ಕಾರು ತಯಾರಕನ ಮಕ್ಕಳಿಗೆ ಕಾರ್ ಡ್ರೈವಿಂಗ್ ಬರೊಲ್ಲ? ಆನಂದ್ ಮಹೀಂದ್ರರ ಕುಟುಂಬದ ಸೋಜಿಗದ ಸಂಗತಿಗಳು

Anand Mahindra Family: ಆನಂದ್ ಮಹೀಂದ್ರ ಅವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ಹೆಣ್ಮಕ್ಕಳೇ. ಇಬ್ಬರೂ ಕೂಡ ಅಪ್ಪನ ಬಿಸಿನೆಸ್​ನಲ್ಲಿ ಆಸಕ್ತಿ ತೋರಿಲ್ಲ. ತಮ್ಮ ತಾಯಿ ಅನುರಾಧಾ ನಡೆಸುವ ನಿಯತಕಾಲಿಕೆ ಪತ್ರಿಕೆಗಳನ್ನು ನೋಡಿಕೊಳ್ಳಲು ಅವರ ಆಸಕ್ತಿ ಇದೆ. ಆನಂದ್ ಮಹೀಂದ್ರ ಅವರ ಇಬ್ಬರು ಹೆಣ್ಮಕ್ಕಳ ಹೆಸರು ದಿವ್ಯಾ ಮತ್ತು ಆಲಿಕಾ. ಇಬ್ಬರೂ ಕೂಡ ವಿದೇಶಗಳಲ್ಲಿ ಓದಿದವರು. ಬಿಸಿನೆಸ್ ಓದಲಿಲ್ಲ. ತಮ್ಮಿಚ್ಚೆಯ ಪ್ರಕಾರವೇ ಓದಿ ತಮ್ಮಿಚ್ಚ ಪ್ರಕಾರವೇ ವೃತ್ತಿಜೀವನ ನಡೆಸುತ್ತಿದ್ದಾರೆ. ಅಲ್ಲದೇ, ತಮ್ಮ ಸಂಗಾತಿಯನ್ನು ತಾವೇ ಆರಿಸಿಕೊಂಡಿದ್ದಾರೆ.

ಕಾರು ತಯಾರಕನ ಮಕ್ಕಳಿಗೆ ಕಾರ್ ಡ್ರೈವಿಂಗ್ ಬರೊಲ್ಲ? ಆನಂದ್ ಮಹೀಂದ್ರರ ಕುಟುಂಬದ ಸೋಜಿಗದ ಸಂಗತಿಗಳು
ಆನಂದ್ ಮಹೀಂದ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 08, 2023 | 5:35 PM

ಮಹೀಂದ್ರ ಗ್ರೂಪ್ ಛೇರ್ಮನ್ ಆನಂದ್ ಮಹೀಂದ್ರ (Anand Mahindra) ಸದಾ ಚಟುವಟಿಕೆಯಿಂದ ಇರುವ ವ್ಯಕ್ತಿತ್ವ. ವಾಹನ ತಯಾರಿಕೆ ಕ್ಷೇತ್ರದಿಂದ ಹಿಡಿದು ಕೃಷಿ, ಡಿಫೆನ್ಸ್, ಏರ್​ಕ್ರಾಫ್ಟ್, ಫೈನಾನ್ಸ್, ಇನ್ಷೂರೆನ್ಸ್, ಐಟಿ, ಹೋಟೆಲ್, ರಿಯಲ್ ಎಸ್ಟೇಟ್ ಹೀಗೆ ಹಲವಾರು ಉದ್ಯಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಅವರ ಮಹೀಂದ್ರ ಗ್ರೂಪ್​ನ ಮಾರುಕಟ್ಟೆಮೌಲ್ಯ 1.86 ಲಕ್ಷಕೋಟಿ ರೂ ಇದೆ. ಆನಂದ್ ಮಹೀಂದ್ರ ಬಳಿಕ ಈ ಮಹಾನ್ ಉದ್ಯಮ ಸಾಮ್ರಾಜ್ಯವನ್ನು ಯಾರು ನಿಭಾಯಿಸುತ್ತಾರೆ? ಆನಂದ್ ಮಹೀಂದ್ರ ಅವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ಹೆಣ್ಮಕ್ಕಳೇ. ಇಬ್ಬರೂ ಕೂಡ ಅಪ್ಪನ ಬಿಸಿನೆಸ್​ನಲ್ಲಿ ಆಸಕ್ತಿ ತೋರಿಲ್ಲ. ತಮ್ಮ ತಾಯಿ ಅನುರಾಧಾ ನಡೆಸುವ ನಿಯತಕಾಲಿಕೆ ಪತ್ರಿಕೆಗಳನ್ನು ನೋಡಿಕೊಳ್ಳಲು ಅವರ ಆಸಕ್ತಿ ಇದೆ.

ಆನಂದ್ ಮಹೀಂದ್ರ ಅವರ ಇಬ್ಬರು ಹೆಣ್ಮಕ್ಕಳ ಹೆಸರು ದಿವ್ಯಾ ಮತ್ತು ಆಲಿಕಾ. ಇಬ್ಬರೂ ಕೂಡ ವಿದೇಶಗಳಲ್ಲಿ ಓದಿದವರು. ಬಿಸಿನೆಸ್ ಓದಲಿಲ್ಲ. ತಮ್ಮಿಚ್ಚೆಯ ಪ್ರಕಾರವೇ ಓದಿ ತಮ್ಮಿಚ್ಚ ಪ್ರಕಾರವೇ ವೃತ್ತಿಜೀವನ ನಡೆಸುತ್ತಿದ್ದಾರೆ. ಅಲ್ಲದೇ, ತಮ್ಮ ಸಂಗಾತಿಯನ್ನು ತಾವೇ ಆರಿಸಿಕೊಂಡಿದ್ದಾರೆ.

ಮೊದಲ ಮಗಳು ದಿವ್ಯಾ ಮೆಕ್ಸಿಕೋದ ಜೋರ್ಗೆ ಜಪಾಟ (Jorge Zapata) ಎಂಬಾತನನ್ನು ವಿವಾಹವಾದರೆ, ಎರಡನೆ ಮಗಳು ಆಲಿಕಾ ಫ್ರಾನ್ಸ್ ದೇಶದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಆದರೆ ಇಬ್ಬರ ವಿವಾಹ ಮಹೋತ್ಸವವನ್ನು ಭಾರತದಲ್ಲಿ ಸಾಂಪ್ರದಾಯಿಕವಾಗಿ ನಡೆಸಲಾಗಿದ್ದು ಹೌದು.

ಇದನ್ನೂ ಓದಿ: ಧೀರೂಭಾಯ್ ಅಂಬಾನಿ ಮೊಮ್ಮಗ ವಿಕ್ರಮ್ ಸಲ್ಗಾಂವ್ಕರ್; ಮುಕೇಶ್ ಅಂಬಾನಿ ಮಕ್ಕಳಷ್ಟು ಪ್ರಚಾರ ಗಿಟ್ಟಿಸದ ವಿಕ್ರಮ್ ಏನ್ ಮಾಡ್ತಾರೆ?

ಆನಂದ್ ಮಹೀಂದ್ರ ತಮ್ಮ ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದಂತಹ ಅಪರೂಪದ ವ್ಯಕ್ತಿತ್ವ. ತಮ್ಮ ಮಕ್ಕಳಿಗೆ ಮದುವೆ ಆಗಲು ಭಾರತದ ಹುಡುಗರು ಸಿಗಲಿಲ್ಲವೇ ಎಂಬ ಪ್ರಶ್ನೆಗೆ ಆನಂದ್ ಮಹೀಂದ್ರ ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸಿದ್ದು ಹೀಗೆ: ‘ಮದುವೆ ಆದವರು ನನ್ನ ಮಕ್ಕಳು. ಅವರ ಜೀವನ ಅವರ ನಿರ್ಧಾರ,’ ಎಂದಿದ್ದರು.

ತಮ್ಮ ಹೆಣ್ಮಕ್ಕಳು ನಿಮ್ಮ ಬಿಸಿನೆಸ್ ಯಾಕೆ ನೋಡಿಕೊಳ್ಳೋದಿಲ್ಲ ಪ್ರಶ್ನೆಗೂ ಆನಂದ್ ಮಹೀಂದ್ರ ಅಷ್ಟೇ ಖಡಕ್ ಉತ್ತರ ಕೊಟ್ಟಿದ್ದಾರೆ. ಮಹೀಂದ್ರ ಗ್ರೂಪ್ ಅನ್ನು ತಾನು ಫ್ಯಾಮಿಲಿ ಬಿಸಿನೆಸ್ ಎಂದು ಪರಿಗಣಿಸುವುದಿಲ್ಲ. ತನ್ನ ಕುಟುಂಬದಲ್ಲಿ ಯಾರ ಮೇಲೂ ಒತ್ತಡ ಇಲ್ಲ. ಅವರ ವೃತ್ತಿದಾರಿಯನ್ನು ಅವರೇ ನಿರ್ಧರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದು ಹೇಳಿದ್ದುಂಟು.

ಇದನ್ನೂ ಓದಿ: ಬೆರಳೆಣಿಕೆಯ ಕಂಪನಿಗಳು ಭಾರತದ ಅಭಿವೃದ್ಧಿಯ ಹಣೆಬರಹ ಬರೆಯುವಂತಾಗಬಾರದು: ಉದಯ್ ಕೋಟಕ್

ಹೆಣ್ಮಕ್ಕಳಿಗೆ ಡ್ರೈವಿಂಗ್ ಕಲಿಸಿದ ಅಪ್ಪ

ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಹಲವು ಎಸ್​ಯುವಿ ಕಾರುಗಳನ್ನು ತಯಾರಿಸುತ್ತದೆ. ಆನಂದ್ ಮಹೀಂದ್ರಗೆ ಆಫ್​ರೋಡ್ ರೇಸಿಂಗ್ ಎಂದರೆ ಪ್ರಾಣ. ಆದರೆ, ಅವರ ಹೆಣ್ಮಕ್ಕಳು ಆಟೊಮೊಬೈಲ್ ಕ್ಷೇತ್ರಕ್ಕೆ ಬರುವುದಿರಲಿ, ವಾಹನ ಚಲಾಯಿಸಲೂ ಕಲಿತಿಲ್ಲ. ಓಲಾ, ಊಬರ್​ನಲ್ಲೇ ಓಡಾಡುತ್ತಾರಂತೆ. ಇದು ಐದು ವರ್ಷದ ಹಿಂದಿನ ಮಾಹಿತಿ. ಈಗ ಅವರು ಗಾಡಿ ಓಡಿಸುವುದನ್ನು ಕಲಿತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದಾಗ್ಯೂ ವಾಹನ ಕ್ಷೇತ್ರದ ದಿಗ್ಗಜ ಆನಂದ್ ಮಹೀಂದ್ರ ತನ್ನ ಮಕ್ಕಳಿಗೆ ಕಾರು ಓಡಿಸುವುದನ್ನು ಕಲಿಸದೇ ಇರಲು ಕಾರಣಗಳಿವೆ.

ನಗರಗಳಲ್ಲಿ ಕಾರುಗಳು ಉಪದ್ರವವಾಗಿವೆ. ಜನರು ಕಾರು ಖರೀದಿಸುತ್ತಿರುವುದು ಹೆಚ್ಚಾಗಿದ್ದು, ನಗರಗಳಲ್ಲಿ ಓಡಾಟವೇ ಕಷ್ಟ. ಈ ಕಾರಣಕ್ಕೆ ಆನಂದ್ ಮಹೀಂದ್ರ ಅವರು ತಮ್ಮ ಮಕ್ಕಳಿಗೆ ಕಾರು ಓಡಿಸುವುದನ್ನು ಕಲಿಸಲಿಲ್ಲವಂತೆ. ಹಾಗೆಯೇ, ಜನರ ಜೀವನ ನರಕಗೊಳಿಸುವ ವ್ಯವಹಾರ ಬೇಡ ಎನ್ನುವ ಸಿದ್ಧಾಂತ ಅವರದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್