ಧೀರೂಭಾಯ್ ಅಂಬಾನಿ ಮೊಮ್ಮಗ ವಿಕ್ರಮ್ ಸಲ್ಗಾಂವ್ಕರ್; ಮುಕೇಶ್ ಅಂಬಾನಿ ಮಕ್ಕಳಷ್ಟು ಪ್ರಚಾರ ಗಿಟ್ಟಿಸದ ವಿಕ್ರಮ್ ಏನ್ ಮಾಡ್ತಾರೆ?

Dhirubhai Ambani Family: ಧೀರೂಭಾಯ್ ಅಂಬಾನಿಯವರಿಗೆ ನಾಲ್ವರು ಮಕ್ಕಳಿದ್ದು, ಅವರಲ್ಲಿ ಮುಕೇಶ್ ಮತ್ತು ಅನಿಲ್ ಅಂಬಾನಿ ಇಬ್ಬರು. ದೀಪ್ತಿ ಮತ್ತು ನೀನಾ ಎಂಬಿಬ್ಬರು ಹೆಣ್ಮಕ್ಕಳಿದ್ದಾರೆ. ದೀಪ್ತಿ ಅವರು ಸಲ್ಗಾಂವ್ಕರ್ ಕುಟುಂಬಕ್ಕೆ ವಿವಾಹವಾಗಿ ಹೋದರೆ, ನೀನಾ ಅವರು ಕೊಠಾರಿ ಮನೆತನ ಸೇರಿದ್ದಾರೆ. ಗೋವಾದಲ್ಲಿ ಸಲ್ಗಾಂವ್ಕರ್​ನದ್ದು ದೊಡ್ಡ ಹೆಸರು. ದೀಪ್ತಿ ಮಗ ವಿಕ್ರಮ್ ಸಲ್ಗಾಂವ್ಕರ್ ಹೋಟೆಲ್ ಉದ್ಯಮದಲ್ಲಿ ನೆಲೆಯೂರಿದ್ದಾರೆ.

ಧೀರೂಭಾಯ್ ಅಂಬಾನಿ ಮೊಮ್ಮಗ ವಿಕ್ರಮ್ ಸಲ್ಗಾಂವ್ಕರ್; ಮುಕೇಶ್ ಅಂಬಾನಿ ಮಕ್ಕಳಷ್ಟು ಪ್ರಚಾರ ಗಿಟ್ಟಿಸದ ವಿಕ್ರಮ್ ಏನ್ ಮಾಡ್ತಾರೆ?
ಅಂಬಾನಿ ಕುಟುಂಬದ ಇತರ ಸದಸ್ಯರ ಜೊತೆ ವಿಕ್ರಮ್ ಸಲ್ಗಾಂವ್ಕರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 08, 2023 | 3:15 PM

ಭಾರತದ ಅಗ್ರಮಾನ್ಯ ಉದ್ಯಮಕುಟುಂಬಗಳಲ್ಲಿ ಅಂಬಾನಿ ಒಂದು. ಧೀರೂಭಾಯ್ ಅಂಬಾನಿ ಮೂಲಕ ಶುರುವಾದ ಈ ಕುಟುಂಬದ ಹೆಸರನ್ನು ಮುಕೇಶ್ ಅಂಬಾನಿ ಉಜ್ವಲವಾಗಿ ಬೆಳೆಸುತ್ತಿದ್ದಾರೆ. ಅವರ ಸಹೋದರ ಅನಿಲ್ ಅಂಬಾನಿ ಒಂದು ಹಂತದಲ್ಲಿ ಭಾರತದ ಅತೀ ಶ್ರೀಮಂತ ಎನಿಸಿದ್ದರು. ಈಗ ಮುಕೇಶ್ ಅಂಬಾನಿ ಮಕ್ಕಳಾದ ಅನಂತ್, ಇಶಾ ಮತ್ತು ಮತ್ತು ಆಕಾಶ್ ಅಂಬಾನಿ ಅವರುಗಳು ರಿಲಾಯನ್ಸ್ ಬಿಸಿನೆಸ್ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಈ ಮಧ್ಯೆ ಅನಿಲ್ ಅಂಬಾನಿ ಅವರ ಇಬ್ಬರು ಮಕ್ಕಳಾದ ಜೈ ಅನ್ಮೋಲ್ ಮತ್ತು ಜೈ ಅನ್ಷುಲ್ ಅಂಬಾನಿ ಅವರು ರಿಲಾಯನ್ಸ್ ಗ್ರೂಪ್​ನ ವಿವಿಧ ವಿಭಾಗಗಳಲ್ಲಿ ಅನುಭವ ಪಡೆಯುತ್ತಿದ್ದಾರೆ. ಹಿರಿಯ ಮಗ ಜೈ ಅನ್ಮೋಲ್ ಅಂಬಾನಿ ಆಸ್ತಿಮೌಲ್ಯ 20,000 ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಇದೆಲ್ಲದರ ನಡುವೆ ಅಂಬಾನಿ ಕುಟುಂಬದ ಇನ್ನೂ ಕೆಲ ಮಂದಿ ಹೆಚ್ಚು ಪ್ರಚಾರದಿಂದ ದೂರವೇ ಇದ್ದಾರೆ. ಧೀರೂಭಾಯ್ ಅಂಬಾನಿಯವರಿಗೆ ಇಬ್ಬರು ಗಂಡುಮಕ್ಕಳ ಜೊತೆಗೆ ಇಬ್ಬರು ಹೆಣ್ಮಕ್ಕಳೂ ಇದ್ದಾರೆ. ದೀಪ್ತಿ ಮತ್ತು ನೀನಾ ಅವರು ವಿವಾಹವಾಗಿ ಬೇರೆ ಬೇರೆ ಉದ್ಯಮಕುಟುಂಬಗಳನ್ನು ಸೇರಿದ್ದಾರೆ.

ಇದನ್ನೂ ಓದಿ: ಬೆರಳೆಣಿಕೆಯ ಕಂಪನಿಗಳು ಭಾರತದ ಅಭಿವೃದ್ಧಿಯ ಹಣೆಬರಹ ಬರೆಯುವಂತಾಗಬಾರದು: ಉದಯ್ ಕೋಟಕ್

ನೀನಾ ಅವರು ಕೊಠಾರಿ ಕುಟುಂಬದ ಸದಸ್ಯ ಭದ್ರಶ್ಯಾಮ್ ಎಂಬುವವರನ್ನು ಮದುವೆಯಾಗಿದ್ದಾರೆ. ಇವರಿಗೆ ನಯನತಾರಾ ಮತ್ತು ಅರ್ಜುನ್ ಕೊಠಾರಿ ಎಂಬಿಬ್ಬರು ಮಕ್ಕಳಿದ್ದಾರೆ. ನೀನಾ ಕೊಠಾರಿ ಅಂಬಾನಿ ಕುಟುಂಬದ ಸದಸ್ಯೆಯಾದರೂ ಯಾವತ್ತೂ ಪ್ರಚಾರದಿಂದ ದೂರ ಉಳಿದವರು.

ಸಲ್ಗಾಂವ್ಕರ್ ಕುಟುಂಬದಲ್ಲಿ ಮತ್ತೊಬ್ಬ ಅಂಬಾನಿ ಸದಸ್ಯೆ

ಇನ್ನು, ಅಂಬಾನಿ ಕುಟುಂಬದ ಮತ್ತೊಬ್ಬ ಸದಸ್ಯೆ ದೀಪ್ತಿ ಅವರು ಗೋವಾದ ಸಲ್ಗಾಂವ್ಕರ್ ಕುಟುಂಬ ಸೇರಿದ್ದಾರೆ. ವಿಎಂ ಸಲ್ಗಾಂವ್ಕರ್ ಗ್ರೂಪ್​ನ ಮಾಲೀಕ ದತ್ತರಾಜ್ ಸಲ್ಗಾಂವ್ಕರ್ ಅವರನ್ನು ವಿವಾಹವಾಗಿರುವ ದೀಪ್ತಿಗೆ ವಿಕ್ರಮ್ ಸಲ್ಗಾಂವ್ಕರ್ ಮತ್ತು ಇಷ್ಚೇತಾ ಸಲ್ಗಾಂವ್ಕರ್ ಎಂಬಿಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: Small Business Ideas: ಹತ್ತು ಸಾವಿರ ರೂ ಮಾತ್ರವಾ ಇರುವುದು? ಈ ಬಿಸಿನೆಸ್​ಗಳನ್ನು ಪ್ರಯತ್ನಿಸಿ

ಗೋವನ್ನರಿಗೆ ಮತ್ತು ಫುಟ್ಬಾಲ್ ಪ್ರಿಯರಿಗೆ ಸಲ್ಗಾಂವ್ಕರ್ ಹೆಸರು ತೀರಾ ಚಿರಪರಿಚಿತ. ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಫುಟ್ಬಾಲ್ ಕ್ಲಬ್​ಗಳಲ್ಲಿ ಒಂದೆನಿಸಿದ ಸಲ್ಗಾಂವ್ಕರ್ ಎಫ್​ಸಿ ತಂಡದ ಮಾಲೀಕರು ಇವರು. ಸಾಕಷ್ಟು ಮೈನಿಂಗ್ ಮತ್ತು ಹೋಟೆಲ್ ಬಿಸಿನೆಸ್​ಗಳನ್ನು ಇವರು ಹೊಂದಿದ್ದಾರೆ.

ವಿಕ್ರಮ್ ಸಲ್ಗಾಂವ್ಕರ್ ರಿಲಾಯನ್ಸ್ ಎಂಟರ್ಟೈನ್ಮೆಂಟ್ ಮೊದಲಾದ ಕಡೆ ಕೆಲಸ ಮಾಡಿ ಈಗ ಸಲ್ಗಾಂವ್ಕರ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಪ್ರೈ ಲಿ ಮೊದಲಾದ ಕಂಪನಿಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ