AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗಳ ವಿಕೋಪಕ್ಕೆ ತಿರುಗಿದಾಗ ಚಾಕು ತಂದ ಗಾನವಿ; ಎಲ್ಲರೂ ಶಾಕ್

ಬಿಗ್ ಬಾಸ್ ಮನೆಯಲ್ಲಿ ನಡೆದ ಅಧಿವೇಶನ ಟಾಸ್ಕ್ ವೇಳೆ ಮಂಜು ಮತ್ತು ತಾಂಡವ್ ನಡುವೆ ಘನಘೋರ ಜಗಳ ನಡೆದಿದೆ. ಏಕವಚನದಲ್ಲಿ ಕೂಗಾಡಿಕೊಂಡ ಇಬ್ಬರೂ ಪರಸ್ಪರ ಸವಾಲು ಹಾಕಿದ್ದಾರೆ. ಇದೇ ವೇಳೆ ಚಾಕು ತಂದು ಟೇಬಲ್ ಮೇಲಿಟ್ಟ ಘಟನೆಯೂ ನಡೆದಿದ್ದು, ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಜಗಳ ವಿಕೋಪಕ್ಕೆ ತಿರುಗಿದಾಗ ಚಾಕು ತಂದ ಗಾನವಿ; ಎಲ್ಲರೂ ಶಾಕ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on:Nov 12, 2026 | 8:31 AM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ಮಂಜು-ತಾಂಡವ್ ಘನಘೋರ ಕಿರಿಕ್
  • ಬಗೆದುಬಿಡ್ತೀನಿ ಎಂದ ಮಂಜು
  • ಸದನದಲ್ಲಿ ಏಕವಚನದ ಸುರಿಮಳೆ

ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಚಟುವಟಿಕೆಯ ಟಾಸ್ಕ್ ನಡುವೆ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದ್ದು, ಮಂಜು ಮತ್ತು ತಾಂಡವ್ ನಡುವೆ ಘನಘೋರ ಜಗಳ ನಡೆದಿದೆ. ಸದನದ ಮಾದರಿಯಲ್ಲಿ ನಡೆದ ಚರ್ಚೆಯ ವೇಳೆ ಇಬ್ಬರೂ ಏಕವಚನದಲ್ಲಿ ಕೂಗಾಡಿಕೊಂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವಾಗ್ವಾದದ ನಡುವೆ ತೀವ್ರ ಆಕ್ರೋಶಗೊಂಡ ಮಂಜು, ತಾಂಡವ್ ವಿರುದ್ಧ ಬಗೆದುಬಿಡ್ತೀನಿ ಎಂದು ಎಚ್ಚರಿಕೆ ನೀಡುವ ಮೂಲಕ ಮನೆಯ ವಾತಾವರಣವನ್ನು ಮತ್ತಷ್ಟು ಬಿಸಿ ಮಾಡಿದ್ದಾರೆ.

ಅಧಿವೇಶನದ ಮಾದರಿಯಲ್ಲಿ ನಡೆದ ಈ ಚರ್ಚೆಯಲ್ಲಿ ಎರಡೂ ತಂಡಗಳ ಸದಸ್ಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ತಾಂಡವ್ ತಮ್ಮ ಆಸನದಿಂದ ಎದ್ದು ನಿಂತು ವಿರೋಧಿ ತಂಡದತ್ತ ಕೈ ತೋರಿಸುತ್ತಾ ಜೋರಾಗಿ ಕೂಗಾಡಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಪೋಡಿಯಂ ಬಳಿ ನಿಂತಿದ್ದ ಮಂಜು ಕೂಡ ಅಷ್ಟೇ ಅಬ್ಬರದಿಂದ ತಿರುಗೇಟು ನೀಡಿದರು. ಇಬ್ಬರೂ ಪರಸ್ಪರ ಹೋಗಲೇ ಬಾರಲೇ ಎಂದು ಏಕವಚನ ಪ್ರಯೋಗಿಸುತ್ತಾ, ನಾಟಕ ಆಡಬೇಡ ಎಂದು ಕಿರುಚಾಡಿದ್ದಾರೆ.

ಟಾಸ್ಕ್ ವೇಳೆ ಗಾರ್ಡನ್ ಏರಿಯಾದಲ್ಲಿ ನಡೆದಿದ್ದ ದೈಹಿಕ ತಿಕ್ಕಾಟದ ವಿಚಾರವೇ ಈ ದೊಡ್ಡ ಜಗಳಕ್ಕೆ ಮೂಲ ಕಾರಣವಾಗಿದೆ. ಆಟದ ಸಂದರ್ಭದಲ್ಲಿ ಚಾಕು ತಂದು ಹಲ್ಲು ಕಿತ್ತು ಹಾಕಬೇಕು ಎಂಬ ರೀತಿಯಲ್ಲಿ ಮಾತನಾಡಿದ್ದ ವಿಚಾರವನ್ನು ಮುಂದಿಟ್ಟುಕೊಂಡು ಸದನದಲ್ಲಿ ಭಾರಿ ಗದ್ದಲ ಎಬ್ಬಿಸಲಾಯಿತು. ಇದರಿಂದ ಕೆರಳಿದ ಗಾನವಿಎದ್ದು ಹೋಗಿ ಅಡುಗೆ ಮನೆಯಲ್ಲಿದ್ದ ಎರಡು ಚಾಕುಗಳನ್ನು ತಂದು ಟೇಬಲ್ ಮೇಲೆ ಇಟ್ಟು, ಧಮ್ ಇದ್ದರೆ ಬಂದು ಹಲ್ಲು ಕಿತ್ತು ಹಾಕಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ

ಚಾಕುಗಳನ್ನು ಟೇಬಲ್ ಮೇಲೆ ಇಡುತ್ತಿದ್ದಂತೆಯೇ ಮನೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಚಾಕುಗಳನ್ನು ತೆಗೆದುಕೊಂಡು ಹೋಗುವಂತೆ ಇತರ ಸ್ಪರ್ಧಿಗಳು ಕೂಗಾಡಿದರೆ, ತಾಂಡವ್ ಸಭಾಧ್ಯಕ್ಷರ ಮಧ್ಯಪ್ರವೇಶಕ್ಕೆ ಒತ್ತಾಯಿಸಿದರು. ಒಟ್ಟಾರೆಯಾಗಿ, ಟಾಸ್ಕ್ ನೆಪದಲ್ಲಿ ಸ್ಪರ್ಧಿಗಳ ನಡುವಿನ ವೈಯಕ್ತಿಕ ದ್ವೇಷ ಮತ್ತು ಕೋಪ ಸ್ಫೋಟಗೊಂಡಿದ್ದು, ಇಂದಿನ ಸಂಚಿಕೆಯಲ್ಲಿ ಈ ಜಗಳ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:31 am, Thu, 12 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More