ್ನಷ್ಟು ಕೆಳಗೆ ಹೋಗಲಿದೆ. ಜುಲೈನಲ್ಲಿ ಬ್ಯಾಂಕ್ ನಿಫ್ಟಿ ಸೂಚ್ಯಂಕದಲ್ಲಿ ಚೇತರಿಕೆ ಕಾಣುತ್ತಿಲ್ಲ.
ಕಮಾಡಿಟಿ ಮಾರುಕಟ್ಟೆ:
ಚಿನ್ನ: ಚಿನ್ನದ ಬೆಲೆ ಜುಲೈನಲ್ಲಿ ಇನ್ನಷ್ಟು ಕೆಳಗೆ ಇಳಿಯಲಿದೆ.
ಬೆಳ್ಳಿ: ಬೆಳ್ಳಿಯ ದರವು ರೇಂಜ್ನಲ್ಲಿ ಇರುತ್ತದೆ. ಬೆಳ್ಳಿ ಬೆಲೆ ದೊಡ್ಡ ಗಳಿಕೆಯೂ ಕಾಣುತ್ತಿಲ್ಲ, ಅದೇ ರೀತಿ ಇಳಿಕೆಯೂ.
ಕಚ್ಚಾ ತೈಲ ಮತ್ತು ತಾಮ್ರ: ಇವುಗಳಲ್ಲಿ ಬೆಲೆ ಏರಿಕೆ ಕಂಡು ಬರುತ್ತಿದೆ.
ಅಲ್ಯೂಮಿನಿಯಂ: ಇದು ರೇಂಜ್ ಬೌಂಡ್ ಆಗಿರಲಿದೆ. ದೊಡ್ಡ ಮಟ್ಟದ ಗಳಿಕೆಯೋ ಅಥಚಾ ಸಾಕಷ್ಟು ಪ್ರಮಾಣದ ಏರಿಕೆ ಕಾಣುತ್ತಿಲ್ಲ.
ಲೇಖಕರ ಎಚ್ಚರಿಕೆ: ನಾನು ಸೆಬಿಯ ನೋಂದಾಯಿತ ಆರ್ಥಿಕ ಸಲಹೆಗಾರನಲ್ಲ. ಷೇರು ಮಾರುಕಟ್ಟೆಯ ಯಾವುದೇ ನಿರ್ಧಾರ ಮಾಡುವ ಮುನ್ನ ದಯವಿಟ್ಟು ಹಣಕಾಸು ಸಲಹೆಗಾರರ ಜತೆ ಚರ್ಚಿಸಿ.
ಲೇಖಕರು: ಪ್ರಕಾಶ್ ದಳವಿ ಖ್ಯಾತ ಟಾರೋ ಕಾರ್ಡ್ ರೀಡರ್, ಷೇರು ಮಾರುಕಟ್ಟೆ ವಿಶ್ಲೇಷಕರು ಮೊಬೈಲ್ ಸಂಖ್ಯೆ: 8369408344
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್
Published On - 5:48 pm, Fri, 1 July 22