Insurance Premium Financing: ಇನ್ಷೂರೆನ್ಸ್ ಖರೀದಿಸುವುದಕ್ಕೆ ಹಣಕಾಸು ಸಾಲ ನೀಡುವ ಪ್ರಸ್ತಾವ

ಇನ್ಷೂರೆನ್ಸ್ ಪ್ಲಾನ್ ಖರೀದಿಗಾಗಿ ಶೀಘ್ರದಲ್ಲೇ ಹಣಕಾಸು ಸಾಲ ಒದಗಿಸುವ ಸೇವೆ ಆರಂಭ ಆಗಲಿದೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

Insurance Premium Financing: ಇನ್ಷೂರೆನ್ಸ್ ಖರೀದಿಸುವುದಕ್ಕೆ ಹಣಕಾಸು ಸಾಲ ನೀಡುವ ಪ್ರಸ್ತಾವ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 20, 2022 | 3:46 PM

ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲದ ಪ್ರೀಮಿಯಂ ಹಣಕಾಸು ಸೌಲಭ್ಯದ ಪ್ರಸ್ತಾವವನ್ನು ಭಾರತದ ವಿಮಾ ನಿಯಂತ್ರಕ ಸಂಸ್ಥೆಯಾದ ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್ ಅಥಾರಿಟಿ (IRDAI) ಪರಿಶೀಲಿಸುತ್ತಿದೆ. ಇದರಿಂದ ರೀಟೇಲ್ ಮತ್ತು ಕಾರ್ಪೊರೇಟ್ ಗ್ರಾಹಕರು ಇಬ್ಬರಿಗೂ ಅನುಕೂಲ ಇದೆ. ಇದರೊಂದಿಗೆ ವಿಮೆಯನ್ನು ಖರೀದಿಸಲು ಸಾಲ ತೆಗೆದುಕೊಳ್ಳುವುದಕ್ಕೆ ಮತ್ತು ದೀರ್ಘಾವಧಿಯಲ್ಲಿ ಪ್ರೀಮಿಯಂ ಪಾವತಿಯನ್ನು ಮರುಪಾವತಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಸ್ತಾವವನ್ನು ಪರೀಕ್ಷಿಸುವ ಉದ್ದೇಶ ಏನೆಂದರೆ, ಇನ್ಷೂರೆನ್ಸ್ ಖರೀದಿ ಪ್ರಮಾಣ ಹೆಚ್ಚಾಗಬೇಕು, ಖರೀದಿಸಿದ್ದನ್ನು ಹಾಗೇ ಉಳಿಸಿಕೊಳ್ಳಬೇಕು, ರಕ್ಷಣೆಯ ಅಂತರವನ್ನು ಕಡಿಮೆ ಮಾಡಿ, ಗ್ರಾಹಕರಿಗೆ ಅನುಕೂಲ ಮಾಡಬೇಕು ಹಾಗೂ ಕಾರ್ಪೊರೇಟ್ ಹಣಕಾಸು ಸೌಲಭ್ಯದ ಗುರಿ ಹೊಂದಲಾಗಿದೆ.

“ಇದನ್ನು ಪರಿಶೀಲಿಸಲಾಗುತ್ತಿದೆ. ವಿಮಾ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿಗಳ ಮಾಡಬೇಕಿರುತ್ತದೆ, ಇದಕ್ಕಾಗಿ ಸರ್ಕಾರವೂ ಮಂಡಳಿಯಲ್ಲಿ ಇರಬೇಕಾದ ಅಗತ್ಯವಿದೆ,” ಎಂದು ಈ ಬೆಳವಣಿಗೆ ಬಗ್ಗೆ ತಿಳಿದ ಹಿರಿಯ ಕಾರ್ಯನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ. ಪ್ರೀಮಿಯಂ ಹಣಕಾಸು ಸೌಲಭ್ಯವನ್ನು ಜೀವ ವಿಮಾ ಕಂತುಗಳ ಪಾವತಿಗಾಗಿ ಬಳಸಲಾಗುತ್ತದೆ. ಅಂದರೆ ಸಾಲವಾಗಿ ಪಡೆದ ಹಣವನ್ನು ಬಳಸುತ್ತದೆ. ಈ ವಿಧದ ಸಾಲದ ಅಡಿಯಲ್ಲಿ, ರೀಟೇಲ್ ಗ್ರಾಹಕರಿಗೆ ಒಂದೇ ಪ್ರೀಮಿಯಂ ಅನ್ನು ಒಂದೇ ಮೊತ್ತದಲ್ಲಿ ಪಾವತಿಸುವ ಬದಲು ಕಂತುಗಳ ಅವಧಿಯಲ್ಲಿ ವಿಮೆಯ ವೆಚ್ಚವನ್ನು ಪಾವತಿಸಲು ಬ್ರೋಕರ್ ಅಥವಾ ವಿಮಾದಾರರು ಆಯ್ಕೆಯನ್ನು ನೀಡುತ್ತಾರೆ.

“ಹಣಕಾಸು ಪೂರೈಕೆದಾರರು ವಿಮೆಯನ್ನು ನೀಡಲು ವಿಮಾದಾರರಿಗೆ ಸಾಲದ ಮೊತ್ತವನ್ನು ಪಾವತಿಸುತ್ತಾರೆ. ಆ ನಂತರ ಮರುಪಾವತಿಗಳನ್ನು ನೇರವಾಗಿ ಡೆಬಿಟ್ ಪಾವತಿಗಳ ಮೂಲಕ ಮಾಸಿಕ ಕಂತುಗಳಲ್ಲಿ ರೀಟೇಲ್ ಗ್ರಾಹಕರಿಂದ ನೇರವಾಗಿ ಸಂಗ್ರಹಿಸಲಾಗುತ್ತದೆ,” ಎಂದು ಎಕನಾಮಿಕ್ ಟೈಮ್ಸ್ ಮತ್ತೊಬ್ಬ ಕಾರ್ಯನಿರ್ವಾಹಕರು ಹಂಚಿಕೊಂಡಿರುವುದನ್ನು ವಿವರಿಸಿದೆ. ಒಂದೇ ಪಾವತಿಯಲ್ಲಿ ಪೂರ್ಣ ವರ್ಷದ ಪ್ರೀಮಿಯಂ ಅನ್ನು ಪಾವತಿಸಬೇಕಾದ ಅಗತ್ಯವನ್ನು ಪಾಲಿಸಿದಾರರು ಎದುರಿಸುವುದಿಲ್ಲವಾದ್ದರಿಂದ ಇದು ರಿನೀವಲ್ ಸಂದರ್ಭದಲ್ಲಿ ಸಹಾಯ ಮಾಡುತ್ತದೆ.

ಪಾವತಿ ಮಾಡದಿದ್ದಲ್ಲಿ ಸಾಲದ ಬಾಕಿಯನ್ನು ವಿಮಾ ಕಂಪೆನಿಯು ಅನುಪಾತದ ಆಧಾರದ ಮೇಲೆ ಫೈನಾನ್ಷಿಯರ್‌ಗೆ ಮರುಪಾವತಿಸುತ್ತದೆ. ವಿಮೆದಾರರಿಗೆ ವಿಮಾ ಉತ್ಪನ್ನಗಳನ್ನು ಕೈಗೆಟುಕುವಂತೆ ಪ್ರೀಮಿಯಂ ಹಣಕಾಸು ಮಾಡುತ್ತದೆ ಮತ್ತು ವಿಮಾ ಪಡೆಯುವುದನ್ನು ಹೆಚ್ಚಿಸುತ್ತದೆ ಎಂದು ಹೇಳುವ ಫಿನ್ಸಾಲ್ ರಿಸೋರ್ಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಮ್ಯಾಥ್ಯೂಸ್ ಹೇಳುತ್ತಾರೆ. “ಉತ್ಪನ್ನಗಳ ಖರೀದಿ ಹೆಚ್ಚಿಸಲು ವೈಯಕ್ತಿಕ ಸಾಲ ಪಡೆಯುವುದು ಬಹಳಷ್ಟು ಮಿತಿಗಳನ್ನು ಹೊಂದಿದೆ.”

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Insurance on housing loan: ಹೌಸಿಂಗ್ ಲೋನ್ ಪಡೆಯುವಾಗ ಇನ್ಷೂರೆನ್ಸ್ ಖರೀದಿಸುವುದು ಕಡ್ಡಾಯವೇ?

Published On - 3:45 pm, Mon, 20 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್