AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

India's face severe dark patterns during online shopping: 'ಡಾಟಮ್ ಇಂಟೆಲಿಜೆನ್ಸ್' (Datum Intelligence) ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ವರದಿಯು ಡಾರ್ಕ್ ಪ್ಯಾಟರ್ನ್​ಗಳ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ ಹೊರಗೆಡವಿದೆ. ಭಾರತದ ಆನ್‌ಲೈನ್ ಶಾಪಿಂಗ್ ಕ್ಷೇತ್ರದಲ್ಲಿ ಗ್ರಾಹಕರು ಭಾರಿ ಪ್ರಮಾಣದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆಂದು ವರದಿ ಹೇಳುತ್ತದೆ. ಅನೇಕ ಪ್ಲಾಟ್​ಫಾರ್ಮ್​ಗಳು ಗ್ರಾಹಕರನ್ನು ಮರುಳು ಮಾಡುವ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿ, ವಂಚನೆ ಎಸಗುತ್ತಿವೆ, ಅಥವಾ ಬಲವಂತವಾಗಿ ಸರಕುಗಳನ್ನು ಮಾರುತ್ತಿವೆ.

ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ
ಆನ್ಲೈನ್ ಶಾಪಿಂಗ್Image Credit source: Alamy
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2026 | 7:12 PM

Share

ನವದೆಹಲಿ, ಜೂನ್ 9: ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಪ್‌ಗಳು ಗ್ರಾಹಕರನ್ನು ಮರುಳು ಮಾಡಲು ಬಳಸುವ ಮೋಸದ ಜಾಲಗಳಿಗೆ (Dark Patterns) ಬಹಳಷ್ಟು ಭಾರತೀಯರು ಬಲಿಯಾಗುತ್ತಿದೆ ಎನ್ನುವ ಆತಂಕಕಾರಿ ವರದಿಯೊಂದು ಬಂದಿದೆ. ಡಾರ್ಕ್ ಪ್ಯಾಟರ್ನ್ ಮಾದರಿಯ ವಂಚನೆಗಳಿಂದಾಗಿ ಶೇ. 88ರಷ್ಟು ಆನ್​ಲೈನ್ ಗ್ರಾಹಕರು ಹಣ ಕಳೆದುಕೊಳ್ಳುತ್ತಿದ್ದಾರೆನ್ನಲಾಗಿದೆ. ಅಂದರೆ, ಭಾರತದ ಒಟ್ಟು 30.4 ಕೋಟಿ ಆನ್‌ಲೈನ್ ಗ್ರಾಹಕರಲ್ಲಿ 27 ಕೋಟಿಗೂ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಮೋಸದ ಜಾಲದಿಂದಾಗಿ ಭಾರತೀಯ ಗ್ರಾಹಕರು ವಾರ್ಷಿಕವಾಗಿ ಅಂದಾಜು 25,000 ದಿಂದ 28,000 ಕೋಟಿ ರೂಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಗ್ರಾಹಕರು ತಿಂಗಳಿಗೆ ಸರಾಸರಿ 78 ರಿಂದ 87 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಈ ರೀತಿಯ ಮೋಸದ ತಂತ್ರಗಳಿಂದಾಗಿ ಗ್ರಾಹಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದು ಒಟ್ಟಾರೆ ಆನ್‌ಲೈನ್ ಮಾರುಕಟ್ಟೆಯ ಸುಮಾರು 55,000 ಕೋಟಿ ರೂ ಮೌಲ್ಯದ ವ್ಯಾಪಾರವನ್ನು (GMV) ಅಪಾಯಕ್ಕೆ ದೂಡಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

‘ಡಾರ್ಕ್ ಪ್ಯಾಟರ್ನ್ಸ್’ ಹೇಗೆ ಕೆಲಸ ಮಾಡುತ್ತವೆ?

ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಪ್‌ಗಳು ಗ್ರಾಹಕರನ್ನು ಮರುಳು ಮಾಡಲು ಬಳಸುವ ಮೋಸದ ಜಾಲಗಳಿಗೆ ಡಾರ್ಕ್ ಪ್ಯಾಟರ್ನ್ ಎನ್ನುವುದು. ಆನ್‌ಲೈನ್ ಆಪ್‌ಗಳು ಪ್ರಮುಖವಾಗಿ ಮೂರು ರೀತಿಯ ಕುತಂತ್ರಗಳನ್ನು ಬಳಸುತ್ತವೆ:

  • ಗುಪ್ತ ಶುಲ್ಕಗಳು (Hidden Charges/Drip Pricing): ಶೇ. 63 ರಷ್ಟು ಡಿಜಿಟಲ್ ಪಾವತಿ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತಿಮವಾಗಿ ಪೇಮೆಂಟ್ ಮಾಡುವ ಹಂತದಲ್ಲಿ ಮಾತ್ರ ಹೆಚ್ಚುವರಿ ಶುಲ್ಕಗಳನ್ನು ಸೇರಿಸಲಾಗುತ್ತದೆ. ಇದು 2024 ರಲ್ಲಿ ಶೇ. 52 ರಷ್ಟಿತ್ತು.
  • ಬಲವಂತದ ಕ್ರಮಗಳು (Forced Actions): ಶೇ. 73 ರಷ್ಟು ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ಇಷ್ಟವಿಲ್ಲದಿದ್ದರೂ ಕೆಲವು ಆಯ್ಕೆಗಳನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸುತ್ತವೆ (ಉದಾಹರಣೆಗೆ: ಪ್ರೀ-ಸೆಲೆಕ್ಟೆಡ್ ಇನ್ಶೂರೆನ್ಸ್ ಅಥವಾ ಆಡ್-ಆನ್ ಸೇವೆಗಳು).
  • ಬೈಟ್ ಅಂಡ್ ಸ್ವಿಚ್ (Bait-and-Switch): ಶೇ. 50 ಕ್ಕಿಂತ ಹೆಚ್ಚು ಪ್ಲಾಟ್‌ಫಾರ್ಮ್‌ಗಳು ಜಾಹೀರಾತಿನಲ್ಲಿ ಒಂದು ಬೆಲೆ ಅಥವಾ ಆಫರ್ ತೋರಿಸಿ, ಅಂತಿಮವಾಗಿ ಬೇರೆ ಉತ್ಪನ್ನ ಅಥವಾ ಹೆಚ್ಚಿನ ಬೆಲೆಯನ್ನು ವಿಧಿಸುತ್ತವೆ.

ಅಮೆಜಾನ್ ಮೇಲೆ ಹೆಚ್ಚಿನ ನಂಬುಗೆ?

ಡಾಟಮ್ ಇಂಟೆಲಿಜೆನ್ಸ್​ನ ಈ ವರದಿ ಪ್ರಕಾರ, ಇ-ಕಾಮರ್ಸ್ ವಲಯದಲ್ಲಿ ಅಮೆಜಾನ್ (Amazon) ಸಂಸ್ಥೆಯು ಗ್ರಾಹಕರಲ್ಲಿ ಅತಿ ಹೆಚ್ಚು ನಂಬಿಕೆ (50%) ಗಳಿಸಿದೆ. ಆದರೆ ಫ್ಲಿಪ್‌ಕಾರ್ಟ್, ಮಿಂತ್ರಾ ಮತ್ತು ನೈಕಾ ಕಂಪನಿಗಳ ಮೇಲೆ ಗ್ರಾಹಕರು ಹೆಚ್ಚಿನ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್ ಟ್ರಾವೆಲ್ ಬುಕಿಂಗ್‌ನಲ್ಲಿ ‘ಮೇಕ್‌ಮೈಟ್ರಿಪ್’ (MakeMyTrip) ಸುರಕ್ಷಿತ ಎಂದು ಪರಿಣಾಮ ಬೀರಿದ್ದರೆ, ‘ಕ್ಲಿಯರ್‌ಟ್ರಿಪ್’ ಗ್ರಾಹಕರಿಗೆ ಹೆಚ್ಚು ಹಾನಿಕಾರಕವಾಗಿ ಕಂಡುಬಂದಿದೆ. ಕ್ವಿಕ್ ಕಾಮರ್ಸ್ (ತ್ವರಿತ ವಿತರಣೆ) ವಿಭಾಗದಲ್ಲಿ ‘ಬಿಗ್‌ಬಾಸ್ಕೆಟ್’ ಅತಿ ಹೆಚ್ಚು ಡಾರ್ಕ್ ಪ್ಯಾಟರ್ನ್ ತಂತ್ರಗಳನ್ನು ಬಳಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್​ಲೈನ್​ನಲ್ಲೇ ವಾಹನ ಮಾಲಕತ್ವ ವರ್ಗಾವಣೆ

ಜಾಗೃತಿಯಿದ್ದವರೂ ಮೋಸಕ್ಕೆ ಬಲಿ

ವರದಿಯಲ್ಲಿ ಒಂದು ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ — ಶೇ. 81 ರಷ್ಟು ಗ್ರಾಹಕರಿಗೆ ಈ ಚೀಟಿಂಗ್ ಪ್ಯಾಟರ್ನ್​ಗಳ ಬಗ್ಗೆ ಜಾಗೃತಿ ಇದ್ದರೂ, ಅವರಲ್ಲೇ ಶೇಕಡಾ 85 ರಷ್ಟು ಜನರು ಇವುಗಳಿಗೆ ಬಲಿಯಾಗುತ್ತಿದ್ದಾರೆ.

ಇದನ್ನು ತಡೆಯಲು ಮುಂದಿನ 36 ತಿಂಗಳುಗಳ ಕ್ರಿಯಾ ಯೋಜನೆಯನ್ನು ಈ ವರದಿ ಪ್ರಸ್ತಾಪಿಸಿದೆ. ಮೊದಲ ಹಂತವಾಗಿ, ಬುಕಿಂಗ್ ಅಥವಾ ಪಾವತಿ ಮಾಡುವಾಗ ಮೊದಲೇ ಟಿಕ್ ಆಗಿರುವ ಇನ್ಶೂರೆನ್ಸ್ ಆಪ್ಷನ್‌ಗಳನ್ನು ನಿಷೇಧಿಸುವುದು, ಸರ್ಚ್ ರಿಸಲ್ಟ್‌ನಲ್ಲೇ ಸಂಪೂರ್ಣ ಬೆಲೆಯನ್ನು ತೋರಿಸುವುದು ಮತ್ತು ದೂರುಗಳ ಶೀಘ್ರ ವಿಲೇವಾರಿಗೆ ಪ್ರತ್ಯೇಕ ಪೋರ್ಟಲ್ ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More