AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suez Canal: ಸುಯೆಜ್ ಕಾಲುವೆ ಎಸ್​​​ಇಝಡ್​ನಲ್ಲಿ ಭಾರತದ ಉದ್ಯಮಗಳಿಗೆ ಜಾಗ ನೀಡಲು ಮುಂದಾದ ಈಜಿಪ್ಟ್; ಭಾರತಕ್ಕಿದೆ ಭಾರೀ ಪ್ರಯೋಜನ

ಈ ಕಾಲುವೆಯ ವ್ಯಾಪ್ತಿಯಲ್ಲಿ ಬರುವ ವಿಶೇಷ ಆರ್ಥಿಕ ವಲಯ ಅಥವಾ ಎಸ್​​ಇಝಡ್​​​ನಲ್ಲಿ ಹೂಡಿಕೆಗೆ ಅವಕಾಶ ದೊರೆಯುವುದರಿಂದ ಜಾಗತಿಕ ವಹಿವಾಟಿನ ದೃಷ್ಟಿಯಿಂದ ಭಾರತಕ್ಕೆ ಒಳಿತಾಗಲಿದೆ. ಜಾಗತಿಕ ಸರಕು ಸಾಗಾಟ ದೃಷ್ಟಿಯಿಂದಲೂ ಪ್ರಯೋಜನವಾಗಲಿದೆ.

Suez Canal: ಸುಯೆಜ್ ಕಾಲುವೆ ಎಸ್​​​ಇಝಡ್​ನಲ್ಲಿ ಭಾರತದ ಉದ್ಯಮಗಳಿಗೆ ಜಾಗ ನೀಡಲು ಮುಂದಾದ ಈಜಿಪ್ಟ್; ಭಾರತಕ್ಕಿದೆ ಭಾರೀ ಪ್ರಯೋಜನ
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಜತೆ ಪ್ರಧಾನಿ ನರೇಂದ್ರ ಮೋದಿ
ಗಣಪತಿ ಶರ್ಮಾ
|

Updated on:Jan 27, 2023 | 11:58 AM

Share

ನವದೆಹಲಿ: ಸುಯೆಜ್ ಮಹಾ ಕಾಲುವೆಯ (Suez Canal) ವಿಶೇಷ ಆರ್ಥಿಕ ವಲಯ (SEZ) ಪ್ರದೇಶದಲ್ಲಿ ಭಾರತದ ಉದ್ಯಮಗಳಿಗೆ ಜಾಗ ನೀಡಲು ಚಿಂತನೆ ನಡೆಸಿರುವುದಾಗಿ ಈಜಿಪ್ಟ್ (Egypt) ತಿಳಿಸಿದೆ. ಈ ವಿಚಾರವಾಗಿ ಈಜಿಪ್ಟ್, ಭಾರತ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದ್ದು, ಭಾರತವು ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಬಹುದು ಎಂದು ಉಲ್ಲೇಖಿಸಲಾಗಿದೆ. ಇದರಿಂದ, ಈಜಿಪ್ಟ್​ನಲ್ಲಿ ಲಭ್ಯವಿರುವ ಹೂಡಿಕೆ ಅವಕಾಶಗಳನ್ನು ಬಳಸಿಕೊಂಡು ಹೂಡಿಕೆ ಮಾಡುವ ಸಾಮರ್ಥ್ಯ ಇರುವ ಕಂಪನಿಗಳನ್ನು ಉತ್ತೇಜಿಸಲು ಭಾರತಕ್ಕೆ ನೆರವಾಗಲಿದೆ. ಭಾರತದಿಂದ ಹೆಚ್ಚಿನ ಹೂಡಿಕೆಯನ್ನು ಈಜಿಪ್ಟ್ ಸ್ವಾಗತಿಸುತ್ತದೆ. ಜತೆಗೆ ನಿಯಮಗಳು ಮತ್ತು ಚೌಕಟ್ಟಿನಡಿ ಸೌಲಭ್ಯಗಳು ಮತ್ತು ಭತ್ಯೆಗಳನ್ನು ಒದಗಿಸಲಾಗುವುದು ಎಂದೂ ಈಜಿಪ್ಟ್ ಹೇಳಿದೆ. ಈಜಿಪ್ಟ್​​ನಲ್ಲಿ ಭಾರತದ ಹೂಡಿಕೆ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಸ್ವಾಗತಿಸಿದ್ದಾರೆ. ಪ್ರಸ್ತುತ ಈಜಿಪ್ಟ್​ನಲ್ಲಿ ಭಾರತದ ಹೂಡಿಕೆ 3.15 ಶತಕೋಟಿ ಡಾಲರ್​ನಷ್ಟಿದೆ.

ಎರಡೂ ದೇಶಗಳಲ್ಲಿ ಆರ್ಥಿಕ ಮತ್ತು ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಮತ್ತು ಉದ್ಯಮಗಳಿಗೆ ಪ್ರೋತ್ಸಾಹ ನೀಡಲು ಉಭಯ ದೇಶಗಳು ಸಮ್ಮತಿಸಿವೆ. 2021-22ರಲ್ಲಿ ಭಾರತ-ಈಜಿಪ್ಟ್ ನಡುವಣ ದ್ವಿಪಕ್ಷೀಯ ಆರ್ಥಿಕ ವಹಿವಾಟು 7.26 ಶತಕೋಟಿ ಡಾಲರ್​​ನಷ್ಟಿತ್ತು. ಕೋವಿಡ್ ಸಾಂಕ್ರಾಮಿಕದ ಸವಾಲಿನ ಹೊರತಾಗಿಯೂ ಉಭಯ ದೇಶಗಳು ಈ ಮಟ್ಟಿನ ಆರ್ಥಿಕ ವ್ಯವಹಾರ ನಡೆಸಿರುವುದಕ್ಕೆ ಇಬ್ಬರೂ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಐದು ವರ್ಷಗಳ ಒಳಗೆ 12 ಶತಕೋಟಿ ಡಾಲರ್ ದ್ವಿಪಕ್ಷೀಯ ವಹಿವಾಟಿನ ಗುರಿ ಸಾಧಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Bank strike: ಬ್ಯಾಂಕ್​ ಕೆಲಸ ಇಂದೇ ಮುಗಿಸಿಕೊಳ್ಳಿ; ಮುಂದಿನ ವಾರ 2 ದಿನ ಮುಷ್ಕರ

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಸಂದರ್ಭದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಭಾರತಕ್ಕೇನು ಪ್ರಯೋಜನ?

ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಮಹಾಕಾಲುವೆಯೇ ಸುಯೆಜ್. ಇದು ಈಜಿಪ್ಟ್ ದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಸುಯೆಜ್ ಕಾಲುವೆ ವಿಶ್ವದ ಅಂತ್ಯಂತ ವ್ಯಸ್ತ (Busiest) ವಾಣಿಜ್ಯ ಮಾರ್ಗಗಳಲ್ಲೊಂದಾಗಿದೆ. ಪ್ರತಿ ದಿನ ವಿಶ್ವದ ಒಟ್ಟಾರೆ ವಹಿವಾಟಿನ ಶೇ 12ರಷ್ಟು ಈ ಕಾಲುವೆ ಮೂಲಕ ನಡೆಯುತ್ತದೆ. ಈ ಕಾಲುವೆಯ ವ್ಯಾಪ್ತಿಯಲ್ಲಿ ಬರುವ ವಿಶೇಷ ಆರ್ಥಿಕ ವಲಯ ಅಥವಾ ಎಸ್​​ಇಝಡ್​​​ನಲ್ಲಿ ಹೂಡಿಕೆಗೆ ಅವಕಾಶ ದೊರೆಯುವುದರಿಂದ ಜಾಗತಿಕ ವಹಿವಾಟಿನ ದೃಷ್ಟಿಯಿಂದ ಭಾರತಕ್ಕೆ ಒಳಿತಾಗಲಿದೆ. ಜಾಗತಿಕ ಸರಕು ಸಾಗಾಟ ದೃಷ್ಟಿಯಿಂದಲೂ ಪ್ರಯೋಜನವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:58 am, Fri, 27 January 23

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್