ನವದೆಹಲಿ, ಅಕ್ಟೋಬರ್ 13: ಭಾರತದಲ್ಲಿ ಎಲ್ಲಾ ರೀತಿಯ ತೆರಿಗೆಗಳ ಸಂಗ್ರಹ ಗಣನೀಯವಾಗಿ ಹೆಚ್ಚುತ್ತಿದೆ. ಮೊನ್ನೆ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸಂಗ್ರಹವಾದ ನಿವ್ವಳ ನೇರ ತೆರಿಗೆಯಲ್ಲಿ ಶೇ. 18.35ರಷ್ಟು ಹೆಚ್ಚಳವಾಗಿದೆ. ಏಪ್ರಿಲ್ 1ರಿಂದ ಅಕ್ಟೋಬರ್ 10ರವರೆಗೆ 11.25 ಲಕ್ಷ ರೂನಷ್ಟು ನಿವ್ವಳ ನೇರ ತೆರಿಗೆಯನ್ನು ಸರ್ಕಾರ ಗಿಟ್ಟಿಸಿದೆ. ಇದು ರೀಫಂಡ್ ಕಳೆದು ಸರ್ಕಾರದ ಬೊಕ್ಕಸಕ್ಕೆ ಸೇರಿದ ತೆರಿಗೆ ಸಂಗ್ರಹವಾಗಿದೆ. ಒಟ್ಟು ತೆರಿಗೆ ಸಂಗ್ರಹ 13.57 ಲಕ್ಷ ರೂ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿಆಗಿದ್ದ ಗ್ರಾಸ್ ಟ್ಯಾಕ್ಸ್ ಅಥವಾ ಒಟ್ಟು ತೆರಿಗೆ ಸಂಗ್ರಹದಲ್ಲಿ ಶೇ. 22.30ರಷ್ಟು ಏರಿಕೆ ಆಗಿದೆ.
ಭಾರತದಲ್ಲಿರುವ ನೇರ ತೆರಿಗೆಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್, ಡಿವಿಡೆಂಡ್ ಟ್ಯಾಕ್ಸ್, ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಇತ್ಯಾದಿ ಇವೆ. ಇದರಲ್ಲಿ ಸರ್ಕಾಕ್ಕೆ ಅತಿಹೆಚ್ಚು ವರಮಾನ ತರುವುದು ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್ ಟ್ಯಾಕ್ಸ್. 2024-25ರ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸಂಗ್ರಹವಾದ 11.25 ಲಕ್ಷ ಕೋಟಿ ರೂ ಮೊತ್ತದ ನಿವ್ವಳ ನೇರ ತೆರಿಗೆಯಲ್ಲಿ ವೈಯಕ್ತಿಕ ಆದಾಯ ತೆರಿಗೆ 5.98 ಲಕ್ಷ ಕೋಟಿ ರೂ ಮೊತ್ತದಷ್ಟಿದೆ. ಕಾರ್ಪೊರೇಟ್ ತೆರಿಗೆ ಪಾಲು 4.94 ಲಕ್ಷ ಕೋಟಿ ರೂನಷ್ಟಿದೆ. 2023-24ರ ವರ್ಷದಲ್ಲಿ ಇದೇ ಅವಧಿಯಲ್ಲಿ ನಿವ್ವಳ ತೆರಿಗೆ ಸಂಗ್ರ 9.51 ಲಕ್ಷ ಕೋಟಿ ರೂ ಇತ್ತು.
ಇದನ್ನೂ ಓದಿ: ಕರೆನ್ಸಿ ಇತಿಹಾಸದಲ್ಲೇ ಅತಿ ಪಾತಾಳಕ್ಕೆ ರುಪಾಯಿ; ಡಾಲರ್ ಎದುರು ಈಗ 84 ರೂ; ಈ ಕುಸಿತಕ್ಕೆ ಏನು ಕಾರಣ?
ಒಟ್ಟು ತೆರಿಗೆ ಸಂಗ್ರಹ: 13,57,111 ಕೋಟಿ ರೂ
ಈ ಪೈಕಿ 2,31,150 ಕೋಟಿ ರೂ ರೀಫಂಡ್ಗಳನ್ನು ಮಾಡಲಾಗಿದೆ. ಇದನ್ನು ಕಳೆದು ಉಳಿದ ನಿವ್ವಳ ನೇರ ತೆರಿಗೆ ಸಂಗ್ರಹ 11,25,961 ಕೋಟಿ ರೂ ಎಂದು ಸರ್ಕಾರ ಅಕ್ಟೋಬರ್ 11ರಂದು ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ.
ಇದನ್ನೂ ಓದಿ: ಡ್ರೈವರ್ ಇರುವ ಕಾರಿಗಿಂತಲೂ ಇದು 20 ಪಟ್ಟು ಸೇಫ್? ಸೈಬರ್ಕ್ಯಾಬ್ ಅನಾವರಣಗೊಳಿಸಿದ ಇಲಾನ್ ಮಸ್ಕ್; ಬೆಲೆ 30,000 ಮಾತ್ರ
ರೀಫಂಡ್ನಲ್ಲಿ ಈ ಬಾರಿ ಗಣನೀಯವಾಗಿ ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1.58 ಲಕ್ಷ ರೂನಷ್ಟು ರೀಫಂಡ್ ಮಾಡಲಾಗಿತ್ತು. ಈ ಬಾರಿ 2.31 ಲಕ್ಷ ಕೋಟಿ ರೂ ಆಗಿದೆ. ರೀಫಂಡ್ನಲ್ಲಿ ಶೇ. 46ರಷ್ಟು ಹೆಚ್ಚಳವಾಗಿದೆ. ಆದರೂ ಕೂಡ ನಿವ್ವಳ ನೇರ ತೆರಿಗೆಯಲ್ಲಿ ಶೇ. 18.35ರಷ್ಟು ಹೆಚ್ಚು ಸಂಗ್ರಹವಾಗಿರುವುದು ಗಮನಾರ್ಹ.
ಇಲ್ಲಿ ಇತರೆ ನೇರ ತೆರಿಗೆಯಲ್ಲಿ ಈಕ್ವಲೈಸೇಶನ್ ಸುಂಕ, ಫ್ರಿಂಜ್ ಬೆನಿಫಿಟ್ ಟ್ಯಾಕ್ಸ್, ವೆಲ್ತ್ ಟ್ಯಾಕ್ಸ್, ಬ್ಯಾಂಕಿಂಗ್ ಕ್ಯಾಷ್ ಟ್ರಾನ್ಸಾಕ್ಷ್ ಟ್ಯಾಕ್ಸ್, ಹೋಟೆಲ್ ರೆಸಿಪ್ಟ್ ಟ್ಯಾಕ್ಸ್, ಇಂಟರೆಸ್ಟ್ ಟ್ಯಾಕ್ಸ್, ಎಕ್ಸ್ಪೆಂಡಿಚರ್ ಟ್ಯಾಕ್ಸ್, ಎಸ್ಟೇಟ್ ಡ್ಯೂಟಿ ಮತ್ತು ಗಿಫ್ಟ್ ಟ್ಯಾಕ್ಸ್ ಸೇರಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ