AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರಿಕೆ ಆಗಿಯೇಬಿಡ್ತು ಹೋಟೆಲ್ ತಿಂಡಿ ತಿನಿಸು ದರ; ಗ್ರಾಹಕರ ಕೈ ಸುಡುವಂತಿದೆ ಶೇ. 5-10ರಷ್ಟು ಬೆಲೆ ಏರಿಕೆ

ಪಾರ್ಸೆಲ್ ದರವೂ ಶೇ.5ರಿಂದ 10ರಷ್ಟು ಹೆಚ್ಚಳವಾಗಿದ್ದು ಸೆಲ್ಫ್ ಸರ್ವಿಸ್ ಆಹಾರದ ಬೆಲೆಯಲ್ಲೂ ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಶೇ.5ರಿಂದ 10ರಷ್ಟು ದರ ಹೆಚ್ಚಳ ಮಾಡಿದ್ದಾರೆ.

ಏರಿಕೆ ಆಗಿಯೇಬಿಡ್ತು ಹೋಟೆಲ್ ತಿಂಡಿ ತಿನಿಸು ದರ; ಗ್ರಾಹಕರ ಕೈ ಸುಡುವಂತಿದೆ ಶೇ. 5-10ರಷ್ಟು ಬೆಲೆ ಏರಿಕೆ
ವೆಜ್ ಬಿರಿಯಾನಿ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Nov 08, 2021 | 12:40 PM

Share

ಬೆಂಗಳೂರು: ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್ಗಳಲ್ಲಿ ದರ ಏರಿಕೆ ಮಾಡಲಾಗುತ್ತಿದ್ದು ಹೋಟೆಲ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿಲಿದೆ. ಊಟ, ತಿಂಡಿ, ಕಾಫಿ ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆ ಏರಿಕೆ ಮಾಡಲಾಗಿದೆ. ಪಾರ್ಸೆಲ್ ದರವೂ ಶೇ.5ರಿಂದ 10ರಷ್ಟು ಹೆಚ್ಚಳವಾಗಿದ್ದು ಸೆಲ್ಫ್ ಸರ್ವಿಸ್ ಆಹಾರದ ಬೆಲೆಯಲ್ಲೂ ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಶೇ.5ರಿಂದ 10ರಷ್ಟು ದರ ಹೆಚ್ಚಳ ಮಾಡಿದ್ದಾರೆ.

ನಿರಂತರವಾಗಿ ಏರಿಕೆಯಾಗ್ತಿರೊ ವಾಣಿಜ್ಯ ಅಡುಗೆ ಅನಿಲ ಬೆಲೆ, ದಿನಸಿ ಸಾಮಾಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಅಡುಗೆ ಎಣ್ಣೆಯ ಬೆಲೆಯೂ ದುಬಾರಿಯಾಗಿದೆ. 1794 ರೂಪಾಯಿಗೆ ಸಿಗಬೇಕಿದ್ದ 19 ಕೆ.ಜಿ. ತೂಕದ ವಾಣಿಜ್ಯ ಸಿಲೆಂಡರ್ ದರ 2 ಸಾವಿರ ರೂ. ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ಹಂಚಿಕೊಂಡಿದ್ದರು. ಸದ್ಯ ದೀಪಾವಳಿ ಬಳಿಕ ದರ ಏರಿಕೆ ಜಾರಿ ಮಾಡಿವುದಾಗಿ ತಿಳಿಸಿದ್ದ ಪಿ.ಸಿ.ರಾವ್, ಇಂದಿನಿಂದ ದರ ಏರಿಕೆ ನಿಯಮ ಜಾರಿ ಮಾಡಲು ಹೋಟೆಲ್ಗಳಿಗೆ ಸೂಚಿಸಿದ್ದಾರೆ.

ಹೋಟೆಲ್ ಹೊಸ ದರ ಹೀಗಿದೆ ಮಸಾಲೆ ದೋಸೆಯ ಬೆಲೆ 65ರಿಂದ 75ರೂ.ಗೆ ಏರಿಕೆ ಇಡ್ಲಿ, ವಡೆ 35 ರೂ.ನಿಂದ 40ರೂಪಾಯಿಗೆ ಏರಿಕೆ ಕಾಫೀ, ಟೀ ಬೆಲೆ 15 ರೂ.ನಿಂದ 20 ರೂಪಾಯಿಗೆ ಏರಿಕೆ ಚೌಚೌ ಬಾತ್ 60 ರೂ.ನಿಂದ 70ರೂಪಾಯಿಗೆ ಏರಿಕೆ ಸೌಥ್ ಇಂಡಿಯನ್ ಊಟ 85 ರೂ.ನಿಂದ $95ಕ್ಕೆ ಏರಿಕೆ ರೈಸ್ ಬಾತ್ 40 ರೂ.ನಿಂದ 50 ರೂಪಾಯಿಗೆ ಹೆಚ್ಚಳ ರವಾ ಇಡ್ಲಿ ಬೆಲೆ 40 ರೂ.ನಿಂದ 45 ರೂಪಾಯಿಗೆ ಏರಿಕೆ ಅಕ್ಕಿ ರೊಟ್ಟಿ ಬೆಲೆ 45 ರೂ.ನಿಂದ 50 ರೂಪಾಯಿಗೆ ಏರಿಕೆ ಫ್ರೈಡ್ ರೈಸ್ ಬೆಲೆ 100 ರೂ.ನಿಂದ 110 ರೂಪಾಯಿಗೆ ಏರಿಕೆ ಗೋಬಿ ಮಂಚೂರಿ 1 ಪ್ಲೇಟ್ ₹100ರಿಂದ 110ರೂ.ಗೆ ಏರಿಕೆ ಪನ್ನೀರ್ ಮಂಚೂರಿ ₹110ರಿಂದ 120 ರೂಪಾಯಿಗೆ ಹೆಚ್ಚಳ ಒಂದು ಪ್ಲೇಟ್ ಪೂರಿ ₹65ರಿಂದ 70ರೂಪಾಯಿಗೆ ಏರಿಕೆ

ಇದನ್ನೂ ಓದಿ: Hotels to hike food price: ದರ ದರನೇ ಏರುತ್ತಿರುವ ಗ್ಯಾಸ್​ ರೇಟ್, ಗ್ರಾಹಕನಿಗೆ ಬರೆ ಎಳೆಯಲು ಹೋಟೆಲ್ ಮಾಲೀಕರ​ ಸಿದ್ಧತೆ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್