Closing Bell: ದಾಖಲೆ ಎತ್ತರದಲ್ಲಿ ವಹಿವಾಟು ಮುಗಿಸಿದ ಷೇರುಪೇಟೆ; ಟಾಟಾ ಮೋಟಾರ್ಸ್ ಶೇ 20ರಷ್ಟು ಏರಿಕೆ

| Updated By: Srinivas Mata

Updated on: Oct 13, 2021 | 4:11 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಅ. 13ರ ಬುಧವಾರದಂದು ದಾಖಲೆಯ ಎತ್ತರದಲ್ಲಿ ವಹಿವಾಟು ಮುಗಿಸಿವೆ. ಟಾಟಾ ಮೋಟಾರ್ಸ್ ಷೇರುಗಳು ಶೇ 20ಕ್ಕಿಂತ ಹೆಚ್ಚು ಗಳಿಕೆ ಕಂಡಿದೆ.

Closing Bell: ದಾಖಲೆ ಎತ್ತರದಲ್ಲಿ ವಹಿವಾಟು ಮುಗಿಸಿದ ಷೇರುಪೇಟೆ; ಟಾಟಾ ಮೋಟಾರ್ಸ್ ಶೇ 20ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಅಕ್ಟೋಬರ್ 13ನೇ ತಾರೀಕಿನ ಬುಧವಾರ ಹೊಸ ದಾಖಲೆ ಎತ್ತರದಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ವಾಹನ, ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ಮೂಲಸೌಕರ್ಯ ಷೇರುಗಳ ಬೆಂಬಲದೊಂದಿಗೆ ಭಾರೀ ಎತ್ತರಕ್ಕೆ ಏರಿದೆ. ಇಂದಿನ ವ್ಯವಹಾರದಲ್ಲಿ ಸೆನ್ಸೆಕ್ಸ್ 452.74 ಪಾಯಿಂಟ್ಸ್ ಅಥವಾ ಶೇ 0.75ರಷ್ಟು ಹೆಚ್ಚಳವಾಗಿ, 60,737.05 ಪಾಯಿಂಟ್ಸ್​ನಲ್ಲಿ ಮುಕ್ತಾಯ ಕಂಡಿದೆ. ಇನ್ನು ನಿಫ್ಟಿ ಸೂಚ್ಯಂಕವು 169.80 ಪಾಯಿಂಟ್ಸ್ ಅಥವಾ ಶೇ 0.94ರಷ್ಟು ಮೇಲೇರಿ, 18,161.80 ಪಾಯಿಂಟ್ಸ್​ನೊಂದಿಗೆ ವಹಿವಾಟು ಮುಗಿಸಿದೆ. ಇಂದಿನ ವ್ಯವಹಾರದಲ್ಲಿ 1602 ಕಂಪೆನಿ ಷೇರುಗಳು ಹೆಚ್ಚಳವನ್ನು ದಾಖಲಿಸಿದರೆ, 1504 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಮತ್ತು 118 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ವಲಯವಾರು ನೋಡುವುದಾದರೆ, ವಾಹನ ಸೂಚ್ಯಂಕವು ಶೇ 3.5ರಷ್ಟು ಸೇರ್ಪಡೆ ಮಾಡಿದೆ. ಎನರ್ಜಿ, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ, ಲೋಹ, ವಿದ್ಯುತ್ ಮತ್ತು ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕಗಳು ತಲಾ ಶೇ 1ರಷ್ಟು ಹೆಚ್ಚಳ ಕಂಡಿವೆ. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ 0.6ರಿಂದ ಶೇ 1.5ರ ತನಕ ಏರಿಕೆ ದಾಖಲಿಸಿವೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟಾಟಾ ಮೋಟಾರ್ಸ್ ಶೇ 20.45
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 5.08
ಟಾಟಾ ಕನ್ಸ್ಯೂಮರ್ ಪ್ರಾಡಕ್ಸ್ಟ್ ಶೇ 3.92
ಐಟಿಸಿ ಶೇ 3.27
ಪವರ್ ಗ್ರಿಡ್ ಕಾರ್ಪೊರೇಷನ್ ಶೇ 3.13

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಮಾರುತಿ ಸುಜುಕಿ ಶೇ -2.75
ಒಎನ್​ಜಿಸಿ ಶೇ -2.17
ಕೋಲ್ ಇಂಡಿಯಾ ಶೇ -1.68
ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ -1.56
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಶೇ -1.10

ಇದನ್ನೂ ಓದಿ: Rakesh Jhunjhunwala: ಟಾಟಾ ಕಂಪೆನಿಯ ಈ ಷೇರಿನಲ್ಲಿ 3 ಟ್ರೇಡಿಂಗ್ ಸೆಷನ್​ನಲ್ಲಿ 310 ಕೋಟಿ ರೂ. ಗಳಿಸಿದ ಜುಂಜುನ್​ವಾಲಾ