Edible Oil: ಖಾದ್ಯ ತೈಲ ಬೆಲೆಗಳು ಶೀಘ್ರದಲ್ಲೇ ಶೇ 10ರಿಂದ 15ರಷ್ಟು ಇಳಿಕೆ ಸಾಧ್ಯತೆ

ಖಾದ್ಯ ತೈಲದ ಬೆಲೆ ಇನ್ನೊಂದು ವಾರದಲ್ಲಿ ಶೇ 10ರಿಂದ 15ರಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಏನು ಎಂಬುದರ ವಿವರ ಇಲ್ಲಿದೆ.

Edible Oil: ಖಾದ್ಯ ತೈಲ ಬೆಲೆಗಳು ಶೀಘ್ರದಲ್ಲೇ ಶೇ 10ರಿಂದ 15ರಷ್ಟು ಇಳಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 06, 2022 | 3:28 PM

ಒಂದು ವಾರದೊಳಗೆ ಬೆಲೆಗಳನ್ನು ಕಡಿಮೆ ಮಾಡಲು ತಯಾರಕರನ್ನು ಸರ್ಕಾರದಿಂದ ಕೇಳಿರುವುದರಿಂದ ಖಾದ್ಯ ತೈಲ (Edible Oil) ಬೆಲೆಗಳು ಶೀಘ್ರದಲ್ಲೇ ಶೇ 10ರಿಂದ 15ರಷ್ಟು ಕಡಿಮೆ ಆಗುವ ಸಾಧ್ಯತೆಯಿದೆ. ಎಡೆಲ್‌ವೀಸ್ ಫೈನಾನ್ಷಿಯಲ್ ಸರ್ವೀಸಸ್‌ನ ಅಭಿನೀಶ್ ರಾಯ್ ಇಟಿ ನೌಗೆ ಮಾತನಾಡಿದ್ದು, ಈ ಬೆಳವಣಿಗೆಯು ಎಫ್​ಎಂಸಿಜಿ ಕಂಪೆನಿಗಳು ಮತ್ತು ಗ್ರಾಹಕರು ಇಬ್ಬರಿಗೂ ಉತ್ತಮವಾಗಿದೆ ಎಂದು ಹೇಳಿದರು. ಎಫ್‌ಎಂಸಿಜಿ ಕಂಪೆನಿಗಳಾದ ಎಚ್‌ಯುಎಲ್, ಬ್ರಿಟಾನಿಯಾ ಮತ್ತು ನೆಸ್ಟ್ಲೆ ವರ್ಷದ ದ್ವಿತೀಯಾರ್ಧದಲ್ಲಿ ಈ ಕ್ರಮದ ಪ್ರಯೋಜನಗಳನ್ನು ಕಾಣುವ ಸಾಧ್ಯತೆಯಿದೆ.

ಏಕೆಂದರೆ ತಾಳೆ ಎಣ್ಣೆಯನ್ನು ಸಾಬೂನು, ಬಿಸ್ಕತ್ತು, ನೂಡಲ್ಸ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಫ್‌ಎಂಸಿಜಿ ಕಂಪೆನಿಗಳು ವಿರಳವಾಗಿ ಬೆಲೆಗಳನ್ನು ಕಡಿತಗೊಳಿಸುತ್ತವೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಅವರು ಮಾರ್ಜಿನ್ ವಿಸ್ತರಣೆಗಳಿಂದ ಪ್ರಯೋಜನ ಪಡೆಯುತ್ತಾರೆ. ಅಲ್ಲದೆ, ದೃಢವಾದ ಮುಂಗಾರು ಕಾರಣಕ್ಕೆ ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ಇದು ಎಫ್‌ಎಂಸಿಜಿ ಕಂಪೆನಿಗಳಿಗೆ ಉತ್ತಮ ಸಂಕೇತವಾಗಿದೆ. ಆದರೆ ಖಾದ್ಯ ತೈಲ ಕಂಪೆನಿಗಳ ಮೇಲೆ ಪರಿಣಾಮವು ನೆಗೆಟಿವ್ ಆಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವನಸ್ಪತಿ, ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಆರ್‌ಬಿಡಿ ಪಾಮೋಲಿನ್‌ನಂತಹ ಖಾದ್ಯ ತೈಲಗಳ ಸಗಟು ಬೆಲೆಗಳು ಮತ್ತು ಚಿಲ್ಲರೆ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ತಿಳಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆಯಾಗಿದೆ.

ಆಹಾರ ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್‌ಪಿಡಿ) ಕಾರ್ಯದರ್ಶಿ ಸುಧಾಂಶು ಪಾಂಡೆ ಮಾತನಾಡಿ, ಎಲ್ಲ ಪ್ರಮುಖ ಖಾದ್ಯ ತೈಲ ಬ್ರಾಂಡ್‌ಗಳು ಬೆಲೆಯನ್ನು 10-15 ರೂಪಾಯಿಗಳಷ್ಟು ಕಡಿತಗೊಳಿಸಿವೆ ಮತ್ತು ಬೆಲೆ ಇಳಿಕೆಯು ಹಣದುಬ್ಬರ ಮಟ್ಟವನ್ನು ತಣ್ಣಗಾಗಲು ಸಹಾಯ ಮಾಡುತ್ತದೆ. ಇಲಾಖೆಯ ನಿರಂತರ ಮೇಲ್ವಿಚಾರಣೆ, ಎಲ್ಲ ಪಾಲುದಾರರೊಂದಿಗೆ ನಿರಂತರ ತೊಡಗಿಸಿಕೊಳ್ಳುವಿಕೆ ಮತ್ತು ಬಹು ಮಧ್ಯಸ್ಥಿಕೆಗಳ ಮೂಲಕ ಬೆಲೆ ಇಳಿಕೆ ಸಾಧ್ಯವಾಯಿತು ಎಂದಿದ್ದಾರೆ.

ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಸರ್ಕಾರ ಕಡಿತಗೊಳಿಸುವುದರಿಂದ ಎಫ್‌ಎಂಸಿಜಿ ಕಂಪೆನಿಗಳು ಕಡಿಮೆ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: LPG Gas Cylinder Price: ಗೃಹಬಳಕೆ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ