
ಇತ್ತೀಚೆಗಿನ ದಿನಗಳಲ್ಲಿ ಉದ್ಯಮಿಗಳು ಮಾತ್ರವಲ್ಲ ಜನ ಸಾಮಾನ್ಯರು ಕ್ರೆಡಿಟ್ ಕಾರ್ಡ್ ಗಳನ್ನು (credit cards) ಬಳಸುತ್ತಿದ್ದಾರೆ. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ತ್ವರಿತ ಸಾಲವನ್ನು ನೀಡುತ್ತದೆ. ಆದರೆ ಈ ಸಾಲದ ಮೊತ್ತವನ್ನು ನಿಮ್ಮ ಅನುಕೂಲಕ್ಕೆ ತಕ್ಕ ಅವಧಿಯಲ್ಲಿ ಮಾಸಿಕ ಕಂತುಗಳ ಮೂಲಕ ಪಾವತಿಸಬಹುದು. ಒಂದು ವೇಳೆ ಬಿಲ್ ಪಾವತಿಸದೇ ಹೋದಲ್ಲಿ ಸಾಲವು ಬೆಳೆದು ನಿಮ್ಮ ಕುತ್ತಿಗೆಗೆ ಉರುಳಾಗಬಹುದು. ಒಂದು ವೇಳೆ ನೀವು ಕೂಡ ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ಒದ್ದಾಡುತ್ತಿದ್ರೆ ಈ ಸಲಹೆ ಪಾಲಿಸಿ ಬಹುಬೇಗನೆ ಸಾಲ ಕ್ಲಿಯರ್ ಮಾಡಿ.
ಕಾರ್ಡ್ ಬಳಕೆಯನ್ನು ನಿಲ್ಲಿಸಿ: ಕ್ರೆಡಿಟ್ ಕಾರ್ಡ್ ಸಾಲ ಸಂಪೂರ್ಣವಾಗಿ ತೀರುವವರೆಗೆ ದೈನಂದಿನ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸಿ. ನಗದು ಅಥವಾ ಯುಪಿಐ ಬಳಸಿ.
ಕನಿಷ್ಠ ಮೊತ್ತ ಮಾತ್ರ ಪಾವತಿಸಬೇಡಿ: ಹೆಚ್ಚಿನವರು ಕನಿಷ್ಠ ಮೊತ್ತ ಮಾತ್ರ ಪಾವತಿಸುತ್ತಾರೆ. ಈ ಹಣವು ಕೇವಲ ಬಡ್ಡಿಗೆ ಮಾತ್ರ ಸರಿಯಾಗುತ್ತದೆ. ನೀವು ಪ್ರತಿ ತಿಂಗಳು ಕನಿಷ್ಠ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಿ. ಇದರಿಂದ ಬೇಗನೇ ಸಾಲವನ್ನು ತೀರಿಸಬಹುದು.
ಹೆಚ್ಚು ಬಡ್ಡಿದರ ಇರುವುದನ್ನು ಮೊದಲು ಪಾವತಿಸಿ: ನಿಮ್ಮ ಬಳಿಯಿರುವ ಕಾರ್ಡ್‌ಗಳಲ್ಲಿ ಯಾವ ಕಾರ್ಡ್‌ಗೆ ಅತಿ ಹೆಚ್ಚು ಬಡ್ಡಿದರ ಇದೆಯೋ ಅದನ್ನು ಮೊದಲು ತೀರಿಸಿ.
ಉಳಿದ ಕಾರ್ಡ್‌ಗಳಿಗೆ ಕನಿಷ್ಠ ಮೊತ್ತವನ್ನು ಪಾವತಿಸಿ.
ಸ್ವಯಂಚಾಲಿತ ವಿಧಾನ ಆಯ್ಕೆ ಮಾಡಿ: ಸ್ವಯಂಚಾಲಿತ ವಿಧಾನವನ್ನು ಹೊಂದಿಸಿಕೊಳ್ಳಿ. ಹೀಗೆ ಮಾಡಿದ್ರೆ ನಿಗದಿತ ದಿನಾಂಕದಂದು ಕನಿಷ್ಠ ಮೊತ್ತವಾದರೂ ಕಡಿತಗೊಳ್ಳುತ್ತದೆ. ಬ್ಯಾಂಕ್ ಇದರಿಂದ ವಿಳಂಬ ಶುಲ್ಕ ವಿಧಿಸುವುದನ್ನು ತಪ್ಪಿಸಬಹುದು.
ಸಾಲಗಳ ಪಟ್ಟಿ ಮಾಡಿ: ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳನ್ನು ಬಳಸುತ್ತಿದ್ದರೆ, ಈ ಕಾರ್ಡ್‌ನ ಬಾಕಿ ಮೊತ್ತ, ಬಡ್ಡಿ ದರ ಮತ್ತು ಪಾವತಿ ದಿನಾಂಕವನ್ನು ಬರೆದಿಟ್ಟುಕೊಳ್ಳಿ. ಇದು ಕ್ರೆಡಿಟ್ ಕಾರ್ಡ್ ಸಾಲ ಎಷ್ಟಿವೆ ಎನ್ನುವ ಸ್ಪಷ್ಟ ಚಿತ್ರಣ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ