Shubman Gill: ಟೀಮ್ ಇಂಡಿಯಾ ಕ್ಯಾಪ್ಟನ್ ಶುಬ್​ಮನ್ ಗಿಲ್ ಆಸ್ತಿ, ಆದಾಯ, ಲಕ್ಷುರಿ ಕಾರುಗಳು…

Shubman Gill networth: ಎಡ್ಜ್​ಬಾಸ್ಟನ್​​ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ಶುಬ್​ಮನ್ ಗಿಲ್ ಹೊಸ ಸೆನ್ಸೇಶನ್ ಸೃಷ್ಟಿಸಿದ್ದಾರೆ. ಮೊದಲ ಪಂದ್ಯಕ್ಕಿಂತ ಭಿನ್ನವಾಗಿ ಮತ್ತು ಕೂಲ್ ಆಗಿ ಆಟವನ್ನು ನಿಭಾಯಿಸಿದ ಗಿಲ್ ತಮ್ಮ ನಿಜಜೀವನದಲ್ಲೂ ಕೂಲ್ ವ್ಯಕ್ತಿ. ಅವರ ಆಸ್ತಿಮೌಲ್ಯ, ಕ್ರಿಕೆಟ್ ಆದಾಯ, ಬ್ಯುಸಿನೆಸ್, ಕಾರುಗಳ ಕಲೆಕ್ಷನ್ ಇತ್ಯಾದಿ ವಿವರ ಇಲ್ಲಿದೆ...

Shubman Gill: ಟೀಮ್ ಇಂಡಿಯಾ ಕ್ಯಾಪ್ಟನ್ ಶುಬ್​ಮನ್ ಗಿಲ್ ಆಸ್ತಿ, ಆದಾಯ, ಲಕ್ಷುರಿ ಕಾರುಗಳು...
ಶುಬ್ಮನ್ ಗಿಲ್

Updated on: Jul 07, 2025 | 6:33 PM

ಎಡ್ಜ್​​ಬಾಸ್ಟನ್​​ನಲ್ಲಿ (Edgbaston) ಆತಿಥೇಯ ಆಂಗ್ಲರ ಪಡೆಯನ್ನು ಮೊದಲ ಬಾರಿಗೆ ಸೋಲಿಸಿದ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಬ್​ಮನ್ ಗಿಲ್ (Shubman Gill) ಈಗ ಭಾರತದ ಹೊಸ ಭವಿಷ್ಯ ಎನಿಸಿದ್ದಾರೆ. ಜೂನಿಯರ್ ಕ್ರಿಕೆಟ್ ಹಂತದಿಂದಲೂ ಮಿಂಚುತ್ತಾ ಬಂದಿರುವ ಗಿಲ್, ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ವರ್ಷ ಸವೆಸಿದ್ದಾರೆ. 25ರ ಹರೆಯದಲ್ಲಿ ಅವರು ಹಲವು ಕೋಟಿಗಳನ್ನು ಸಂಪಾದಿಸಿದ್ದಾರೆ.

ಶುಬ್ಮನ್ ಗಿಲ್ ಆಸ್ತಿಮೌಲ್ಯ 34 ಕೋಟಿ ರೂ?

ಅಂತಾರಾಷ್ಟ್ರೀಯ ಕ್ರಿಕೆಟ್, ಐಪಿಎಲ್, ಜಾಹೀರಾತು, ಹಾಗೂ ಹೂಡಿಕೆ ಇತ್ಯಾದಿ ಮೂಲಕ ಶುಬ್ಮನ್ ಗಿಲ್ ಆದಾಯ ಗಳಿಸುತ್ತಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 34 ಕೋಟಿ ರೂ ಎಂದು ವರದಿಗಳು ಹೇಳುತ್ತಿವೆ.

ಶುಬ್​​ಮನ್ ಗಿಲ್ ಅವರ ಮಾಸಿಕ ಆದಾಯ 50 ಲಕ್ಷ ರೂಗೂ ಹೆಚ್ಚಿದೆ. ಅವರ ವಾರ್ಷಿಕ ಗಳಿಕೆ ಸುಮಾರು 4ರಿಂದ 7 ಕೋಟಿ ರೂ ಇದೆ.

ಬಿಸಿಸಿಐನಿಂದ ಅವರಿಗೆ ಗ್ರೇಡ್ ಎ ಕಾಂಟ್ರಾಕ್ಟ್ ಸಿಕ್ಕಿದೆ. ವರ್ಷಕ್ಕೆ ಏನಿಲ್ಲವೆಂದರೂ 7 ಕೋಟಿ ರೂ ಸಿಗುತ್ತದೆ. ಇದರ ಜೊತೆಗೆ ಪ್ರತೀ ಪಂದ್ಯಕ್ಕೆ ಪ್ರತ್ಯೇಕ ಹಣ ಸಿಗುತ್ತದೆ.

ಇದನ್ನೂ ಓದಿ: ಸಂಜೋಗ್ ಗುಪ್ತಾ, ಐಸಿಸಿಗೆ ಹೊಸ ಸಿಇಒ; ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚುಕ್ಕಾಣಿ ಹಿಡಿದ ಜಿಯೋಸ್ಟಾರ್ ಸಿಇಒ

ಐಪಿಎಲ್​​ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕ್ಯಾಪ್ಟನ್ ಆಗಿರುವ ಅವರು ಪ್ರತೀ ಸೀಸನ್​​ಗೆ 16.5 ಕೋಟಿ ರೂ ಪಡೆಯುತ್ತಾರೆ.

ಇದರ ಜೊತೆಗೆ ಶುಬ್​​ಮನ್ ಗಿಲ್ ಅವರ ಜನಪ್ರಿಯತೆ ಹೆಚ್ಚಿದಂತೆ, ಜಾಹೀರಾತು ಕ್ಷೇತ್ರದಲ್ಲಿ ಅವರ ಬೇಡಿಕೆಯೂ ಸಹಜವಾಗಿ ಹೆಚ್ಚುತ್ತಿದೆ. ಹಲವು ಬ್ರ್ಯಾಂಡ್​​ಗಳ ಆ್ಯಡ್​​ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಶುಬ್ಮನ್ ಗಿಲ್ ಬಳಿ ಇರುವ ಲಕ್ಷುರಿ ಕಾರುಗಳು

ಶುಬ್ಮನ್ ಗಿಲ್ ಕಾರು ಪ್ರಿಯರು. ಅವರ ಬಳಿ ಬಹಳ ಒಳ್ಳೆಯ ಕಾರುಗಳಿವೆ. ರೇಂಜ್ ರೋವರ್ ವೇಲರ್, ಮರ್ಸಿಡಸ್ ಬೆಂಜ್ ಇ350, ಮಹೀಂದ್ರ ಥಾರ್ ಇತ್ಯಾದಿ ಕಾರು ಮತ್ತು ಬೈಕುಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: EPF tax: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್

ಶುಬ್ಮನ್ ಗಿಲ್ ಕ್ರಿಕೆಟ್ ಯಶಸ್ಸಿನ ಹಿಂದೆ ಅಪ್ಪ…

ಶುಬ್ಮನ್ ಗಿಲ್ ಪಂಜಾಬ್​ನವರು. ಅವರ ತಂದೆ ಲಖ್ವಿಂದರ್ ಸಿಂಗ್ ಅವರು ವೃತ್ತಿಯಲ್ಲಿ ರೈತರು. ಮಗ ಟೀಮ್ ಇಂಡಿಯಾದಲ್ಲಿ ಆಡಬೇಕು ಎನ್ನುವುದು ಅವರ ಕನಸಾಗಿತ್ತು. ತಮ್ಮ ಕೃಷಿ ಜಮೀನಿನಲ್ಲೇ ಮಗನ ಕ್ರಿಕೆಟ್ ಅಭ್ಯಾಸಕ್ಕೆಂದು ಪ್ರಾಕ್ಟೀಸ್ ಪಿಚ್​​ವೊಂದನ್ನು ನಿರ್ಮಿಸಿದ್ದರು. ಶುಬ್ಮನ್ ಗಿಲ್ ಒಂದು ಹಂತ ದಾಟಿದಾಗ ಅವರನ್ನು ಮೊಹಾಲಿಯ ಪಿಸಿಎ ಅಕಾಡೆಮಿಗೆ ಸೇರಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ