LPG Cylinder Price: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟು?

ದೀಪಾವಳಿ ಹಬ್ಬದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಎಲ್​ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿವೆ. ಇದರೊಂದಿಗೆ ಸತತ ಆರನೇ ತಿಂಗಳು ವಾಣಿಜ್ಯ ಬಳಕೆಯ ಎಲ್​ಪಿಜಿ ಬೆಲೆ ಇಳಿಕೆಯಾದಂತಾಗಿದೆ.

LPG Cylinder Price: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟು?
ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
Follow us
TV9 Web
| Updated By: Ganapathi Sharma

Updated on:Nov 01, 2022 | 10:35 AM

ದೀಪಾವಳಿ ಹಬ್ಬದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಎಲ್​ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿವೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂದು ಅಂದರೆ ನವೆಂಬರ್ 1 ರಂದು ಮತ್ತೆ ಕಡಿತಗೊಳಿಸಲಾಗಿದೆ. ಇದರೊಂದಿಗೆ ಸತತ ಆರನೇ ತಿಂಗಳು ವಾಣಿಜ್ಯ ಬಳಕೆಯ ಎಲ್​ಪಿಜಿ ಬೆಲೆ ಇಳಿಕೆಯಾದಂತಾಗಿದೆ. 19-ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ 115.50 ರೂಪಾಯಿ ಕಡಿತಗೊಳಿಸಲಾಗಿದ್ದು, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ ರೂ 1,885 ರಿಂದ ರೂ 1,744 ಕ್ಕೆ ಇಳಿದಿದೆ. ಏತನ್ಮಧ್ಯೆ, ಪ್ರಸ್ತುತ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್‌ ಎಲ್‌ಪಿಜಿ ಬೆಲೆ 1,053 ರೂ. ಇದೆ.

ಪರಿಷ್ಕೃತ ದರ ಪಟ್ಟಿಯ ಪ್ರಕಾರ ಇಂಡೇನ್​ನ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಂದಿನಿಂದ ದೆಹಲಿಯಲ್ಲಿ 115.5 ರೂ., ಕೋಲ್ಕತ್ತಾದಲ್ಲಿ 113 ರೂ., ಮುಂಬೈನಲ್ಲಿ 115.5 ರೂ. ಮತ್ತು ಚೆನ್ನೈನಲ್ಲಿ 116.5 ರೂ.ಗೆ ಕಡಿತಗೊಳಿಸಲಾಗಿದೆ.

ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಪರಿಷ್ಕೃತ ಬೆಲೆ

  • ದೆಹಲಿಯಲ್ಲಿ ಇಂಡೇನ್‌ನ 19 ಕೆಜಿ ಸಿಲಿಂಡರ್ ಬೆಲೆ ಹಿಂದೆ 1859.5 ರೂ. ಇತ್ತು. ಇದೀಗ 19 ಕೆಜಿ ಸಿಲಿಂಡರ್ ಬೆಲೆ 1744 ರೂ. ಆಗಿದೆ.
  • ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1846 ರೂ. ಆಗಿದೆ, ಈ ಹಿಂದೆ 1995.50 ರೂ.ಗೆ ಲಭ್ಯವಿತ್ತು.
  • ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈ ಹಿಂದೆ 1844 ರೂ. ಆಗಿತ್ತು, ಈಗ 1696 ರೂ.ಗೆ ಲಭ್ಯವಾಗಲಿದೆ.
  • ಚೆನ್ನೈನಲ್ಲಿ ಬದಲಾದ ಬೆಲೆಯಿಂದಾಗಿ ವಾಣಿಜ್ಯ ಸಿಲಿಂಡರ್ 1893 ರೂ.ಗೆ ಲಭ್ಯವಾಗಲಿದೆ. ಈ ಹಿಂದೆ ಈ ಸಿಲಿಂಡರ್ ಬೆಲೆ 2009.50 ರೂ. ಆಗಿತ್ತು.

ಗೃಹಬಳಕೆ ಸಿಲಿಂಡರ್ ಬೆಲೆ

  • ಕೋಲ್ಕತ್ತಾ: ಪ್ರತಿ ಸಿಲಿಂಡರ್‌ಗೆ 1079 ರೂ
  • ದೆಹಲಿ: ಪ್ರತಿ ಸಿಲಿಂಡರ್‌ಗೆ 1053 ರೂ
  • ಮುಂಬೈ: ಪ್ರತಿ ಸಿಲಿಂಡರ್‌ಗೆ 1052.5 ರೂ
  • ಚೆನ್ನೈ: ಪ್ರತಿ ಸಿಲಿಂಡರ್‌ಗೆ 1068.5 ರೂ

ದೇಶದ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ನಿಗದಿಪಡಿಸುತ್ತವೆ. ವಾಣಿಜ್ಯ LPG ಅನಿಲವನ್ನು ಹೆಚ್ಚಾಗಿ ಹೋಟೆಲ್‌ಗಳು, ಆಹಾರ ಅಂಗಡಿಗಳು ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಬೆಲೆ ಇಳಿಕೆಯಿಂದ ಉದ್ಯಮಿಗಳಿಗೆ ತುಸು ರಿಲೀಫ್ ಸಿಕ್ಕಂತಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 am, Tue, 1 November 22

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ