Petrol Price Today: ದೇಶದಲ್ಲಿ ಪೆಟ್ರೋಲ್​ಗೆ ಅತ್ಯಂತ ಕಡಿಮೆ ಬೆಲೆ ಇರುವುದು ಎಲ್ಲಿ ಗೊತ್ತಾ?: ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ

ಸದ್ಯ ರಾಷ್ಟ್ರದಲ್ಲಿ ಸುಮಾರು 27ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್​ ದರ 100 ರೂಪಾಯಿ ಮೇಲಿದೆ. ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಪೆಟ್ರೋಲ್​-ಡೀಸೆಲ್​ ಬೆಲೆ ಬೇರೆಯದ್ದೇ ಆಗಿರುತ್ತದೆ.

Petrol Price Today: ದೇಶದಲ್ಲಿ ಪೆಟ್ರೋಲ್​ಗೆ ಅತ್ಯಂತ ಕಡಿಮೆ ಬೆಲೆ ಇರುವುದು ಎಲ್ಲಿ ಗೊತ್ತಾ?: ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Dec 11, 2021 | 8:03 AM

Petrol Diesel Price Today | ಕಳೆದ ನವೆಂಬರ್​ 4ರಂದು ಅಂದರೆ ದೀಪಾವಳಿ ಮುನ್ನಾದಿನ ಕೇಂದ್ರ ಸರ್ಕಾರ ಪೆಟ್ರೋಲ್​-ಡೀಸೆಲ್​​ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದೆ. ಅಂದಿನಿಂದಲೂ ಭಾರತದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂದು (ಡಿ.5) ಕೂಡ ಪೆಟ್ರೋಲ್​-ಡೀಸೆಲ್​ ಬೆಲೆ ಸ್ಥಿರವಾಗಿದ್ದು, ಯಾವುದೇ ಪ್ರಮುಖ ನಗರಗಳಲ್ಲೂ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಅಂದಹಾಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊನ್ನೆಯೇ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದು, ದೇಶದಲ್ಲೂ ಪೆಟ್ರೋಲ್​-ಡೀಸೆಲ್​ ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಸದ್ಯಕ್ಕಂತೂ ಯಾವುದೇ ಚೇಂಜ್​ ಮಾಡಿಲ್ಲ.

ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿದ ಮೇಲೆ, ಬಿಜೆಪಿ ಸರ್ಕಾರವಿರುವ ಎಲ್ಲ ರಾಜ್ಯಗಳೂ ಕೂಡ ತಮ್ಮ ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದ್ದವು. ಹಾಗೇ ಕೆಲವೇ ದಿನಗಳ ಹಿಂದ ದೆಹಲಿಯ ಆಪ್​ ಸರ್ಕಾರ ಕೂಡ ಪೆಟ್ರೋಲ್​ ಮೇಲಿನ ವ್ಯಾಟ್​ (VAT-ಮೌಲ್ಯವರ್ಧಿತ ತೆರಿಗೆ)ನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 8 ರೂ.ಕಡಿಮೆಯಾಗಿದೆ. ಆದರೆ ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ರಾಜಸ್ಥಾನದಲ್ಲಿ ಸಿಕ್ಕಾಪಟೆ ದುಬಾರಿ ಸದ್ಯ ರಾಷ್ಟ್ರದಲ್ಲಿ ಸುಮಾರು 27ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್​ ದರ 100 ರೂಪಾಯಿ ಮೇಲಿದೆ. ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಪೆಟ್ರೋಲ್​-ಡೀಸೆಲ್​ ಬೆಲೆ ಬೇರೆಯದ್ದೇ ಆಗಿರುತ್ತದೆ. ಅದು ಆಯಾ ರಾಜ್ಯಗಳ ವ್ಯಾಟ್ (VAT) ಮೇಲೆ ಅವಲಂಬಿತವಾಗಿರುತ್ತದೆ.  ಈ VAT ಆಧಾರದ ಮೇಲೆ ಹೇಳುವುದಾದರೆ ಸದ್ಯ ರಾಜಸ್ಥಾನಲ್ಲಿ ಅತ್ಯಂತ ಹೆಚ್ಚು ವ್ಯಾಟ್​ ಇದೆ. ಇಲ್ಲಿನ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 112 ರೂಪಾಯಿ ಇದ್ದು ಇದೇ ಹೈಯೆಸ್ಟ್ ಎನ್ನಿಸಿಕೊಂಡಿದೆ. ಇಲ್ಲಿ ಡೀಸೆಲ್​ ಬೆಲೆಯೇ 95. 26 ರೂ.ಇದೆ. ಇನ್ನು ನಮ್ಮ ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಅತ್ಯಂತ ಕಡಿಮೆ ಇರುವ ಪ್ರದೇಶವೆಂದರೆ ಅಂಡಮಾನ್​-ನಿಕೋಬಾರ್​ನ ರಾಜಧಾನಿ ಪೋರ್ಟ್​ಬ್ಲೇರ್​​. ಇಲ್ಲಿ ಪೆಟ್ರೋಲ್​ ಬೆಲೆ ಪ್ರತಿಲೀಟರ್​ಗೆ 82.96 ರೂ. ಮತ್ತು ಡೀಸೆಲ್​ ದರ   77.13  ರೂಪಾಯಿ ಇದೆ.

ಎಷ್ಟಿದೆ ಮಹಾನಗರಗಳಲ್ಲಿ ಇಂದು ಇಂಧನ ದರ? ಭಾರತದ ಯಾವುದೇ ನಗರಗಳಲ್ಲೂ ಇಂದು ತೈಲಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ಬೆಲೆ 100.58 ರೂ. ಮತ್ತು ಡೀಸೆಲ್​ ಬೆಲೆ 85.01 ರೂ. ಇದ್ದರೆ, ಮೈಸೂರಿನಲ್ಲಿ ಪೆಟ್ರೋಲ್​ ದರ 100.08 ರೂ., ಡೀಸೆಲ್​ ದರ 84.56 ರೂ. ಆಗಿದೆ. ಹಾಗೇ ಮಂಗಳೂರಿನಲ್ಲಿ ಪೆಟ್ರೋಲ್​ 99.76 ರೂ. ಮತ್ತು ಡೀಸೆಲ್​ 84.24 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 86.67 ರೂ. ಇದ್ದರೆ, ಪೆಟ್ರೋಲ್​ ದರ 95.41 ರೂ.ಆಗಿದೆ. ಮುಂಬೈ ಮಹಾನಗರಿಯಲ್ಲೂ ಸಹ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ಪೆಟ್ರೋಲ್​ ದರ 109.98 ರೂ. ಮತ್ತು ಡೀಸೆಲ್​ ದರ 94.14 ರೂ. ಆಗಿದೆ. ಹಾಗೇ, ಚೆನ್ನೈನಲ್ಲಿ ಪೆಟ್ರೋಲ್​ ದರ 101.40 ರೂ. ಇದೆ.  ಡೀಸೆಲ್​ ದರ 91.43 ರೂ. ಆಗಿದೆ.

ಇದನ್ನೂ ಓದಿ: 

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

Published On - 10:12 am, Sun, 5 December 21

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ