LPG Price Hike: ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ

| Updated By: Srinivas Mata

Updated on: Dec 01, 2021 | 11:01 AM

LPG Price Today in Bengaluru: ಡಿಸೆಂಬರ್ 1, 2021ರಿಂದ ಮತ್ತೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳನ್ನು ಹೆಚ್ಚಳ ಮಾಡಲಾಗಿದೆ. ನಿಮ್ಮ ನಗರದಲ್ಲಿ ಮನೆಗಳಲ್ಲಿ ಬಳಸುವ ಎಲ್​ಪಿಜಿ ಸಿಲಿಂಡರ್ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

LPG Price Hike: ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಇಂದು (ಡಿಸೆಂಬರ್ 1, 2021) ಮತ್ತೆ ಹೆಚ್ಚಿಸಲಾಗಿದ್ದು, ಜನಸಾಮಾನ್ಯರು ಮತ್ತು ವ್ಯಾಪಾರಿಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. 19 ಕೇಜಿಯ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು ತಲಾ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ನವೆಂಬರ್ 1ರಂದು ಬೆಲೆ ಏರಿಕೆ ಮಾಡಿದ ನಂತರ ಇದು ಎರಡನೇ ಹೆಚ್ಚಳವಾಗಿದೆ.

LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಇಂದಿನಿಂದ ಅನ್ವಯ ಆಗುವ ಬೆಲೆ
ಬೆಲೆ ಹೆಚ್ಚಳದ ನಂತರ 19 ಕೇಜಿಯ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ 2101 ರೂಪಾಯಿ., ಮುಂಬೈನಲ್ಲಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2,051 ರೂ., ಕೋಲ್ಕತ್ತಾದಲ್ಲಿ 2,174.50 ರೂ., ಚೆನ್ನೈನಲ್ಲಿ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ಆಗಿದೆ.

ಇದಕ್ಕೂ ಮುನ್ನ ನವೆಂಬರ್ 1ರಂದು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು 266 ರೂಪಾಯಿಯಿಂದ 2000.50 ರೂ.ಗೆ ಹೆಚ್ಚಿಸಲಾಗಿತ್ತು. ನವೆಂಬರ್ 1ರ ಹೆಚ್ಚಳಕ್ಕೆ ಮೊದಲು, ರಾಷ್ಟ್ರ ರಾಜಧಾನಿಯಲ್ಲಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 1734 ರೂಪಾಯಿಯಿತ್ತು. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಈ ಮಧ್ಯೆ, ಸಬ್ಸಿಡಿ ರಹಿತ 14.2 ಕೇಜಿ ಅಡುಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 899.50, ಕೋಲ್ಕತ್ತಾದಲ್ಲಿ ರೂ. 926, ಮುಂಬೈನಲ್ಲಿ ರೂ. 899.50 ಮತ್ತು ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ ರೂ. 915.50, ಬೆಂಗಳೂರಿನಲ್ಲಿ 902.50 ರೂಪಾಯಿ ಆಗಿದೆ.

ಇದನ್ನೂ ಓದಿ: ಏರಿಕೆ ಆಗಿಯೇಬಿಡ್ತು ಹೋಟೆಲ್ ತಿಂಡಿ ತಿನಿಸು ದರ; ಗ್ರಾಹಕರ ಕೈ ಸುಡುವಂತಿದೆ ಶೇ. 5-10ರಷ್ಟು ಬೆಲೆ ಏರಿಕೆ