AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯಲ್ಲಿ ರಾಜ್ಯದ ಭಾಗ 1/3ರಷ್ಟಿರಬೇಕು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಆಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಗೆ ಭಾರತದ ಕೊಡುಗೆ ಮೂರನೇ ಒಂದು ಭಾಗದಷ್ಟು ಇರಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಳಿದ್ದಾರೆ.

ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯಲ್ಲಿ ರಾಜ್ಯದ ಭಾಗ 1/3ರಷ್ಟಿರಬೇಕು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: Srinivas Mata|

Updated on: Dec 04, 2021 | 10:36 PM

Share

ಬೆಂಗಳೂರು: 2024-25ರ ವೇಳೆಗೆ ದೇಶವು 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಸಾಧಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಇದರ 1/3 ಭಾಗದಷ್ಟು ಕೊಡುಗೆ ಕರ್ನಾಟಕದಿಂದ ಆಗಬೇಕು. ಅದು ನನ್ನ ಗುರಿ. ಇದನ್ನು ಸಾಧಿಸಲು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಲು ಸಿದ್ಧರಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶನಿವಾರ ಡಬ್ಲ್ಯೂ.ಎಂ.ಜಿ ಸಮೂಹ ಆಯೋಜಿಸಿದ್ದ ಕರ್ನಾಟಕ- ಇನ್​ಫೈನೈಟ್ ಅಪಾರ್ಚುನಿಟೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನವ ಕರ್ನಾಟಕದಿಂದ ನವ ಭಾರತವನ್ನು ಕಟ್ಟಬೇಕು ಎಂದು ಬಸವರಾಜ ಬೊಮ್ಮಾಯಿ ಸಲಹೆ ಮಾಡಿದರು.

ಪ್ರತಿಯೊಬ್ಬರೂ ಸಾಧಕರಾಗಬೇಕು ಪ್ರತಿಯೊಬ್ಬರೂ ಸಾಧಕರಾಗಬೇಕು ಎನ್ನುವುದು ನಮ್ಮ ಗುರಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲರಿಗೂ ಅವಕಾಶಗಳ ಒದಗಿಸುವ ಹೊಸ ಭಾರತದ ಬಗ್ಗೆ ಕನಸು ಕಂಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಭಾರತವು ವಿಶ್ವವನ್ನು ಮುನ್ನಡೆಸುವಂತೆ ಆಗಬೇಕು. ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರ ಜತೆಗೆ ಹೆಜ್ಜೆಯಿಡಲು ಕರ್ನಾಟಕ ಸರ್ಕಾರ ಸಿದ್ಧವಿದೆ. ಅವರು ಯಶಸ್ವಿ ಆಗಲು ಮಾತ್ರವಲ್ಲದೆ ಸಾಧನೆ ಮಾಡಲೂ ಹೆಗಲಿಗೆ ಹೆಗಲು ನೀಡುತ್ತೇವೆ ಎಂದು ಭರವಸೆ ನೀಡಿದರು.

ಮಹಿಳಾ ಶಕ್ತಿ ಮಹಿಳಾ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಶಕ್ತಿ, ಪ್ರಾಮಾಣಿಕತೆ ಮಹಿಳೆಯರಿಗೆ ಸಹಜವಾಗಿಯೇ ಬಂದಿರುವ ಗುಣಗಳು. ಈ ಮೂಲಗುಣಗಳೇ ಒಂದು ರಾಜ್ಯ, ಸಮಾಜ ಹಾಗೂ ವ್ಯಕ್ತಿಯ ಅನಂತ ಬೆಳವಣಿಗೆಗೆ ಪೂರಕವಾಗಿವೆ ಎಂದರು.

ಅನಂತ ಅವಕಾಶ ಅನಂತ ಅವಕಾಶಗಳನ್ನು ಹುಡುಕಲು ಸೀಮಿತ ಅಂಶಗಳನ್ನು ಪರಿಶೀಲಿಸಬೇಕು. ಕರ್ನಾಟಕದಲ್ಲಿ ಅನಂತ ಅವಕಾಶಗಳಿದ್ದು, ಖಚಿತವಾದ ರಹದಾರಿ ಹಾಗೂ ಅನುಷ್ಠಾನ ತಂತ್ರಗಳು ನಮ್ಮಲ್ಲಿವೆ. ಕರ್ನಾಟಕಕ್ಕೆ ಬಂದರೆ ಬೇಕಾದದ್ದು ಮಾತ್ರವಲ್ಲದೆ ಅವರ ನಿರೀಕ್ಷೆಗೂ ಮೀರಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಪ್ರತಿಯೊಬ್ಬರೂ ಚರಿತ್ರೆಯ ಫಲಾನುಭವಿಗಳು ಕರ್ನಾಟಕಕ್ಕೆ ತನ್ನದೇ ಇತಿಹಾಸವಿದೆ. ಈ ರಾಜ್ಯದ ಪ್ರತಿ ವ್ಯಕ್ತಿಯೂ ಈ ಚರಿತ್ರೆಯ ಫಲಾನುಭವಿಗಳೇ ಆಗಿದ್ದಾರೆ. ಮೈಸೂರು ಮಹಾರಾಜರು ದೂರದೃಷ್ಟಿ ಹೊಂದಿದ್ದ ಅತ್ಯಂತ ಪ್ರಗತಿಶೀಲ ರಾಜರಾಗಿದ್ದರು. ಮಹಿಳೆಯರಿಗೆ ಪ್ರತ್ಯೇಕ ಕಾಲೇಜು, ಬ್ಯಾಂಕ್ ಸ್ಥಾಪನೆ ಸೇರಿದಂತೆ ಶಾಯಿಯಿಂದ ಮೊದಲುಗೊಂಡು ಸ್ಟೀಲ್, ಸಾಬೂನು, ಕಾಗದದವರೆಗೆ ಕೈಗಾರಿಕೆಗಳ ಸ್ಥಾಪನೆ ಮಾಡಿದ ಪ್ರಥಮ ವ್ಯಕ್ತಿ ಅವರು. ಮೊಟ್ಟ ಮೊದಲ ಬಾರಿಗೆ ಜಲಶಕ್ತಿಯ ಬಳಕೆ ಮಾಡಿದರು. ವಿಶ್ವೇಶ್ವರಯ್ಯ ಅವರಂಥ ದೂರದೃಷ್ಟಿಯುಳ್ಳ ನಾಯಕರು ಅವರೊಂದಿಗೆ ಇದ್ದುದರ ಪರಿಣಾಮವಾಗಿ ನಮ್ಮಲ್ಲಿ ರಕ್ಷಣಾ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು, ಏರೋಸ್ಪೇಸ್ ತಂತ್ರಜ್ಞಾನ, ಎಚ್ಎಎಲ್, ಎನ್ಎಎಲ್, ಬಿಎಚ್ಇಎಲ್ ಮುಂತಾದ ಪ್ರಮುಖ ಕೈಗಾರಿಕೆಗಳು ಇವೆ ಎಂದರು.

ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ ಕರ್ನಾಟಕ ಮೊದಲಿನಿಂದಲೂ ಎಲೆಕ್ಟ್ರಾನಿಕ್​ನಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ. ಎಲೆಕ್ಟ್ರಾನಿಕ್ ಯಂತ್ರೋಪಕರಣ, ಉತ್ಪಾದನೆ, ಎಂಜಿನಿಯರ್​ಗಳು ಲಭ್ಯ ಇದ್ದದ್ದು, ಕಂಪ್ಯೂಟರ್ ಸೈನ್ಸ್​ಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ಕರ್ನಾಟಕ ಜ್ಞಾನ, ತಂತ್ರಜ್ಞಾನದ ಭಂಡಾರ. ಅಕ್ಷರ, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನ ಇರುವುದರಿಂದ ಐಟಿ, ಬಿಟಿಯಲ್ಲಿಯೂ ಮುಂಚೂಣಿಯಲ್ಲಿದೆ.

ದೇಶದ ಪ್ರಥಮ ಐಟಿ ಕಂಪೆನಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ತಂತ್ರಜ್ಞಾನ ಮತ್ತು ಕೌಶಲ ನಮ್ಮಲ್ಲಿದ್ದು, ಇಲ್ಲಿನ ವಾತಾವರಣ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಎಲ್ಲ ಪ್ರಥಮ ಎಂಜಿನಿಯರ್​ಗಳನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಕೆಲವು ದಶಕಗಳ ನಂತರ ಅನಂತ ಅವಕಾಶಗಳನ್ನು ಬಳಸಿಕೊಂಡ ಸಾಧನೆಗೈದ ಎಂಜಿನಿಯರ್​ಗಳನ್ನು ಇಲ್ಲಿಯೇ ಸ್ಮರಿಸುವಂತಾಗಬೇಕು ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಬಂಡವಾಳ ಹೂಡಲು ಫಿನ್ ಟೆಕ್‌ ಕಂಪನಿಗಳಿಗೆ ಆಹ್ವಾನ ನೀಡಿದ ಸಚಿವ ಮುರುಗೇಶ್ ನಿರಾಣಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!