ಭಾರತದ ಕ್ರಿಪ್ಟೋ ಎಕ್ಸ್​ಚೇಂಜ್ CoinDCX ಸರ್ವರ್ ಹ್ಯಾಕ್; 44 ಮಿಲಿಯನ್ ಡಾಲರ್ ಕಣ್ಮರೆ

Crypto Exchange CoinDCX server hacked: ಮುಂಬೈ ಮೂಲದ CoinDCX ಎನ್ನುವ ಭಾರತೀಯ ಕ್ರಿಪ್ಟೋಕರೆನ್ಸಿ ಎಕ್ಸ್​ಚೇಂಜ್​ನಲ್ಲಿ ಸರ್ವರ್ ಅನ್ನು ಹ್ಯಾಕ್ ಮಾಡಲಾಗಿದೆ. ವರದಿ ಪ್ರಕಾರ 44 ಮಿಲಿಯನ್ ಡಾಲರ್ ಹಣವನ್ನು ಲಪಟಾಯಿಸಲಾಗಿದೆ. CoinDCX ಸಹ-ಸಂಸ್ಥಾಪಕ ಸುಮಿತ್ ಗುಪ್ತಾ ಈ ವಿಷಯವನ್ನು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಕ್ರಿಪ್ಟೋ ಎಕ್ಸ್​ಚೇಂಜ್ CoinDCX ಸರ್ವರ್ ಹ್ಯಾಕ್; 44 ಮಿಲಿಯನ್ ಡಾಲರ್ ಕಣ್ಮರೆ
ಕಾಯಿನ್ ಡಿಸಿಎಕ್ಸ್

Updated on: Jul 21, 2025 | 11:15 AM

ನವದೆಹಲಿ, ಜುಲೈ 21: ಭಾರತದ ಕ್ರಿಪ್ಟೋಕರೆನ್ಸಿ ಎಕ್ಸ್​ಚೇಂಜ್ ಕಂಪನಿಯಾದ CoinDCXನ ಸರ್ವರ್ ಅನ್ನು ಹ್ಯಾಕ್ ಮಾಡಲಾಗಿದ್ದು, 44 ಮಿಲಿಯನ್ ಡಾಲರ್ (378 ಕೋಟಿ ರೂ) ಮೊತ್ತದ ಕ್ರಿಪ್ಟೋ ಆಸ್ತಿಗಳು ಕಳುವಾಗಿವೆ ಎನ್ನಲಾಗಿದೆ. ಮುಂಬೈ ಮೂಲದ ಕಾಯಿನ್​ಡಿಸಿಎಕ್ಸ್ ಕಂಪನಿಯೇ (Cryptocurrency exchange company) ಸ್ವತಃ ಈ ವಿಷಯವನ್ನು ತಿಳಿಸಿದೆ. ಮೊನ್ನೆ ಶನಿವಾರ ಈ ಹ್ಯಾಕ್ ಆಗಿರುವ ಶಂಕೆ ಇದೆ. ಆದರೆ, ಗ್ರಾಹಕರ ಆಸ್ತಿಗಳು ಸುರಕ್ಷಿತವಾಗಿವೆ ಎಂದೂ ಈ ಕಂಪನಿ ಸ್ಪಷ್ಟಪಡಿಸಿದೆ.

‘ಇನ್ನೊಂದು ವಿನಿಮಯ ಕೇಂದ್ರಕ್ಕೆ ಲಿಕ್ವಿಡಿಟಿ ಪ್ರಾವಿಶನ್​ಗಾಗಿ ಬಳಕೆಯಾಗುತ್ತಿದ್ದ ನಮ್ಮ ಒಂದು ಆಪರೇಷನಲ್ ಅಕೌಂಟ್ ಅನ್ನು ಹ್ಯಾಕ್ ಮಾಡಲಾಗಿದೆ’ ಎಂದು CoinDCX ಸಹ-ಸಂಸ್ಥಾಪಕ ಸುಮಿತ್ ಗುಪ್ತಾ ಹೇಳಿದ್ದಾರೆ.

ಈ ಹ್ಯಾಕಿಂಗ್​ನಿಂದ ಆಗಿರುವ ನಷ್ಟವನ್ನು ಕಂಪನಿಯ ಟ್ರೆಷರಿ ರಿಸರ್ವ್ಸ್​ನಿಂದ ಭರಿಸುವುದಾಗಿ ಸುಮಿತ್ ಗುಪ್ತಾ ತಿಳಿಸಿದ್ದಾರೆ.

ಇದನ್ನೂ ಓದಿ: Post Office plans: ಪೋಸ್ಟ್ ಆಫೀಸ್​ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ

‘ಯಾವುದೇ ಗ್ರಾಹಕರ ಫಂಡ್​ಗಳಿಗೆ ಏನೂ ಆಗಿಲ್ಲ. ನಿಮ್ಮ ಆಸ್ತಿಗಳೆಲ್ಲವೂ ಸುರಕ್ಷಿತವಾಗಿದೆ. ಟ್ರೇಡಿಂಗ್ ಚುಟವಟಿಕೆ ಪೂರ್ಣವಾಗಿ ಕಾರ್ಯಾತ್ಮಕವಾಗಿದೆ. ಹ್ಯಾಕ್ ಆದ ಆಪರೇಷನಲ್ ಅಕೌಂಟ್​ಗೆ ಕೂಡಲೇ ಪ್ರತ್ಯೇಕಗೊಳಿಸಿದ್ದೇವೆ. ಗ್ರಾಹಕರ ವ್ಯಾಲಟ್​ಗಳು ಆಪರೇಷನಲ್ ಅಕೌಂಟ್​ಗಳಿಂದ ಪ್ರತ್ಯೇಕವಾಗಿರುವುದರಿಂದ ಹೆಚ್ಚಿನ ಹಾನಿಯಾಗಿಲ್ಲ’ ಎಂದು ಸುಮಿತ್ ಗುಪ್ತಾ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ವಿವರಿಸಿದ್ದಾರೆ.

ಸುಮಿತ್ ಗುಪ್ತಾ ಎಕ್ಸ್ ಪೋಸ್ಟ್

ಭಯದಿಂದ ಕ್ರಿಪ್ಟೋ ಮಾರದಿರಿ ಎಂದು ವಿನಂತಿ…

CoinDCX ಪ್ಲಾಟ್​ಫಾರ್ಮ್ ಸುರಕ್ಷಿತವಾಗಿದೆ. ಯಾವಾಗ ಬೇಕಾದರೂ ರುಪಾಯಿ ಹಿಂಪಡೆಯಬಹುದು. ಆದರೆ, ಗಾಬರಿಯಿಂದ ನಿಮ್ಮ ಆಸ್ತಿಗಳನ್ನು ಮಾರಬೇಡಿ. ಇದರಿಂದ ಕಡಿಮೆ ಬೆಲೆ ಸಿಗಬಹುದು ಅಥವಾ ಅನವಶ್ಯಕ ನಷ್ಟ ಎದುರಾಗಬಹುದು ಎಂದೂ ಕ್ರಿಪ್ಟೋ ಎಕ್ಸ್​ಚೇಂಜ್ ಮುಖ್ಯಸ್ಥರು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಿದ ಬಳಿಕ ಕ್ರೆಡಿಟ್ ಸ್ಕೋರ್ ಅಪ್​ಡೇಟ್ ಆಗಬೇಕು; ಇಲ್ಲದಿದ್ದರೆ ಹೀಗೆ ಮಾಡಿ

ಹ್ಯಾಕ್ ಮಾಡಿ ತೆಗೆಯಲಾದ ಆಸ್ತಿಯು ಎಲ್ಲಿ ಹೋಯಿತು ಎಂಬುದನ್ನು ಪತ್ತೆ ಮಾಡುವ ಪ್ರಯತ್ನವಾಗುತ್ತಿದೆ. ಹಾಗೆಯೇ, ತಂತ್ರಾಂಶದಲ್ಲಿ ಇರುವ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸಲು ಬಗ್ ಬೌಂಟಿ ಪ್ರೋಗ್ರಾಮ್ ಅನ್ನು ನಡೆಸಲಾಗುತ್ತಿದೆ ಎಂದು ಸುಮಿತ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ