Meesho: ಈ ಇ- ಕಾಮರ್ಸ್ ಕಂಪೆನಿ ಸಿಬ್ಬಂದಿ ಬೇಕಾದ ಸ್ಥಳದಿಂದ ಶಾಶ್ವತವಾಗಿ ಕೆಲಸ ಮಾಡಬಹುದು

| Updated By: Srinivas Mata

Updated on: Feb 07, 2022 | 9:17 PM

ಮೀಶೋದಿಂದ ಸಿಬ್ಬಂದಿಗಾಗಿ ಎಲ್ಲಿಂದಲಾದರೂ ಕೆಲಸ ಮಾಡುವುದಕ್ಕೆ (Work From Anywhere) ಅವಕಾಶವನ್ನು ನೀಡಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Meesho: ಈ ಇ- ಕಾಮರ್ಸ್ ಕಂಪೆನಿ ಸಿಬ್ಬಂದಿ ಬೇಕಾದ ಸ್ಥಳದಿಂದ ಶಾಶ್ವತವಾಗಿ ಕೆಲಸ ಮಾಡಬಹುದು
ಸಾಂದರ್ಭಿಕ ಚಿತ್ರ
Follow us on

ಇ-ಕಾಮರ್ಸ್ ಪ್ಲಾಟ್​ಫಾರ್ಮ್​ ಆದ ಮೀಶೋ (Meesho) ಸೋಮವಾರದಂದು ಘೋಷಣೆ ಮಾಡಿರುವಂತೆ, ಎಲ್ಲ ಸಿಬ್ಬಂದಿಗೂ ವರ್ಕ್ ಫ್ರಮ್ ಹೋಮ್ (Work From Home), ಕಚೇರಿ ಅಥವಾ ತಮಗೆ ಬೇಕಾದ ಯಾವ ಸ್ಥಳದಿಂದಲಾದರೂ ಶಾಶ್ವತವಾಗಿ ಕೆಲಸ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಸದ್ಯಕ್ಕೆ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1700ರಷ್ಟು ಸಿಬ್ಬಂದಿಗೂ ಇದು ಅನ್ವಯಿಸುತ್ತದೆ. “ಈ ರೀತಿಯಾಗಿ ಚೌಕಟ್ಟು ಇಲ್ಲದ ವಿಶಾಲ ವ್ಯಾಪ್ತಿಯ ಆಲೋಚನೆ ಅಳವಡಿಸಿಕೊಳ್ಳುವ ಮುನ್ನ ನಾವು ಹಲವು ಭವಿಷ್ಯದ ಕೆಲಸದ ಮಾದರಿಗಳನ್ನು ಅಧ್ಯಯನ ಮಾಡಿದ್ದೇವೆ,” ಎಂದು ಮೀಶೋ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆಶಿಶ್ ಕುಮಾರ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕಂಪೆನಿಯ ಮುಖ್ಯ ಕಚೇರಿಯು ಬೆಂಗಳೂರಿನಲ್ಲಿದ್ದು, ಪ್ರತಿಭೆಗಳ ಬೇಡಿಕೆ ಮತ್ತು ಸಾಂದ್ರತೆಗೆ ಅನುಗುಣವಾಗಿ ದೇಶದಾದ್ಯಂತ ರಿಮೋಟ್ ಕಚೇರಿಗಳನ್ನು ಸ್ಥಾಪಿಸಲಾಗುವುದು. ಇನ್ನೂ ಮುಂದುವರಿದು, ಕಂಪೆನಿಯು ಘೋಷಿಸಿದಂತೆ ಸಮವೇಶಗಳಲ್ಲಿ ಭಾಗಿ ಆಗಲು ಮತ್ತು ವಾರ್ಷಿಕ ಕೆಲಸದ ಬಿಡುವಿಗಾಗಿ ಗೋವಾದಂಥ ಸ್ಥಳಗಳಿಗೆ ಪ್ರವಾದ ತೆರಳುವ ಉಪ್ರಕಮಗಳನ್ನು ಆರಂಭಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಕೆಲಸ ಮಾಡುವ ಪೋಷಕರಿಗೆ ಬೆಂಬಲ ನೀಡುವ ಉದ್ದೇಶದಿಂದ ಸಿಬ್ಬಂದಿಯ ಆರು ವರ್ಷದೊಳಗಿನ ಮಕ್ಕಳಿಗಾಗಿ ಮೀಶೋ ಡೇ- ಕೇರ್ ವ್ಯವಸ್ಥೆಯನ್ನು ಪ್ರಾಯೋಜಕತ್ವ ನೀಡುತ್ತದೆ. ಇದು ಬೆಂಗಳೂರಿನಲ್ಲಿ ಇರುವ ಮೀಶೋದ ಮುಖ್ಯ ಕಚೇರಿಗೆ ಅಧಿಕೃತ ಪ್ರಯಾಣಕ್ಕೂ ಅನ್ವಯ ಆಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಸ್ಥೆಯು 30 ವಾರಗಳ ಜೆಂಡರ್ (ಲಿಂಗ) -ನ್ಯೂಟ್ರಲ್ ಪೋಷಕರ ರಜೆ ನೀತಿ, ಜೆಂಡರ್ (ಲಿಂಗ) ಪುನರ್​ವಿತರಣೆ ರಜೆ ಮತ್ತು 10 ದಿನಗಳ ಮರುಹೊಂದಿಕೆ ಮತ್ತು ರೀಚಾರ್ಜ್ ನೀತಿಯಂತಹ ಕೆಲವು ಉದ್ಯೋಗಿ ಸ್ನೇಹಿ ಅಭ್ಯಾಸಗಳನ್ನು ಹೊರತಂದಿದೆ. ಇತ್ತೀಚಿನ ಉಪಕ್ರಮವು ಸಾಂಪ್ರದಾಯಿಕ ಕಾರ್ಯಸ್ಥಳದ ಡೈನಾಮಿಕ್ಸ್ ಅನ್ನು ಮರುರೂಪಿಸುವ ಕಂಪೆನಿಯ ಪ್ರಯತ್ನಗಳನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ವರ್ಕ್​ ಫ್ರಮ್​ ಹೋಮ್​ ಸಂಕಷ್ಟ; ಮದುವೆಯ ದಿನವೂ ಲ್ಯಾಪ್​ ಟಾಪ್​, ಫೋನ್​ ಹಿಡಿದು ಕುಳಿತ ವಧು

Published On - 9:16 pm, Mon, 7 February 22