Gold Price Today: ಮತ್ತೆ ದುಬಾರಿಯಾಯ್ತು ಚಿನ್ನ, ಬೆಳ್ಳಿ; ಪ್ರಮುಖ ನಗರಗಳ ದರ ವಿವರ ಇಲ್ಲಿ ನೋಡಿ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಏರಿಕೆಯ ಓಟ ಮತ್ತೆ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ತಟಸ್ಥವಾಗಿದ್ದ ಉಭಯ ಲೋಹಗಳ ದರ ಇಂದು ಏರಿಕೆಯಾಗಿದೆ. ಅದಕ್ಕೂ ಹಿಂದಿನ ಎರಡು ಅವಧಿಯಲ್ಲಿ ಕೂಡ ಬೆಲೆ ಹೆಚ್ಚಳವಾಗಿತ್ತು. ಇಂದು 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 400 ರೂ. ಏರಿಕೆಯಾದರೆ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 440 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 100 ರೂ. ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 400 ರೂ. ಏರಿಕೆಯಾಗಿ 53,100 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 440 ರೂ. ಹೆಚ್ಚಳವಾಗಿ 57,930 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 100 ರೂ. ಹೆಚ್ಚಾಗಿ 72,600 ರೂ. ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 53,800 ರೂ.
- ಮುಂಬೈ- 53,100 ರೂ.
- ದೆಹಲಿ- 53,250 ರೂ.
- ಕೊಲ್ಕತ್ತಾ- 53,100 ರೂ.
- ಬೆಂಗಳೂರು- 53,150 ರೂ.
- ಹೈದರಾಬಾದ್- 53,100 ರೂ.
- ಕೇರಳ- 53,100 ರೂ.
- ಪುಣೆ- 53,100 ರೂ.
- ಮಂಗಳೂರು- 53,150 ರೂ.
- ಮೈಸೂರು- 53,150 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 57,930 ರೂ.
- ಮುಂಬೈ- 57,930 ರೂ.
- ದೆಹಲಿ- 58,080 ರೂ.
- ಕೊಲ್ಕತ್ತಾ- 57,930 ರೂ.
- ಬೆಂಗಳೂರು- 57,980 ರೂ.
- ಹೈದರಾಬಾದ್- 57,930 ರೂ.
- ಕೇರಳ- 57,930 ರೂ.
- ಪುಣೆ- 57,930 ರೂ.
- ಮಂಗಳೂರು- 57,980 ರೂ.
- ಮೈಸೂರು- 57,980 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 75,000 ರೂ.
- ಮೈಸೂರು- 75,000 ರೂ.
- ಮಂಗಳೂರು- 75,000 ರೂ.
- ಮುಂಬೈ- 72,600 ರೂ.
- ಚೆನ್ನೈ- 75,000 ರೂ.
- ದೆಹಲಿ- 72,600 ರೂ.
- ಹೈದರಾಬಾದ್- 75,000 ರೂ.
- ಕೊಲ್ಕತ್ತಾ- 72,600 ರೂ.