AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyber Fraud: ಆಗಂತುಕನಿಗೆ ಮೊಬೈಲ್ ರಿಮೋಟ್ ಕೊಟ್ಟು ನಿದ್ದೆಗೆ ಜಾರಿದ ಮಹಿಳೆ; ಕಣ್ಮರೆಯಾಯಿತು ಲಕ್ಷಗಟ್ಟಲೆ ಹಣ

Woman Lost Rs 1 Lakh For Cyber Crime: ಬ್ಯಾಂಕ್ ಕೆವೈಸಿ ಅಪ್​ಡೇಟ್ ಮಾಡಲು ನೆರವಾಗುತ್ತೇನೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ ವಂಚಕನೊಬ್ಬ 1 ಲಕ್ಷ ರೂ ಎಗರಿಸಿದ ಘಟನೆ ಬೆಳಕಿಗೆ ಬಂದಿದೆ. ಆಗಂತುಕನಿಗೆ ರಿಮೋಟ್ ಆಗಿ ಮೊಬೈಲ್ ಕಂಟ್ರೋಲ್ ಕೊಟ್ಟು ಹಣ ಕಳೆದುಕೊಂಡಿದ್ದಾರೆ ಮಹಿಳೆ.

Cyber Fraud: ಆಗಂತುಕನಿಗೆ ಮೊಬೈಲ್ ರಿಮೋಟ್ ಕೊಟ್ಟು ನಿದ್ದೆಗೆ ಜಾರಿದ ಮಹಿಳೆ; ಕಣ್ಮರೆಯಾಯಿತು ಲಕ್ಷಗಟ್ಟಲೆ ಹಣ
ಸೈಬರ್ ಕ್ರೈಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 05, 2023 | 5:02 PM

Share

ನವದೆಹಲಿ: ಕಾಲಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಪ್​ಡೇಟ್ ಆದಂತೆಲ್ಲಾ ಸೈಬರ್ ವಂಚಕರೂ (Cyber Fraudsters) ಅಪ್​ಡೇಟ್ ಆಗುತ್ತಲೇ ಇರುತ್ತಾರೆ. ಹೊಸ ಹೊಸ ರೀತಿಯ ಸೈಬರ್ ಕ್ರೈಮ್​ಗಳು ಬೆಳಕಿಗೆ ಬರುತ್ತಲೇ ಇವೆ. ಪೊಲೀಸ್, ಐಟಿ, ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡುವ ದುರುಳರು ಹೇಳಿದಂತೆ ಕೆಲ ಜನರು ಕೇಳಿ ಸುಲಭವಾಗಿ ಮೋಸ ಹೋಗುವುದಿದೆ. ಇಂಥದ್ದೊಂದು ಪ್ರಕರಣ ದೆಹಲಿಯಲ್ಲಿ ವರದಿಯಾಗಿದ್ದು, ವೃದ್ಧ ಮಹಿಳೆಯೊಬ್ಬರು 1 ಲಕ್ಷ ರೂ ಕಳೆದುಕೊಂಡಿದ್ದಾರೆ.

ಕೆವೈಸಿ ಅಪ್​ಡೇಟ್ ಮಾಡುವ ನೆವದಲ್ಲಿ ಮಹಿಳೆಗೆ ವಂಚನೆ

ಬ್ಯಾಂಕ್​ನ ಕೆವೈಸಿ ಅಪ್​ಡೇಟ್ ಆಗಬೇಕಿದೆ. ಈ ಲಿಂಕ್ ಕ್ಲಿಕ್ ಮಾಡದಿದ್ದರೆ ಅಕೌಂಟ್ ಬ್ಲಾಕ್ ಆಗಬಹುದು ಎಂದು ಹೆದರಿಸುವ ಮೆಸೇಜ್​ವೊಂದು ಮಹಿಳೆಗೆ ಬರುತ್ತದೆ. ಕಾಕತಾಳೀಯವೋ ಅಥವಾ ದುರುಳರ ಅರಿವಿತ್ತೋ, ಈ ಮಹಿಳೆ ಇತ್ತೀಚೆಗೆ ಕೆಲ ಚೆಕ್ ನೀಡಿದ್ದರು. ಈ ಕಾರಣಕ್ಕೆ ಬ್ಯಾಂಕ್​ನಿಂದಲೇ ಈ ಮೆಸೇಜ್ ಬಂದಿರಬಹುದು ಎಂದು ಭಾವಿಸಿ ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ.

ಇದನ್ನೂ ಓದಿArjun Deshpande: 110 ರೂ ಬೆಲೆಯ ಔಷಧ ಕೇವಲ 5ಕ್ಕೆ; 21 ವರ್ಷದ ಯುವಕನ ಕಂಪನಿ ಇಷ್ಟು ಅಗ್ಗದಲ್ಲಿ ಮಾರಲು ಹೇಗೆ ಸಾಧ್ಯ?

ಇದಾದ ಸ್ವಲ್ಪ ಮೊತ್ತಲ್ಲೇ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಬ್ಯಾಂಕ್ ಪ್ರತಿನಿಧಿಯಾಗಿದ್ದು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಾಯ ಮಾಡುವುದಾಗಿ ಹೇಳುತ್ತಾನೆ. ಬಳಿಕ ಮಹಿಳೆಯ ಫೋನ್​ನಲ್ಲಿದ್ದ ಎನಿಡೆಸ್ಕ್ ಅಪ್ಲಿಕೇಶನ್ ಮೂಲಕ ಮೊಬೈಲ್ ಅನ್ನು ರಿಮೋಟ್ ಆಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ.

ಬಹಳ ನಯವಾಗಿ ಮಾತನಾಡುತ್ತಾ ಆ ವ್ಯಕ್ತಿಯು ಮಹಿಳೆಯ ವಿಶ್ವಾಸ ಸಂಪಾದಿಸಿದ್ದ. ಆ ಮಹಿಳೆಯ ಮೊಬೈಲ್​ಗೆ ಬಂದಿದ್ದ ಒಟಿಪಿಯನ್ನೂ ಕದ್ದಿದ್ದ. ಹೆಚ್ಚು ಸಮಯ ಈ ಕೃತ್ಯ ನಡೆಯುತ್ತಿದ್ದರಿಂದ ಮತ್ತು ಆ ವ್ಯಕ್ತಿ ಮೇಲೆ ನಂಬಿಕೆ ಇರಿಸಿದ್ದರಿಂದ ಮಹಿಳೆಯು ಮೊಬೈಲ್ ಅನ್ನು ಗಮನಿಸದೇ ಹಾಗೇ ಮಲಗುತ್ತಾರೆ. ಈ ಹೊತ್ತಿನಲ್ಲಿ ವಂಚಕನು ತನ್ನ ಕಾರ್ಯ ಸಾಧಿಸಿಕೊಳ್ಳುತ್ತಾನೆ. ಬೆಳಗ್ಗೆ ಎದ್ದ ಬಳಿಕ ನೋಡಿದಾಗ ತನ್ನ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ ಹಣ ಕಡಿತವಾಗಿರುವುದನ್ನು ಆಕೆ ಗಮನಿಸುತ್ತಾರೆ. ಸದ್ಯ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿPakistan: ಏಷ್ಯಾದಲ್ಲೇ ಅತಿಹೀನ ಹಣದುಬ್ಬರ; ಐಎಂಎಫ್​ನಿಂದ ಸಾಲ ಮನವಿ ತಿರಸ್ಕಾರ; ಪಾಕಿಸ್ತಾನಕ್ಕೆ ಬಿಡದ ಗ್ರಹಚಾರ

ಇಂಥ ವಂಚನೆ ಪ್ರಕರಣಗಳಲ್ಲಿ ನೀವೇನು ಮಾಡಬೇಕು?

ಬ್ಯಾಂಕ್ ಸಿಬ್ಬಂದಿ ಸಾಮಾನ್ಯವಾಗಿ ಗ್ರಾಹಕರಿಗೆ ಕರೆ ಮಾಡಿ ಲಾಗಿನ್ ವಿವರ ಕೇಳುವುದಿಲ್ಲ. ಹಾಗೆ ಕೇಳುತ್ತಿದ್ದಾರೆಂದರೆ ಅವರು ವಂಚಕರೇ ಆಗಿರುತ್ತಾರೆ. ಯಾರೇ ಕರೆ ಮಾಡಿ ಲಾಗಿನ್ ಐಡಿ, ಪಾಸ್​ವರ್ಡ್, ಪಿನ್ ನಂಬರ್, ಒಟಿಪಿ ಇತ್ಯಾದಿ ಮಾಹಿತಿ ಕೇಳಿದರೆ ಖಂಡಿತವಾಗಿ ಕೊಡಬೇಡಿ. ಅಷ್ಟೇ ಅಲ್ಲ ಪೊಲೀಸರಿಗೆ ದೂರು ಕೊಡುವುದಾಗಿ ಹೆದರಿಸಿ.

ಇನ್ನು, ಕೆವೈಸಿ ಅಪ್​ಡೇಟ್ ಮಾಡಲು ನೆರವಾಗುತ್ತೇನೆ ಎಂದು ಯಾರಾದರೂ ಹೇಳಿದರೆ ನಿರ್ಲಕ್ಷಿಸಿ. ನಿಮ್ಮ ಖಾತೆಯಿಂದ ನಿಮಗೆ ಅರಿವಿಲ್ಲದೇ ಹಣ ಕಡಿತ ಆಗಿರುವ ಮೆಸೇಜ್ ಬಂದಿದ್ದರೆ ಕೂಡಲೇ ಅದನ್ನು ಸಂಬಂಧಿತ ಬ್ಯಾಂಕ್​ನ ಗಮನಕ್ಕೆ ತನ್ನಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!