AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Stocks: ಹಿಂಡನ್​ಬರ್ಗ್ ಹೊಡೆತದಿಂದ ಇನ್ನೂ ಚೇತರಿಸದ ಅದಾನಿ ಸಮೂಹ; ಷೇರು ಮೌಲ್ಯ ಶೇ 20 ಕುಸಿತ

ಅದಾನಿ ಸಮೂಹದ ಅಂಗಸಂಸ್ಥೆ ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ ಇಂದು (ಜನವರಿ 27) ಆರಂಭಗೊಂಡಿದೆ. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ದೇಶದ ಅತಿದೊಡ್ಡ ಪ್ರಮಾಣದ ಎಫ್​ಪಿಒ ಇದಾಗಿದೆ.

Adani Stocks: ಹಿಂಡನ್​ಬರ್ಗ್ ಹೊಡೆತದಿಂದ ಇನ್ನೂ ಚೇತರಿಸದ ಅದಾನಿ ಸಮೂಹ; ಷೇರು ಮೌಲ್ಯ ಶೇ 20 ಕುಸಿತ
ಅದಾನಿ ಸಮೂಹImage Credit source: Reuters
Ganapathi Sharma
|

Updated on:Jan 27, 2023 | 11:12 AM

Share

ಮುಂಬೈ: ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್​ (Hindenburg Research) ಮಾಡಿರುವ ಆರೋಪದ ಹೊಡೆತದಿಂದ ಚೇತರಿಸಿಕೊಳ್ಳಲು ಅದಾನಿ ಸಮೂಹಕ್ಕೆ (Adani Group) ಇನ್ನೂ ಸಾಧ್ಯವಾಗುತ್ತಿಲ್ಲ. ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಶುಕ್ರವಾರ ಬೆಳಗ್ಗಿನ ವೇಳೆಗೆ ಒಟ್ಟಾರೆ ಶೇ 20ರಷ್ಟು ಕುಸಿತವಾಗಿದೆ. ಅದಾನಿ ಟ್ರಾನ್ಸ್​​ಮಿಷನ್ ಷೇರುಗಳ ಮೌಲ್ಯದಲ್ಲಿ ಶೇ 19, ಅದಾನಿ ಟೋಟಲ್ ಗ್ಯಾಸ್ ಷೇರು ಮೌಲ್ಯದಲ್ಲಿ ಶೇ 19.1 ಹಾಗೂ ಅದಾನಿ ಗ್ರೀನ್ ಎನರ್ಜಿ ಷೇರು ಮೌಲ್ಯದಲ್ಲಿ ಶೇ 16ರಷ್ಟು ಕುಸಿತವಾಗಿದೆ. 2020ರ ಮಾರ್ಚ್​ ನಂತರ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕಂಡುಬಂದಿರುವ ಅತಿದೊಡ್ಡ ಪ್ರಮಾಣದ ಕುಸಿತ ಇದಾಗಿದೆ.

ಈ ಮಧ್ಯೆ, ಹಿಂಡನ್​ಬರ್ಗ್ ರಿಸರ್ಚ್ ಮಾಡಿರುವ ಆರೋಪ ದುಷ್ಟತನದಿಂದ ಮತ್ತು ಚೇಷ್ಟೆಯಿಂದ ಕೂಡಿದ್ದು. ಎಫ್​ಪಿಒ (Follow-On Public Offer) ಮೂಲಕ 20,000 ಕೋಟಿ ರೂ. ಬಂಡವಾಳ ಸಂಗ್ರಹಿಸಲು ಮುಂದಾಗಿರುವ ಸಂದರ್ಭದಲ್ಲೇ ಅಮೆರಿಕದ ಸಂಸ್ಥೆ ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದೆ ಎಂದು ಅದಾನಿ ಸಮೂಹ ಗುರುವಾರ ಹೇಳಿತ್ತು. ಜತೆಗೆ, ಅಮೆರಿಕದ ಮತ್ತು ಭಾರತದ ಕಾನೂನುಗಳಿಗೆ ಅನುಗುಣವಾಗಿ ಹಿಂಡನ್​ಬರ್ಗ್ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದೂ ತಿಳಿಸಿತ್ತು.

ಇಂದಿನಿಂದ ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ

ಅದಾನಿ ಸಮೂಹದ ಅಂಗಸಂಸ್ಥೆ ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ ಇಂದು (ಜನವರಿ 27) ಆರಂಭಗೊಂಡಿದೆ. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ದೇಶದ ಅತಿದೊಡ್ಡ ಪ್ರಮಾಣದ ಎಫ್​ಪಿಒ ಇದಾಗಿದೆ. ಷೇರು ಬೆಲೆಯನ್ನು 3,112 ರೂ.ನಿಂದ 3,276 ರೂ. ನಡುವೆ ನಿಗದಿಪಡಿಸಲಾಗಿದೆ. ಸದ್ಯ (ಜನವರಿ 27 ಮಾರುಕಟ್ಟೆ ಆರಂಬದ ವೇಳೆಗೆ) ಅದಾನಿ ಎಂಟರ್​ಪ್ರೈಸಸ್ ಷೇರು ಬೆಲೆ 3,405 ರೂ. ಇದೆ. ಶೇ 5ರ ರಿಯಾಯಿತಿ ದರದಲ್ಲಿ ಎಫ್​​ಪಿಒ ಷೇರುಗಳು ದೊರೆಯಲಿವೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Adani Group: ಹಿಂಡನ್​ಬರ್ಗ್ ವರದಿ ವಿರುದ್ಧ ಅದಾನಿ ಸಮೂಹ ಕಿಡಿ; ಕಾನೂನು ಕ್ರಮದ ಎಚ್ಚರಿಕೆ

ಎಫ್​ಪಿಒ ಮೂಲಕ ದೊಡ್ಡ ಪ್ರಮಾಣದ ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವ ಅದಾನಿ ಸಮೂಹಕ್ಕೀಗ ಹಿಂಡನ್​​ಬರ್ಗ್ ರಿಸರ್ಚ್ ವರದಿ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಎಫ್​ಪಿಒದ ಅಂತಿಮ ದಿನದ ವಹಿವಾಟಿನ ಮುಕ್ತಾಯದ ವೇಳೆಗೆ ಕಂಪನಿ ಎಷ್ಟು ಬಂಡವಾಳ ಸಂಗ್ರಹಿಸಲಿದೆ ಎಂಬ ಕುತೂಹಲ ಮಾರುಕಟ್ಟೆ ವಲಯದಲ್ಲಿ ಮೂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 27 January 23

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು