LIC Jeevan Shiromani: ಕನಿಷ್ಠ 1 ಕೋಟಿ ರೂಪಾಯಿ ಸಮ್ ಅಶ್ಯೂರ್ಡ್ ಇರುವ ಈ ಎಲ್ಐಸಿ ಪ್ಲಾನ್ ಬಗ್ಗೆ ನಿಮಗೆಷ್ಟು ಗೊತ್ತು?
ಎಲ್ಐಸಿಯ ವಿಮಾ ಉತ್ಪನ್ನವೊಂದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ಇದರಲ್ಲಿ ಕನಿಷ್ಠ ಸಮ್ ಅಶ್ಯೂರ್ಡ್ 1 ಕೋಟಿ ರೂಪಾಯಿ. ಗರಿಷ್ಠ ಮಿತಿ ಎಂಬುದೇನೂ ಇಲ್ಲ.
ಬ್ಯಾಕ್‌ಅಪ್ ಹೊಂದಿರುವುದು ಭಾರತದಲ್ಲಿ ವ್ಯಾಪಕವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಣೆಯಲ್ಲಿದೆ. ಈ ಪದವನ್ನು ಜೀವನಕ್ಕೆ ಅನ್ವಯಿಸಿ ಹೇಳುವುದಾದರೆ ಜೀವ ವಿಮೆ ಅಂತಲೂ ಕರೆಯಬಹುದು. ವ್ಯಕ್ತಿಗಳು ಮತ್ತು ಗುಂಪು ಎರಡಕ್ಕೂ ಪ್ರಯೋಜನ ಆಗುವಂಥ ಅನೇಕ ಕಂಪೆನಿಗಳು ನೀಡುವ ವಿಮಾ ಪಾಲಿಸಿಗಳು ಭಾರತದಲ್ಲಿ ಲಭ್ಯವಿದೆ. ಭಾರತೀಯರಿಗೆ ಒನ್ ಸ್ಟಾಪ್ ಜೀವ ವಿಮಾ ಪರಿಹಾರ ಅಂತ ಬಂದಾಗ ಜೀವ ವಿಮಾ ನಿಗಮ (LIC) ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಹೂಡಿಕೆದಾರರು ವಿವಿಧ ಪ್ರಯೋಜನಗಳು ಇರುವಂಥ ಎಲ್ಐಸಿ ಪ್ಲಾನ್ಗಳ ಖರೀದಿಯನ್ನು ಮಾಡಬಹುದು. ಅಂಥದ್ದೇ ಒಂದು LICಯ ಪ್ಲಾನ್ “ಜೀವನ್ ಶಿರೋಮಣಿ” (LIC Jeevan Shiromani). ಈ ಯೋಜನೆಯು ರೂ. 1 ಕೋಟಿಯ ಸಮ್ ಅಶ್ಯೂರ್ಡ್ ಮೊತ್ತವನ್ನು ನೀಡುತ್ತದೆ. ಎಲ್ಐಸಿ ಜೀವನ್ ಶಿರೋಮಣಿ ಯೋಜನೆಯು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳಿಗೆ (HNIs) ರಕ್ಷಣೆ ಮತ್ತು ಉಳಿತಾಯದ ಸಂಯೋಜನೆ ನೀಡುತ್ತದೆ. ಈ ಯೋಜನೆಯು ತನ್ನ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರ ದುರದೃಷ್ಟಕರ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ನೀಡುತ್ತದೆ.
ಪಾಲಿಸಿಯ ಅಡಿಯಲ್ಲಿ, ಪಾಲಿಸಿದಾರರಿಗೆ ಬದುಕುಳಿಯುವುದರ ಮೇಲೆ ನಿರ್ದಿಷ್ಟ ಅವಧಿಗಳಲ್ಲಿ ನಿಯತಕಾಲಿಕವಾಗಿ ಪಾವತಿಗಳನ್ನು ಮಾಡಲಾಗುತ್ತದೆ. ಇನ್ನು ಮೆಚ್ಯೂರಿಟಿ ಸಮಯದಲ್ಲಿ ಬದುಕುಳಿದಿರುವ ಪಾಲಿಸಿದಾರರಿಗೆ ಒಂದು ದೊಡ್ಡ ಮೊತ್ತದ ಪಾವತಿ ಆಗುತ್ತದೆ. ಇದರ ಜತೆಗೆ, ನಿರ್ದಿಷ್ಟಪಡಿಸಿದ ಯಾವುದೇ ಗಂಭೀರ ಕಾಯಿಲೆಗಳ ರೋಗನಿರ್ಣಯದ ಮೇಲೆ ಆಯ್ಕೆ ಮಾಡಿದ ಸಮ್ ಅಶ್ಯೂರ್ಡ್ ಮೊತ್ತದ ಶೇ 10ಕ್ಕೆ ಸಮಾನವಾದ ಒಟ್ಟು ಮೊತ್ತವನ್ನು ಪಾವತಿಸಲು ಪಾಲಿಸಿ ಒದಗಿಸುತ್ತದೆ. ಅಲ್ಲದೆ, ಯೋಜನೆಯು ಸಾಲ ಸೌಲಭ್ಯದ ಮೂಲಕ ಲಿಕ್ವಿಡಿಟಿ ಅಗತ್ಯಗಳನ್ನು ಸಹ ನೋಡಿಕೊಳ್ಳುತ್ತದೆ.
ಈ ಪಾಲಿಸಿ ಅಡಿಯಲ್ಲಿ ಕನಿಷ್ಠ ಸಮ್ ಅಶ್ಯೂರ್ಡ್ 1 ಕೋಟಿ ರೂಪಾಯಿ ಆಗಿದ್ದು, ಯಾವುದೇ ಗರಿಷ್ಠ ಮಿತಿಯಿಲ್ಲ. ಇದು 14 ವರ್ಷ, 16 ವರ್ಷ, 18 ವರ್ಷ ಮತ್ತು 20 ವರ್ಷಗಳ ಅವಧಿಯನ್ನು ಹೊಂದಿದೆ. ಆದರೆ ಅದರ ಪ್ರೀಮಿಯಂ ಪಾವತಿ ಅವಧಿಯು ಪಾಲಿಸಿ ವರ್ಷಗಳು ಮೈನಸ್ 4 ವರ್ಷಗಳು. ಉದಾಹರಣೆಗೆ 20 ವರ್ಷಗಳ ಪಾಲಿಸಿ ಅವಧಿ ಅಂತಾದರೆ, 20-4 = 16 ವರ್ಷಗಳು. ಪಾಲಿಸಿಯನ್ನು ಆಯ್ಕೆ ಮಾಡಲು ಕನಿಷ್ಠ ವಯಸ್ಸು 18 ವರ್ಷಗಳು, ಗರಿಷ್ಠ 55 ವರ್ಷಗಳು. ಡೆತ್ ಬೆನಿಫಿಟ್ ಅಡಿಯಲ್ಲಿ, ಪಾಲಿಸಿಯು ಸಮ್ ಅಶ್ಯೂರ್ಡ್ನ ಶೇ 125ಕ್ಕಿಂತ ಹೆಚ್ಚಿನ ಮೊತ್ತವನ್ನು ಒದಗಿಸುತ್ತದೆ ಅಥವಾ ವಾರ್ಷಿಕ ಪ್ರೀಮಿಯಂನ 7 ಪಟ್ಟು ಹೆಚ್ಚು ನೀಡುತ್ತದೆ. ಆದರೆ ಐದು ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರ, ಆದರೆ ಮುಕ್ತಾಯದ ದಿನಾಂಕದ ಮೊದಲು ಪ್ರಯೋಜನವನ್ನು ನೀಡಲಾಗುತ್ತದೆ.
ಗಮನಾರ್ಹವಾಗಿ, ಡೆತ್ ಬೆನಿಫಿಟ್ ಸಾವಿನ ದಿನಾಂಕದವರೆಗೆ ಪಾವತಿಸಿದ ಎಲ್ಲ ಪ್ರೀಮಿಯಂಗಳ ಶೇ 105ಕ್ಕಿಂತ ಕಡಿಮೆ ಇರುವುದಿಲ್ಲ. ಈ ಮಧ್ಯೆ, ಸರ್ವೈವಲ್ ಬೆನಿಫಿಟ್ (ಬದುಕುಳಿಯುವ ಪ್ರಯೋಜನದ) ಅಡಿಯಲ್ಲಿ, ಎಲ್ಐಸಿ ಒಂದು ನಿರ್ದಿಷ್ಟ ಅವಧಿಯ ನಂತರ ಸಮ್ ಅಶ್ಯೂರ್ಡ್ ಮೊತ್ತದ ನಿಗದಿತ ಶೇಕಡಾವಾರು ಮೊತ್ತವನ್ನು ಪಾವತಿಸುತ್ತದೆ. ಇವು:
14 ವರ್ಷಗಳ ಪಾಲಿಸಿ ಅವಧಿಗೆ, ಎಲ್‌ಐಸಿಯು ಪ್ರತಿ 10ನೇ ಮತ್ತು 12ನೇ ಪಾಲಿಸಿ ವರ್ಷದಲ್ಲಿ ಸಮ್ ಅಶ್ಯೂರ್ಡ್ನ ಶೇ 30ರಷ್ಟನ್ನು ಪಾವತಿಸುತ್ತದೆ. 16 ವರ್ಷಗಳ ಅವಧಿಯ ಸಂದರ್ಭದಲ್ಲಿ, ಪ್ರತಿ 12ನೇ ಮತ್ತು 14ನೇ ಪಾಲಿಸಿ ವರ್ಷದಲ್ಲಿ ಸಮ್ ಅಶ್ಯೂರ್ಡ್ ಮೊತ್ತದ ಶೇ 35ರಷ್ಟನ್ನು ಪಾವತಿಸಲಾಗುತ್ತದೆ. ಅಲ್ಲದೆ, 14ನೇ ಮತ್ತು 16ನೇ ಪಾಲಿಸಿ ವರ್ಷದಲ್ಲಿ ಸಮ್ ಅಶ್ಯೂರ್ಡ್ ಮೊತ್ತದ ಶೇ 40ರಷ್ಟನ್ನು 18 ವರ್ಷಗಳ ಅವಧಿಯಲ್ಲಿ ಪಾವತಿಸಲಾಗುತ್ತದೆ. 20 ವರ್ಷಗಳ ಅವಧಿಗೆ ಸಂಬಂಧಿಸಿದಂತೆ, 16ನೇ ಮತ್ತು 18ನೇ ಪಾಲಿಸಿ ವರ್ಷದ ಸಂದರ್ಭದಲ್ಲಿ ಸಮ್ ಅಶ್ಯೂರ್ಡ್ ಮೊತ್ತದ ಶೇ 45ರಷ್ಟನ್ನು ಪಾವತಿಸಲಾಗುತ್ತದೆ. ಮೆಚ್ಯೂರಿಟಿ ನಂತರ, ಎಲ್ಐಸಿ ಖಾತ್ರಿ ಮತ್ತು ಲಾಯಲ್ಟಿ ಸೇರ್ಪಡೆಗಳೊಂದಿಗೆ ಅವಧಿಯ ಕೊನೆಯಲ್ಲಿ ವಿಮಾ ಮೊತ್ತವನ್ನು ಪಾವತಿಸುತ್ತದೆ.
ಇದನ್ನೂ ಓದಿ: LIC Jeevan Umang Policy: ಎಲ್ಐಸಿ ಜೀವನ್ ಉಮಂಗ್ ಪಾಲಿಸಿಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೆ?