Cryptocurrencies: ಕ್ರಿಪ್ಟೋಕರೆನ್ಸಿಗಳಲ್ಲಿ ಭಾರೀ ಕುಸಿತ; ಕಳೆದ 24 ಗಂಟೆಯಲ್ಲಿ ಬಿಟ್​ಕಾಯಿನ್​ ಶೇ 10ಕ್ಕೂ ಹೆಚ್ಚು ಇಳಿಕೆ

| Updated By: Srinivas Mata

Updated on: Dec 04, 2021 | 7:05 PM

ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆಯು ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಪ್ರಮುಖ ಕ್ರಿಪ್ಟೋಗಳ ಬೆಲೆ ವಿವರ ಇಲ್ಲಿದೆ.

Cryptocurrencies: ಕ್ರಿಪ್ಟೋಕರೆನ್ಸಿಗಳಲ್ಲಿ ಭಾರೀ ಕುಸಿತ; ಕಳೆದ 24 ಗಂಟೆಯಲ್ಲಿ ಬಿಟ್​ಕಾಯಿನ್​ ಶೇ 10ಕ್ಕೂ ಹೆಚ್ಚು ಇಳಿಕೆ
ಸಾಂದರ್ಭಿಕ ಚಿತ್ರ
Follow us on

ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಆದ ಬಿಟ್‌ಕಾಯಿನ್ ಬೆಲೆಗಳು ಕಳೆದ 24 ಗಂಟೆಗಳಲ್ಲಿ ಶೇ 16.6ರಷ್ಟು ಕುಸಿದು, 47,164.46 ಯುಎಸ್​ಡಿನಲ್ಲಿ ವಹಿವಾಟು ನಡೆಸಿತು/ CoinGecko ಪ್ರಕಾರ, ಶನಿವಾರ ಬೆಳಗ್ಗೆ ಬಿಟ್‌ಕಾಯಿನ್ ಕುಸಿತ ಕಂಡಿತು. ಒಂದು ಗಂಟೆಯಲ್ಲಿ ಸುಮಾರು 10,000 ಯುಎಸ್​ಡಿ ಕುಸಿದು, 47,000 ಡಾಲರ್​ವರೆಗೆ ಪುಟಿದೇಳುವ ಮೊದಲು 42,000 ಡಾಲರ್​ಗೆ ತಾತ್ಕಾಲಿಕವಾಗಿ ಕಡಿಮೆಯಾಗಿತ್ತು. Coinglass.com ಮಾಹಿತಿಯ ಪ್ರಕಾರ, ಸುಮಾರು 2.4 ಶತಕೋಟಿ ಡಾಲರ್ ಎಕ್ಸ್​ಪೋಷರ್ ದೀರ್ಘಾವಧಿ ಮತ್ತು ಅಲ್ಪಾವಧಿ ಮಾರಾಟ ಎರಡನ್ನೂ ಶನಿವಾರ ನಗದೀಕರಿಸಲಾಯಿತು. ಸೆಪ್ಟೆಂಬರ್ 7ರಿಂದ ಅತಿ ಹೆಚ್ಚಿನದಾಗಿದೆ. ನವೆಂಬರ್ 10ರಂದು 69,000 ಡಾಲರ್ ದಾಖಲೆಯನ್ನು ಮುಟ್ಟಿದ ನಂತರ ಬಿಟ್‌ಕಾಯಿನ್ ಸುಮಾರು 21,000 ಯುಎಸ್​ಡಿ ಇಳಿಕೆ ಕಂಡಿದೆ.

ಅಲ್ಲದೆ, ಈಥರ್, ಎಥೆರಿಯಮ್ ಬ್ಲಾಕ್‌ಚೈನ್‌ಗೆ ಜೋಡಣೆ ಮಾಡಲಾದ ಕಾಯಿನ್ ಮತ್ತು ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ. ಶನಿವಾರ ಶೇ 15.9ರಷ್ಟು ಕುಸಿದು 3,848.23 ಯುಎಸ್​ಡಿ ತಲುಪಿತು. ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಬಂಡವಾಳವು ಇಂದು 2.3 ಟ್ರಿಲಿಯನ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ ಶೇ -16.4% ಬದಲಾವಣೆಯಾಗಿದೆ. ಕೊನೆಯ ದಿನದಲ್ಲಿ ಒಟ್ಟು ಕ್ರಿಪ್ಟೋಕರೆನ್ಸಿ ವ್ಯಾಪಾರದ ಪ್ರಮಾಣವು 201 ಬಿಲಿಯನ್ ಡಾಲರ್ ಆಗಿದೆ. ಬಿಟ್​ಕಾಯಿನ್ ಪ್ರಾಬಲ್ಯವು ಶೇ 38.8 ಮತ್ತು ಎಥೆರಿಯಂ ಪ್ರಾಬಲ್ಯವು ಶೇ 19.9ರಷ್ಟಿದೆ.

Dogecoin ಶನಿವಾರ ಕೂಡ ಇಳಿಕೆ ಹಾದಿಯಲ್ಲಿತ್ತು. ಈ ಕ್ರಿಪ್ಟೋಕರೆನ್ಸಿ ಇಂದು ಶೇ 22.2 ಕುಸಿದು, 0.163772 ಡಾಲರ್ ಆಗಿದೆ. ಶಿಬಾ ಇನು ಅದೇ ಅವಧಿಯಲ್ಲಿ ಶೇ 13.2ರಷ್ಟು ಕುಸಿದು, 0.00003604 ಡಾಲರ್​ಗೆ ತಲುಪಿದೆ. ಇತರ ಕ್ರಿಪ್ಟೋಕರೆನ್ಸಿಗಳಾದ Litecoin (ಲೈಟ್​ಕಾಯಿನ್), XRP, Polkadot, Uniswap (ಯುನಿಸ್ವಾಪ್), Stellar (ಸ್ಟೆಲ್ಲಾರ್) ಸಹ ಕಳೆದ 24 ಗಂಟೆಗಳಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದೆ.

ಕ್ರಿಪ್ಟೋಕರೆನ್ಸಿಗಳಲ್ಲಿನ ಬದಲಾವಣೆಗಳು ಹಣಕಾಸಿನ ಮಾರುಕಟ್ಟೆಗಳಿಗೆ ಏರಿಳಿತದ ಅವಧಿಯ ಮಧ್ಯೆ ಬರುತ್ತವೆ. ಹೆಚ್ಚುತ್ತಿರುವ ಹಣದುಬ್ಬರವು ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾವನ್ನು ವಿತ್ತೀಯ ನೀತಿಯನ್ನು ಬಿಗಿಗೊಳಿಸುವಂತೆ ಒತ್ತಡ ಸೃಷ್ಟಿ ಮಾಡಿದೆ. ಕೊರೊನಾ ವೈರಸ್‌ನ ಒಮಿಕ್ರಾನ್ ರೂಪಾಂತರವು ಜಾಗತಿಕ ಆರ್ಥಿಕ ಪುನರಾರಂಭಕ್ಕೆ ಪ್ರಭಾವ ಹೇಗೆ ಬೀರಬಹುದು ಎಂಬ ಆತಂಕ ಇದೆ.

ಇದನ್ನೂ ಓದಿ: Cryptocurrencies: ಕ್ರಿಪ್ಟೋಕರೆನ್ಸಿಗಳಿಗೆ ಹೊಸ ತೆರಿಗೆ ಕಾನೂನು ತರಲು ಕೇಂದ್ರ ಸರ್ಕಾರದ ಚಿಂತನೆ