ಹಾನೆಸ್ಟ್ ಟೀ- ರೆಡಿ ಟು ಡ್ರಿಂಕ್ ಚಹಾ ಕ್ಷೇತ್ರಕ್ಕೆ ಅಡಿ ಇಟ್ಟ ಕೋಕಾ ಕೋಲಾ
Coca Cola's Honest Tea: ಕೋಕಾ ಕೋಲಾ ಇಂಡಿಯಾ ಸಂಸ್ಥೆ ಸಿದ್ಧ ಚಹಾ ವಿಭಾಗಕ್ಕೆ ಅಡಿ ಇಟ್ಟಿದೆ. ಐಸ್ಡ್ ಗ್ರೀನ್ ಟೀ ಉತ್ಪನ್ನವಾದ ಹಾನೆಸ್ಟ್ ಟೀ ಬ್ರ್ಯಾಂಡ್ ಅನ್ನು ಕೋಕಾ ಕೋಲಾ ನವೆಂಬರ್ 23ರಂದು ಅನಾವರಣಗೊಳಿಸಿದೆ. ಇದಕ್ಕಾಗಿ ದಾರ್ಜೀಲಿಂಗ್ ಟೀ ಎಸ್ಟೇಟ್ ಸಂಸ್ಥೆಯಾದ ಮಕೈಬರಿ ಜೊತೆ ಕೋಕಾ ಕೋಲಾ ಸಹಭಾಗಿತ್ವ ಹೊಂದಿದೆ.
ನವದೆಹಲಿ, ನವೆಂಬರ್ 23: ಕೋಕಾ ಕೋಲಾ ಇಂಡಿಯಾ ಸಂಸ್ಥೆ ಸಿದ್ಧ ಚಹಾ ವಿಭಾಗಕ್ಕೆ ಅಡಿ ಇಟ್ಟಿದೆ. ಐಸ್ಡ್ ಗ್ರೀನ್ ಟೀ ಉತ್ಪನ್ನವಾದ ಹಾನೆಸ್ಟ್ ಟೀ ಬ್ರ್ಯಾಂಡ್ (Honest Tea) ಅನ್ನು ಕೋಕಾ ಕೋಲಾ ನವೆಂಬರ್ 23ರಂದು ಅನಾವರಣಗೊಳಿಸಿದೆ. ಇದಕ್ಕಾಗಿ ದಾರ್ಜೀಲಿಂಗ್ ಟೀ ಎಸ್ಟೇಟ್ ಸಂಸ್ಥೆಯಾದ ಮಕೈಬರಿ (Makaibari) ಜೊತೆ ಕೋಕಾ ಕೋಲಾ ಸಹಭಾಗಿತ್ವ ಹೊಂದಿದೆ. ಬಾಟಲ್ನಲ್ಲಿ ಬರುವ ತಂಪಗಿನ ಗ್ರೀನ್ ಚಹಾ ಉತ್ಪನ್ನವು ಲೆಮನ್ ತುಳಸಿ ಮತ್ತು ಮ್ಯಾಂಗೋ ಈ ಎರಡು ಫ್ಲೇವರ್ಗಳಲ್ಲಿ ಲಭ್ಯ ಇರುತ್ತದೆ. ನವೆಂಬರ್ 22ರಂದು ಮುಕ್ತಾಯಗೊಂಡ ಬೆಂಗಾಲ್ ಗ್ಲೋಬಲ್ ಬಿಸಿನೆಸ್ ಸಮಿಟ್ 2023ಯಲ್ಲಿ ಈ ಉತ್ಪನ್ನವನ್ನು ಬಿಡುಗಡೆ ಮಾಡಲಾಯಿತು.
ಕೋಕಾ ಕೋಲಾದ ಅಂಗಸಂಸ್ಥೆಯಾದ ಹಾನೆಸ್ಟ್ ಈ ಆರ್ಗ್ಯಾನಿಕ್ ಗ್ರೀನ್ ಟೀ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೋಲ್ಕತಾ ಮೂಲದ ಲಕ್ಷ್ಮೀ ಟೀ ಕೋ ಪ್ರೈ ಲಿ ಸಂಸ್ಥೆಗೆ ಸೇರಿದ ಮಕೈಬರಿ ಟೀ ಎಸ್ಟೇಟ್ನಲ್ಲಿ ಬೆಳೆಯಲಾಗುವ ಚಹಾವನ್ನು ಹಾನೆಸ್ಟ್ ಟೀ ಉತ್ಪನ್ನಕ್ಕೆ ಬಳಸಲಾಗುತ್ತಿದೆ. ಲಕ್ಷ್ಮೀ ಟೀ ಕಂಪನಿ ಮತ್ತು ಕೋಕ ಕೋಲಾ ನಡುವೆ ನಿನ್ನೆ ಎಂಒಯು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ
‘ರೆಡಿ ಟು ಡ್ರಿಂಕ್ ಐಸ್ಡ್ ಗ್ರೀನ್ ಟೀ ಬಿಡುಗಡೆ ಮಾಡಲು ಖುಷಿಯಾಗಿದೆ. ಗ್ರೀನ್ ಟೀ ಆಧಾರಿತ ಪಾನೀಯದ ಅದ್ಭುತ ರುಚಿಯ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ,’ ಎಂದು ಕೋಕಾ ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಹೈಡ್ರೇಶನ್, ಕಾಫಿ ಮತ್ತು ಟೀ ವಿಭಾಗದ ಮಾರ್ಕೆಟಿಂಗ್ ಡೈರಕೆಕ್ಟರ್ ಕಾರ್ತಿಕ್ ಸುಬ್ರಮಣಿಯನ್ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನು, ನಿನ್ನೆಯ ಬಿಡುಗಡೆ ಕಾರ್ಯಕ್ರಮದ ವೇಳೆ ಲಕ್ಷ್ಮೀ ಗ್ರೂಪ್ನ ಎಂಡಿ ಕೂಡ ಮಾತನಾಡಿದರು. ದಾರ್ಜಿಲಿಂಗ್ನಲ್ಲಿ ಮಕೈಬರಿಗಿಂತ ಶ್ರೇಷ್ಠವಾದ ಟೀ ಎಸ್ಟೇಟ್ ಇಲ್ಲ. ಜಪಾನ್ ಆಗಲೀ, ಇಂಗ್ಲೆಂಡ್ ಆಗಲೀ ಬಂಗಲೆ ಮನೆಗಳಲ್ಲಿ ಚಹಾ ಎಂದರೆ ಮಕೈಬರಿಯದ್ದೇ ಆಗಿರುತ್ತದೆ ಎಂದು ಲಕ್ಷ್ಮೀ ಗ್ರೂಪ್ನ ಮ್ಯಾನೇಜಿಂಗ್ ಡೈರೆಕ್ಟರ್ ರುದ್ರ ಚಟರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾಗೆ ಹತ್ತು ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ, ಯಾಕೆ ಗೊತ್ತಾ?
ಭಾರತದಲ್ಲಿ ಅತಿಹೆಚ್ಚು ಚಹಾ ಬೆಳೆಯುವ ಪ್ರದೇಶಗಳಲ್ಲಿ ದಾರ್ಜಿಲಿಂಗ್ ಕೂಡ ಒಂದು. ಕರ್ನಾಟಕ, ಕೇರಳ, ಅಸ್ಸಾಂ, ದಾರ್ಜಿಲಿಂಗ್ ಇತ್ಯಾದಿಯ ಚಹಾ ಹೆಚ್ಚು ಜನಪ್ರಿಯವಾಗಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಹೆಚ್ಚಿನ ಟೀ ಎಸ್ಟೇಟ್ಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ