AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾನ್ ಕಾರ್ಡ್ ಮಾಡಿಸಬೇಕೆ? ಆಧಾರ್ ಮೂಲಕ ಸುಲಭವಾಗಿ ಉಚಿತವಾಗಿ ಇ-ಪ್ಯಾನ್ ಪಡೆಯುವ ಕ್ರಮ

Steps to get e-PAN using Aadhaar: ಪ್ಯಾನ್ ನಂಬರ್ ಹೊಂದಿಲ್ಲದವರು ತ್ವರಿತವಾಗಿ ಪ್ಯಾನ್ ಬೇಕೆಂದಿದ್ದರೆ ಇ-ಪ್ಯಾನ್ ಪಡೆಯಬಹುದು. ಪಿಡಿಎಫ್ ರೂಪದಲ್ಲಿ ನಿಮಗೆ ಇನ್ಸ್​ಟೆಂಟ್ ಆಗಿ ಇ-ಪ್ಯಾನ್ ಸಿಗುತ್ತದೆ. ಇದನ್ನು ಮಾಡಿಸಲು ಮೂಲಭೂತವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಆಧಾರ್​​ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದಿರಬೇಕು.

ಪ್ಯಾನ್ ಕಾರ್ಡ್ ಮಾಡಿಸಬೇಕೆ? ಆಧಾರ್ ಮೂಲಕ ಸುಲಭವಾಗಿ ಉಚಿತವಾಗಿ ಇ-ಪ್ಯಾನ್ ಪಡೆಯುವ ಕ್ರಮ
ಆಧಾರ್ ಕಾರ್ಡ್, ಪಾನ್ ನಂಬರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2024 | 5:54 PM

Share

ಆಧಾರ್​ನಂತೆ ಪ್ಯಾನ್ ನಂಬರ್ ಕೂಡ ಈಗ ಬಹಳ ಅಗತ್ಯ ಇರುವ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ವಿವಿಧ ಹೂಡಿಕೆಗಳು ಸೇರಿದಂತೆ ಬಹುತೇಕ ಹಣಕಾಸು ಸೇವೆಗಳಿಗೆ ಪ್ಯಾನ್ ಬೇಕೇ ಬೇಕು. ಪರ್ಮನೆಂಟ್ ಅಕೌಂಟ್ ನಂಬರ್ ಎನ್ನಲಾಗಿರುವ ಇದರಲ್ಲಿ ಅಕ್ಷರ ಪದ ಮಿಶ್ರಿತ (Alphanumeric) 10 ಅಂಕಿಗಳಿರುತ್ತವೆ. ಆದಾಯ ತೆರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಪ್ಯಾನ್ ರೂಪಿಸಲಾಗಿದೆ. ಈಗ ಹೊಸದಾಗಿ ಪ್ಯಾನ್ ಮಾಡಿಸುವುದು ತುಸು ಸುಲಭದ ಕೆಲಸ. ಆದರೆ, ಕೆಲ ದಿನಗಳವರೆಗೆ ಕಾಯಬೇಕಾಗುತ್ತದೆ. ನೀವು ತ್ವರಿತವಾಗಿ ಪ್ಯಾನ್ ಮಾಡಿಸುವುದಿದ್ದರೆ ಆಧಾರ್ ಮೂಲಕ ಮಾರ್ಗವುಂಟು. ಬಹಳ ಬೇಗನೇ ನೀವು ಇ-ಪ್ಯಾನ್ ಪಡೆಯಬಹುದು. ಇದು ಮಾಮೂಲಿಯ ಪ್ಯಾನ್ ಕಾರ್ಡ್​ನಷ್ಟೇ ಮೌಲ್ಯ ಹೊಂದಿರುತ್ತದೆ. ಎಲ್ಲದಕ್ಕೂ ಅದನ್ನು ಬಳಸಬಹುದು.

ನೀವು ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ಮಾಡಿಸಬೇಕೆಂದರೆ ಆಧಾರ್ ನಂಬರ್ ಹೊಂದಿರಬೇಕು. ನಿಮಗೆ ತತ್​ಕ್ಷಣವೇ ಪ್ಯಾನ್ ನಂಬರ್ ಅಲಾಟ್ ಆಗುತ್ತದೆ. ಪಿಡಿಎಫ್ ರೂಪದಲ್ಲಿ ಪ್ಯಾನ್ ಪ್ರಾಪ್ತವಾಗುತ್ತದೆ. ಇದಕ್ಕೆ ಯಾವ ಶುಲ್ಕ ಪಾವತಿಸಬೇಕಿಲ್ಲ. ಇ-ಪ್ಯಾನ್ ಪಡೆಬೇಕೆಂದರೆ ಆಗಲೇ ತಿಳಿಸಿದಂತೆ ಆಧಾರ್ ಕಾರ್ಡ್ ಹೊಂದಿರಬೇಕು. ಮತ್ತು ಆಧಾರ್​ಗೆ ಮೊಬೈಲ್ ನಂಬರ್ ಜೋಡಿತವಾಗಿರಬೇಕು.

ಈಗಾಗಲೇ ಪ್ಯಾನ್ ನಂಬರ್ ಹೊಂದಿದ್ದು ಅದು ಕಳೆದುಹೋಗಿದ್ದವರು ಪ್ಯಾನ್ ರೀಪ್ರಿಂಟ್ ಪಡೆಯಬಹುದು. ಒಮ್ಮೆಯೂ ಪ್ಯಾನ್ ಮಾಡಿಸಿಯೇ ಇಲ್ಲದಿದ್ದರೆ ಆಗ ಇ-ಪ್ಯಾನ್ ಪಡೆಯಬಹುದು.

ಇದನ್ನೂ ಓದಿ: ಡಿಗ್ರಿ ಪಾಸಾದವರಿಗೆ ಬ್ಯಾಂಕ್​ಗಳಲ್ಲಿ ಅಪ್ರೆಂಟಿಸ್​ಶಿಪ್; ಒಂದು ವರ್ಷ ಸ್ಟೈಪೆಂಡ್; ಇನ್ನೊಂದು ತಿಂಗಳಲ್ಲಿ ಸ್ಕೀಮ್ ಜಾರಿ ಸಾಧ್ಯತೆ

ಆನ್​ಲೈನ್​ನಲ್ಲಿ ಇ-ಪ್ಯಾನ್ ಪಡೆಯುವ ಕ್ರಮ

  • ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್​ಗೆ ಹೋಗಿ: www.incometax.gov.in/iec/foportal/
  • ಈ ಪೋರ್ಟಲ್​ನಲ್ಲಿ ಮುಖ್ಯಪುಟದಲ್ಲಿ ಕಾಣುವ ‘ಇನ್ಸ್​ಟೆಂಟ್ ಇ-ಪ್ಯಾನ್’ ಅನ್ನು ಕ್ಲಿಕ್ ಮಾಡಿ.
  • ‘ಗೆಟ್ ನ್ಯೂ ಇ-ಪ್ಯಾನ್’ ಪುಟದಲ್ಲಿ ನೀವು ನಿಮ್ಮ 12 ಅಂಕಿಗಳ ಆಧಾರ್ ನಂಬರ್ ಅನ್ನು ನಮೂದಿಸಿ.
  • ಚೆಕ್​ಬಾಕ್ಸ್ ಟಿಕ್ ಮಾಡಿ, ‘ಕಂಟಿನ್ಯೂ’ ಕ್ಲಿಕ್ ಮಾಡಿರಿ.
  • ಈಗ ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ. ಆ ಸಂಖ್ಯೆಯನ್ನು ನಮೂದಿಸಿ.
  • ಈಗ ಯುಐಡಿಎಐನಲ್ಲಿ ನಿಮ್ಮ ಆಧಾರ್ ವಿವರವನ್ನು ಪರಾಮರ್ಶಿಸಲು ಅನುಮತಿ ಕೇಳುತ್ತದೆ. ಆ ಚೆಕ್ ಬಾಕ್ಸ್ ಟಿಕ್ ಮಾಡಿ. ಬಳಿಕ ‘ಕಂಟಿನ್ಯೂ’ ಕ್ಲಿಕ್ ಮಾಡಿ

ಅಂತಿಮವಾಗಿ ನೀವು ಸಬ್ಮಿಟ್ ಮಾಡಿದಾಗ ಪ್ರಕ್ರಿಯೆ ಮುಕ್ತಾಯವಾದಂತೆ. ನಿಮಗೆ ಅಕ್ನಾಲೆಜ್ಮೆಂಟ್ ನಂಬರ್ ಬರುತ್ತದೆ. ಅದನ್ನು ಉಳಿಸಿಟ್ಟುಕೊಂಡಿರಿ. ನಿಮ್ಮ ಮೊಬೈಲ್ ನಂಬರ್​ಗೆ ಕನ್ಫರ್ಮೆಸನ್ ಮೆಸೇಜ್ ಕೂಡ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ