Binance Coin: ಈ ವರ್ಷ ಶೇ 1300ರಷ್ಟು ಏರಿಕೆ ಕಂಡ ಕ್ರಿಪ್ಟೋಕರೆನ್ಸಿಗೆ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಮೂರನೇ ಸ್ಥಾನ

| Updated By: Srinivas Mata

Updated on: Dec 30, 2021 | 12:25 PM

ಮಾರುಕಟ್ಟೆ ಬಂಡವಾಳ ಮೌಲ್ಯದ ಲೆಕ್ಕದಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲುವ ಈ ಕ್ರಿಪ್ಟೋಕರೆನ್ಸಿ 2021ರಲ್ಲಿ ಶೇ 1300ರಷ್ಟು ರಿಟರ್ನ್ಸ್ ಅನ್ನು ಹೂಡಿಕೆದಾರರಿಗೆ ದೊರೆಯುವಂತೆ ಮಾಡಿದೆ.

Binance Coin: ಈ ವರ್ಷ ಶೇ 1300ರಷ್ಟು ಏರಿಕೆ ಕಂಡ ಕ್ರಿಪ್ಟೋಕರೆನ್ಸಿಗೆ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಮೂರನೇ ಸ್ಥಾನ
ಸಾಂದರ್ಭಿಕ ಚಿತ್ರ
Follow us on

ಕ್ರಿಪ್ಟೋಕರೆನ್ಸಿಗಳಾದ ಬಿಟ್​ಕಾಯಿನ್ (Bitcoin) ಮತ್ತು ಈಥರ್​ (Ether)ನ ಪ್ರತಿಸ್ಪರ್ಧಿಯಾದ ಬಿನಾನ್ಸ್ ಕಾಯಿನ್ Binance Coin (BNB) ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಮೂರನೇ ದೊಡ್ಡ ಕ್ರಿಪ್ಟೋಕರೆನ್ಸಿಯಾಗಿದೆ. ಅಂದಹಾಗೆ ಬಿನಾನ್ಸ್ ಕಾಯಿನ್ ಈ ವರ್ಷ (ಜನವರಿ ಆರಂಭದಿಂದ ಇಲ್ಲಿಯ ತನಕ) ಶೇ 1300ರಷ್ಟು ಹೆಚ್ಚಳ ಕಾಣುವ ಮೂಲಕ ಎರಡು ಜನಪ್ರಿಯ ಡಿಜಿಟಲ್ ಟೋಕನ್‌ಗಳನ್ನೂ ಮೀರಿಸಿದೆ. BNB ಅನ್ನು ವಾಲ್ಯೂಮ್ ಮೂಲಕ ವಿಶ್ವದ ಅತಿದೊಡ್ಡ ಕ್ರಿಪ್ಟೋ ವಿನಿಮಯ ಕೇಂದ್ರವಾದ ಬಿನಾನ್ಸ್​ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಬಿನಾನ್ಸ್ ಸ್ಮಾರ್ಟ್ ಚೈನ್‌ನ ಸ್ಥಳೀಯ ಕರೆನ್ಸಿಯಾಗಿದ್ದು, ವಿಕೇಂದ್ರೀಕೃತ ಹಣಕಾಸು (DeFi) ಮತ್ತು ಇತರ ಅಪ್ಲಿಕೇಷನ್‌ಗಳಲ್ಲಿ ಬಳಸಲು ಸ್ಮಾರ್ಟ್ ಕಾಂಟ್ರ್ಯಾಕ್ಟ್​ಗಳನ್ನು ಸಪೋರ್ಟ್ ಮಾಡುವ ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್ ಆಗಿದೆ.

ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ 2021ರಲ್ಲಿ ಶೇ 62ರಷ್ಟು ಹೆಚ್ಚಾಗಿದೆ. ಆದರೆ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಈಥರ್ ಇದೇ ಅವಧಿಯಲ್ಲಿ ಶೇ 400ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಬಿಟ್‌ಕಾಯಿನ್ ಅದರ ಬೆಲೆಯ ಏರಿಳಿತಕ್ಕೆ ಹೆಸರುವಾಸಿಯಾಗಿದ್ದು, ನವೆಂಬರ್ ಆರಂಭದಲ್ಲಿ ದಾಖಲೆಯ ಮಟ್ಟವನ್ನು ಮುಟ್ಟಿದ ನಂತರ 21,000 ಅಮೆರಿಕನ್​ ಡಾಲರ್​ಗಿಂತ ಕೆಳಗೆ ಇಳಿದಿದೆ. ಮತ್ತೊಂದೆಡೆ, ಈಥೆರಮ್ ನೆಟ್‌ವರ್ಕ್‌ನ ಟೋಕನ್ ಆದ ಈಥೆರ್ ಹಣಕಾಸು ತಂತ್ರಜ್ಞಾನ ಕಂಪೆನಿಗಳಿಂದ ಬ್ಲಾಕ್‌ಚೈನ್ ತಂತ್ರಜ್ಞಾನದ ಅಳವಡಿಕೆ ಮಾಡಿಕೊಂಡು ಬಿಟ್‌ಕಾಯಿನ್ ಅನ್ನು ಮೀರಿಸಿದೆ.

ಕ್ರಿಪ್ಟೋಕರೆನ್ಸಿಗಳಿಗೆ ಬ್ಲಾಕ್‌ಬಸ್ಟರ್ ವರ್ಷವಾಗಿ, ಇತರ ಪರ್ಯಾಯ ಕಾಯಿನ್​ಗಳು ಅಥವಾ ಆಲ್ಟ್‌ಕಾಯಿನ್‌ಗಳು 2021ರಲ್ಲಿ ಪ್ರಮುಖವಾಗಿ ಲಾಭ ಕಂಡಿವೆ. ಕೆಲವು ದೊಡ್ಡ ಕಾಯಿನ್​ಗಳನ್ನು ಹೊರತುಪಡಿಸಿ, ಅನೇಕ ಕಾಯಿನ್​ಗಳು ಈ ವರ್ಷ ಅದ್ಭುತ ಏರಿಕೆ ದಾಖಲಿಸಿವೆ. Dogecoin, Cardano ಮತ್ತು Shiba Inuನಂತಹ ಕಾಯಿನ್​ಗಳು ಈ ಹಿಂದೆ ಮಾರುಕಟ್ಟೆಯಲ್ಲಿ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಬೆಲೆ ತಲುಪಿದವು. ಅಷ್ಟೇ ಅಲ್ಲ, ಈ ವರ್ಷ ಮನೆಮನೆಗಳಲ್ಲಿ ಹೆಸರಾದವು. ಸೋಲಾನಾ ಮತ್ತು ಫ್ಯಾಂಟಮ್, ಸ್ಮಾರ್ಟ್ ಕಾಂಟ್ರ್ಯಾಕ್ಟ್​ ಬೆಂಬಲಿಸುವ ಇತರ ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಪರ್ಕಗೊಂಡಿರುವ ಕಾಯಿನ್​ಗಳು, ಉದಾಹರಣೆಗೆ ಬಿನಾನ್ಸ್ ಕಾಯಿನ್‌ನ ರಿಟರ್ನ್ಸ್​ ಅನ್ನು ಮೀರಿಸುತ್ತದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು ಕಳೆದ ವರ್ಷ ಮತ್ತೊಂದು ಭಾರೀ ಏರಿಕೆಯಾಗಿ, ಮುಳುಗಿ ನಂತರ ಮತ್ತೆ ನಿಧಾನಕ್ಕೆ sಆಗುತ್ತಿವೆ. ಎಲ್ ಸಲ್ವಡಾರ್ ದೇಶ ಈ ವರ್ಷ ಬಿಟ್‌ಕಾಯಿನ್​ಗೆ ಕಾನೂನುಬದ್ಧ ಮಾನ್ಯತೆ ಮಾಡಿದ ಮೊದಲ ದೇಶವಾಯಿತು. ಆದರೆ ಬಿಟ್‌ಕಾಯಿನ್ ಫ್ಯೂಚರ್‌ಗಳಿಗೆ ಸಂಬಂಧಿಸಿದ ಮೊದಲ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ವಹಿವಾಟು ಮಾಡಲು ಪ್ರಾರಂಭಿಸಿತು.

ಇದನ್ನೂ ಓದಿ: Cryptocurrencies: ಕ್ರಿಪ್ಟೋಕರೆನ್ಸಿಗಳಿಗೆ ಹೊಸ ತೆರಿಗೆ ಕಾನೂನು ತರಲು ಕೇಂದ್ರ ಸರ್ಕಾರದ ಚಿಂತನೆ