AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG cylinders: ಇನ್ನು ಕ್ಯುಆರ್​ ಕೋಡ್​ನೊಂದಿಗೆ ಬರಲಿದೆ ಎಲ್​ಪಿಜಿ ಸಿಲಿಂಡರ್! ಪ್ರಯೋಜನಗಳು ಹಲವು

ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್, ಟ್ರ್ಯಾಕ್ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಿಲಿಂಡರ್ ನಿರ್ವಹಣೆಗೆ ಕ್ಯುಆರ್ ಕೋಡ್ ತಂತ್ರಜ್ಞಾನ ನೆರವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

LPG cylinders: ಇನ್ನು ಕ್ಯುಆರ್​ ಕೋಡ್​ನೊಂದಿಗೆ ಬರಲಿದೆ ಎಲ್​ಪಿಜಿ ಸಿಲಿಂಡರ್! ಪ್ರಯೋಜನಗಳು ಹಲವು
ಕ್ಯುಆರ್​ ಕೋಡ್​ನೊಂದಿಗೆ ಎಲ್​ಪಿಜಿ ಸಿಲಿಂಡರ್
TV9 Web
| Edited By: |

Updated on:Nov 17, 2022 | 11:17 AM

Share

ನವದೆಹಲಿ: ಶೀಘ್ರದಲ್ಲೇ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​​ಗಳು (LPG) ಕ್ಯುಆರ್ ಕೋಡ್​ನೊಂದಿಗೆ ಬರಲಿವೆ. ಇದರಿಂದ ಅಡುಗೆ ಅನಿಲ ಸಿಲಿಂಡರ್​ಗಳ ನಿಯಂತ್ರಣಕ್ಕೆ ನೆರವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ (Hardeep Singh Puri) ಸಿಂಗ್ ಪುರಿ ತಿಳಿಸಿದ್ದಾರೆ. ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್, ಟ್ರ್ಯಾಕ್ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಿಲಿಂಡರ್ ನಿರ್ವಹಣೆಗೆ ಕ್ಯುಆರ್ ಕೋಡ್ ತಂತ್ರಜ್ಞಾನ ನೆರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

‘ಟ್ರೇಸಿಂಗ್​ ಇನ್ನು ಸುಲಭ. ಇದೊಂದು ಗಮನಾರ್ಹ ಆವಿಷ್ಕಾರ. ಹೊಸ ಸಿಲಿಂಡರ್​ಗಳಲ್ಲಿ ಕ್ಯುಆರ್ ಕೋಡ್ ಅನ್ನು ವೆಲ್ಡ್ ಮಾಡಿ ಅಂಟಿಸಲಾಗುತ್ತದೆ. ಅದನ್ನು ಆ್ಯಕ್ಟಿವೇಟ್ ಮಾಡಿದ ಕೂಡಲೇ ಅದು ಅನೇಕ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿದೆ. ಕಳ್ಳತನ, ಟ್ರ್ಯಾಕಿಂಗ್, ಟ್ರೇಸಿಂಗ್ ಮತ್ತು ಗ್ಯಾಸ್ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆಗೆ ಇದು ನೆರವಾಗಲಿದೆ’ ಎಂದು ವಿಡಿಯೊ ಸಹಿತ ಸಚಿವರು ಟ್ವೀಟ್ ಮಾಡಿದ್ದಾರೆ.

ಸದ್ಯದಲ್ಲೇ ಮಾರುಕಟ್ಟೆಗೆ

ಉತ್ತರ ಪ್ರದೇಶದಲ್ಲಿ ‘ವಿಶ್ವ ಎಲ್​​ಪಿಜಿ ವಾರ 2022’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಪುರಿ ಅಧಿಕಾರಿಗಳ ಜತೆ ಕ್ಯುಆರ್ ಕೋಡ್ ತಂತ್ರಜ್ಞಾನ ವಿಚಾರವಾಗಿ ಚರ್ಚಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ವಸ್ತುವಿನ ಕುರಿತ ವಿವರಗಳು ಹಾಗೂ ವಿಸ್ತೃತ ಮಾಹಿತಿಯನ್ನೂ ಕ್ಯುಆರ್ ಕೋಡ್ (Quick Response) ಮೂಲಕ ತಿಳಿಯಬಹುದಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ಧ; ಸಚಿವ ಹರದೀಪ್ ಸಿಂಗ್ ಪುರಿ

ಕ್ಯುಆರ್ ಕೋಡ್ ಹೊಂದಿರುವ ಮೊದಲ ಬ್ಯಾಚ್​ನ 14.2 ಕೆಜಿಯ ಗೃಹ ಬಳಕೆಯ 20,000 ಎಲ್​ಪಿಜಿ ಸಿಲಿಂಡರ್​ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ‘ಲೈವ್ ಹಿಂದೂಸ್ತಾನ್’ ಇತ್ತೀಚೆಗೆ ವರದಿ ಮಾಡಿತ್ತು. ಸಿಲಿಂಡರ್​ಗಳಿಗೆ ಭದ್ರತೆ ಒದಗಿಸುವುದು, ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಪತ್ತೆಹಚ್ಚುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಉಲ್ಲೇಖಿಸಿತ್ತು.

ಕೈಗೆಟಕುವ ದರದಲ್ಲಿ ಶುದ್ಧ ಇಂಧನ ಒದಗಿಸುವ ಬಗ್ಗೆಯೂ ಕಾರ್ಯಕ್ರಮದಲ್ಲಿ ಪುರಿ ಮಾತನಾಡಿದ್ದಾರೆ. ಎಲ್​ಪಿಜಿ ಎನರ್ಜಿ ಮಿಕ್ಸ್, ದಕ್ಷತೆ, ಸಂಸ್ಕರಣೆ, ಬಯೋ ಎಲ್​ಪಿಜಿಯಂಥ ವಿವಿಧ ಆವಿಷ್ಕಾರಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದೂ ಅವರು ಹೇಳಿದ್ದಾರೆ. ಈ ಆವಿಷ್ಕಾರಗಳು ಅಭಿವೃದ್ಧಿಗೆ ಪೂರಕವಾಗುವುದರ ಜತೆಗೆ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೂ ನೆರವು ನೀಡಲಿವೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Thu, 17 November 22

Follow Us
Web contact
Web contact

TV9 Kannada

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?