ಕ್ರಿಪ್ಟೋಕರೆನ್ಸಿ ಬಿಟ್ಕಾಯಿನ್ ದರದಲ್ಲಿ ಇಳಿಕೆಯಾಗಿ, 42,155 ಯುಎಸ್ಡಿಯಲ್ಲಿ ವಹಿವಾಟು ನಡೆಸಿತು. ಕಳೆದ 24 ಗಂಟೆಯಲ್ಲಿ ಶೇ 1.68ರಷ್ಟು ಕುಸಿತ ಕಂಡಿದೆ. ಈ ಕ್ರಿಪ್ಟೋಕರೆನ್ಸಿಯ ಜಾಗತಿಕ ಮಾರುಕಟ್ಟೆ ಮೌಲ್ಯ 789.89 ಬಿಲಿಯನ್ ಯುಎಸ್ಡಿ ಇದೆ ಎಂದು coinsmarketcap.com ತಿಳಿಸಿದೆ. ಚೀನಾದ ರಿಯಲ್ ಎಸ್ಟೇಟ್ ಕಂಪೆನಿ ಎವರ್ಗ್ರ್ಯಾಂಡ್ ಬಿಕ್ಕಟ್ಟಿನ ಪರಿಣಾಮ ಈ ಇಳಿಕೆ ಮೇಲೆ ಆಗಿದೆ. ಅಂದಹಾಗೆ ಎವರ್ಗ್ರ್ಯಾಂಡ್ ಪ್ರಭಾವ ಜಾಗತಿಕವಾಗಿ ಎಲ್ಲ ಮಾರ್ಕೆಟ್ ಮೇಲೂ ಆಗಿದೆ. ಈ ಕುಸಿತದ ಹಾದಿಯು ಬಿಟ್ಕಾಯಿನ್ಗೆ ಮಾತ್ರ ಸೀಮಿತವಾಗಿಲ್ಲ. ಇತರ ಕ್ರಿಪ್ಟೋಕರೆನ್ಸಿಗಳಾದ ಎಥೆರಿಯಂ, Dogecoin ಮುಂತಾದವುಗಳ ಸಹ ಬೆಲೆ ಕಳೆದುಕೊಂಡಿವೆ. ಬಿಟ್ಕಾಯಿನ್ನ ಪ್ರತಿಸ್ಪರ್ಧಿಯಾದ ಎಥೆರಿಯಂ ಶೇ 5.23ರಷ್ಟು ಕುಸಿತ ಕಂಡು, 2,870.42 ಯುಎಸ್ಡಿಯಲ್ಲಿ ವಹಿವಾಟು ನಡೆಸುತ್ತಿತ್ತು. ಮತ್ತು ಇದರ ಜಾಗತಿಕ ಮಾರುಕಟ್ಟೆ ಮೌಲ್ಯ 336.02 ಬಿಲಿಯನ್ ಇದೆ. ಇನ್ನು ಕಾರ್ಡಾನೋ ಬಗ್ಗೆ ಹೇಳುವುದಾದರೆ ಶೇ 4.31ರಷ್ಟು ಇಳಿದು, 2.05 ಡಾಲರ್ನಲ್ಲಿ ವ್ಯವಹಾರ ಮಾಡುತ್ತಿದೆ. ಈ ಕ್ರಿಪ್ಟೋಕರೆನ್ಸಿ ಕಳೆದ ಒಂದು ವಾರದಲ್ಲಿ ಶೇ 14.32ರಷ್ಟು ಕುಸಿದಿದೆ. ಇದೇ ಹಾದಿಯನ್ನು ಅನುಸರಿಸಿರುವ ಬಿನಾನ್ಸ್ ಕಾಯಿನ್ ಶೇ 3.05ರಷ್ಟು ಇಳಿಕೆ ಕಂಡು, 354.96 ಯುಎಸ್ಡಿಯಲ್ಲಿ ವಹಿವಾಟು ನಡೆಸಿದೆ. ಆದರೆ ಕಳೆದ ಒಂದು ವಾರದಲ್ಲಿ ಶೇ 14.48ರಷ್ಟು ಕುಸಿತ ಕಂಡಿದೆ.
“ಚೀನಾದ ಎವರ್ಗ್ರ್ಯಾಂಡ್ ಪ್ರಾಪರ್ಟಿ ಸಮೂಹದ ವೈಫಲ್ಯಕ್ಕೆ ಕಳೆದ 24 ಗಂಟೆಯಲ್ಲಿ ಮಾರುಕಟ್ಟೆಗಳು ಅಲುಗಾಡುತ್ತಿವೆ. ಅಂದಹಾಗೆ ಈಕ್ವಿಟಿ ಮಾರುಕಟ್ಟೆ ಹಾಗೂ ಕ್ರಿಪ್ಟೋ ಮಾರುಕಟ್ಟೆಗೂ ಸಂಬಂಧ ಇದ್ದು, ರೀಟೇಲ್ ಹೂಡಿಕೆದಾರರು ಭಾರೀ ಏರಿಳಿತದ ಕ್ರಿಪ್ಟೋದಿಂದ ವೇಗವಾಗಿ ಹೊರಬರುತ್ತಿದ್ದಾರೆ. ಎಥೆರಿಯಂ 3000 ಯುಎಸ್ಡಿ ಮಟ್ಟದಿಂದ ಕೆಳಗೆ ಇಳಿದಿದೆ. ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್ಕಾಯಿನ್ 42,000 ಯುಎಸ್ಡಿ ಮಟ್ಟದಲ್ಲಿ ಸುತ್ತಾಡುತ್ತಿದೆ. ಇತರ ಸಣ್ಣ-ಪುಟ್ಟ ಪರ್ಯಾಯ ಆಯ್ಕೆಯ ಕ್ರಿಪ್ಟೋಕರೆನ್ಸಿಗಳು ಕೂಡ ಇಳಿಕೆ ಹಾದಿಯಲ್ಲೇ ಇವೆ,” ಎನ್ನುತ್ತಾರೆ ವಿಶ್ಲೇಷಕರು.
ಬಿಟ್ಕಾಯಿನ್ಗೆ 40,000 ಯುಎಸ್ಡಿ ಪ್ರಮುಖವಾದ ಸಪೋರ್ಟ್ ಮಟ್ಟ ಮತ್ತು ಎಥೆರಿಯಂಗೆ 2850 ಯುಎಸ್ಡಿ. ಜಾಗತಿಕ ಮಟ್ಟದಲ್ಲಿ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ ಶೇ 4.47ರಷ್ಟು ಕುಸಿದಿದ್ದು, 1.86 ಲಕ್ಷ ಕೋಟಿ ಡಾಲರ್ ಸಮೀಪ ಇದೆ. ಈ ಹಿಂದಿನ ದಿನದ ವಹಿವಾಟು ಪರಿಮಾಣವನ್ನು ಹೋಲಿಸಿದರೆ ಕಡಿಮೆ ಇದೆ. ಭಯದಲ್ಲಿ ಮಾರಾಟ ಮಾಡುವ ಪ್ರವೃತ್ತಿಯಿಂದ ಹೊರಬಂದಿರುವುದು ಮಾತ್ರ ಗೊತ್ತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಚೀನಾದ ಲೆಹ್ಮನ್ ಬ್ರದರ್ಸ್ ಎಂದು ಕರೆಸಿಕೊಂಡಿರುವ ಎವರ್ಗ್ರ್ಯಾಂಡ್ ಬಿಕ್ಕಟ್ಟು ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಚೀನಾ ಕಂಪೆನಿಯ ಬಿಕ್ಕಟ್ಟು ವಿಶ್ವದಾದ್ಯಂತ ಷೇರು ಮಾರುಕಟ್ಟೆಗಳ ಅನಿಶ್ಚಿತತೆಗೂ ಕಾರಣ ಆಗಿದೆ.
ಪ್ರಮುಖ ಕ್ರಿಪ್ಟೋಕರೆನ್ಸಿಗಳ ದರದ ವಿವರ ಸೆ.19ಕ್ಕೆ ಅನ್ವಯಿಸುವಂತೆ ಹೀಗಿದೆ:
ಬಿಟ್ಕಾಯಿನ್- 42,155 ಯುಎಸ್ಡಿ (ಶೇ -1.68) ಕಳೆದ 24 ಗಂಟೆಯಲ್ಲಿ
ಎಥೆರ್ – 2,870 ಯುಎಸ್ಡಿ (ಶೇ -5.23) ಕಳೆದ 24 ಗಂಟೆಯಲ್ಲಿ
ಕಾರ್ಡಾನೋ- 2.05 ಯುಎಸ್ಡಿ (ಶೇ -4.31) ಕಳೆದ 24 ಗಂಟೆಯಲ್ಲಿ
ಬಿನಾನ್ಸ್ ಕಾಯಿನ್- 354.96 ಯುಎಸ್ಡಿ (ಶೇ -3.05) ಕಳೆದ 24 ಗಂಟೆಯಲ್ಲಿ
Tether – 1.00 ಯುಎಸ್ಡಿ (ಶೇ 0.01) ಕಳೆದ 24 ಗಂಟೆಯಲ್ಲಿ
XRP- 0.9078 ಯುಎಸ್ಡಿ (ಶೇ -3.99) ಕಳೆದ 24 ಗಂಟೆಯಲ್ಲಿ
ಸೊಲಾನ- 131.18 ಯುಎಸ್ಡಿ (ಶೇ -6.01) ಕಳೆದ 24 ಗಂಟೆಯಲ್ಲಿ
Polkadot- 27.62 ಯುಎಸ್ಡಿ (ಶೇ -5.99) ಕಳೆದ 24 ಗಂಟೆಯಲ್ಲಿ
Dogecoin – 0.2066 ಯುಎಸ್ಡಿ (ಶೇ -1.84) ಕಳೆದ 24 ಗಂಟೆಯಲ್ಲಿ
ಇದನ್ನೂ ಓದಿ: Evergrande Collapse: 22.15 ಲಕ್ಷ ಕೋಟಿ ರೂ. ಚೀನಾದ ಎವರ್ಗ್ರ್ಯಾಂಡ್ ರಿಯಲ್ ಎಸ್ಟೇಟ್ ಕುಸಿತದಿಂದ ಜಗತ್ತೇ ತಲ್ಲಣ
(Cryptocurrencies Including Bitcoin Hit Hard By China’s Evergrande Crisis Here Is The Today Price Of Major Cryptos)