ಗ್ರಾಹಕರು ಎಲ್ಪಿಜಿಯನ್ನು ಯಾವ ವಿತರಕರಿಂದ ರೀಫಿಲ್ ಮಾಡಿಸಿಕೊಳ್ಳಲು ಬಯಸುತ್ತಾರೋ ಅವರಿಂದ ಮಾಡಿಸುವ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಸದ್ಯದಲ್ಲೇ ಸಾಧ್ಯವಾಗಲಿದೆ. ಚಂಡೀಗಢ, ಕೊಯಮತ್ತೂರು, ಗುರ್ಗಾಂವ್, ಪುಣೆ ಮತ್ತು ರಾಂಚಿಯಲ್ಲಿ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಗ್ರಾಹಕರು ಮೊಬೈಲ್ ಆ್ಯಪ್/ಗ್ರಾಹಕ ಪೋರ್ಟಲ್ ಮೂಲಕ ಎಲ್ಪಿಜಿ ಬುಕ್ಕಿಂಗ್ ಮಾಡುವ ವೇಳೆ ಡೆಲಿವರಿ ಮಾಡುವ ವಿತರಕರ ಪಟ್ಟಿ ಮತ್ತು ಅವರ ಪರ್ಫಾರ್ಮೆನ್ಸ್ ರೇಟಿಂಗ್ ತೋರಿಸುತ್ತದೆ. ಗ್ರಾಹಕರು ತಮ್ಮ ಪ್ರದೇಶದಲ್ಲಿನ ಯಾವುದಾದರೂ ವಿತರಕರನ್ನು ಆರಿಸಿಕೊಂಡು, ಎಲ್ಪಿಜಿ ರೀಫಿಲ್ ಡೆಲಿವರಿ ಪಡೆಯಬಹುದು. ಈ ಸೇವೆ ಮೂಲಕ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯುವುದಷ್ಟೇ ಅಲ್ಲ, ಅತ್ಯುತ್ತಮ ಸೇವೆ ನೀಡಬೇಕು ಎಂಬ ನಿಟ್ಟಿನಲ್ಲಿ ವಿತರಕರ ಮಧ್ಯೆಯೇ ಆರೋಗ್ಯಕರವಾದ ಪೈಪೋಟಿ ಉದ್ಭವಿಸುತ್ತದೆ. ತಮ್ಮ ಪರ್ಫಾರ್ಮೆನ್ಸ್ ರೇಟಿಂಗ್ ಉತ್ತಮಗೊಳಿಸಲು ಪ್ರಯತ್ನಿಸುತ್ತಾರೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನು ಹೊರತುಪಡಿಸಿದಂತೆ ಇಂಡೇನ್, ಭಾರತ್ ಗ್ಯಾಸ್, ಎಚ್ಪಿ ಗ್ಯಾಸ್ ಇವೆಲ್ಲವೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲೇ ಬರುತ್ತದೆ. ಗ್ರಾಹಕರಿಗೆ ಮತ್ತೊಂದು ಹಂತದ ಇತರ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುತ್ತವೆ. ಇದರಲ್ಲಿ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಕೂಡ ಒಳಗೊಂಡಿದೆ. ಅದರ ಮೂಲಕ ಗ್ರಾಹಕರು ರೀಫಿಲ್ ಬುಕ್ ಮಾಡಬಹುದು, ತಮ್ಮ ವೈಯಕ್ತಿಕ ದಾಖಲೆ ಅಪ್ಡೇಟ್, ಸಂಪರ್ಕದ ವರ್ಗಾವಣೆಗೆ ಅಪ್ಲೈ ಮುಂತಾದವನ್ನು ಮಾಡಬಹುದು.
ಗ್ರಾಹಕರು ಈ ಕಂಪೆನಿಗಳ ಬಳಿಯಲ್ಲಿ ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಸಂದೇಶಗಳ ಮೂಲಕ ಕೂಡ ರೀಫಿಲ್ ಬುಕ್ ಬುಕ್ ಮಾಡಬಹುದು. UMANG (ಯೂನಿಫೈಡ್ ಮೊಬೈಲ್ ಆ್ಯಪ್ ಫಾರ್ ನ್ಯೂ ಗವರ್ನೆನ್ಸ್) ಆ್ಯಪ್ ಅಥವಾ ಭಾರತ್ ಬಿಲ್ ಪೇ ಸಿಸ್ಟಮ್ ಮತ್ತು ಪ್ಲಾಟ್ಫಾರ್ಮ್ಗಳ ಮೂಲಕವೂ ಎಲ್ಪಿಜಿ ರೀಫಿಲ್ಗಳನ್ನು ಬುಕ್ ಮಾಡಬಹುದು. ಇನ್ನೂ ಮುಂದುವರಿದು ಹೇಳಬೇಕೆಂದರೆ ಜನಪ್ರಿಯ ಇ-ಕಾಮರ್ಸ್ ಆ್ಯಪ್ಗಳಾದ ಅಮೆಜಾನ್ ಮತ್ತು ಪೇಟಿಎಂನಿಂದಲೂ ಗ್ರಾಹಕರು ರೀಫಿಲ್ ಬುಕ್ ಮಾಡಬಹುದು.
ಇದನ್ನೂ ಓದಿ: LPG Cylinder Price: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿಗೂ ಹೆಚ್ಚು ಇಳಿಕೆ ಮಾಡಿದ ತೈಲ ಕಂಪೆನಿಗಳು
ಇದನ್ನೂ ಓದಿ: LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್
(Customers can choose distributors according to their choice for LPG refill booking soon, here is the details)