Tesla Market Cap: ಟೆಸ್ಲಾ ಮಾರುಕಟ್ಟೆ ಬಂಡವಾಳ ಮೌಲ್ಯ 1 ಟ್ರಿಲಿಯನ್ ಡಾಲರ್; ಫೇಸ್​ಬುಕ್​, ಗೂಗಲ್ ಸಾಲಿಗೆ ಸೇರಿದ ಟೆಸ್ಲಾ

| Updated By: Srinivas Mata

Updated on: Oct 26, 2021 | 2:58 PM

ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಕಂಪೆನಿಯಾದ ಟೆಸ್ಲಾ ಮಾರುಕಟ್ಟೆ ಬಂಡವಾಳ ಮೌಲ್ಯವು 1 ಟ್ರಿಲಿಯನ್ ಯುಎಸ್​ಡಿ ದಾಟಿದೆ. ಆ ಬಗ್ಗೆ ವಿವರ ಇಲ್ಲಿದೆ.

Tesla Market Cap: ಟೆಸ್ಲಾ ಮಾರುಕಟ್ಟೆ ಬಂಡವಾಳ ಮೌಲ್ಯ 1 ಟ್ರಿಲಿಯನ್ ಡಾಲರ್; ಫೇಸ್​ಬುಕ್​, ಗೂಗಲ್ ಸಾಲಿಗೆ ಸೇರಿದ ಟೆಸ್ಲಾ
ಟೆಸ್ಲಾ ಕಾರು
Follow us on

ಟೆಸ್ಲಾದ ಮಾರುಕಟ್ಟೆ ಬಂಡವಾಳ ಮೌಲ್ಯವು ಅಕ್ಟೋಬರ್ 25ರ ಸೋಮವಾರದಂದು ಮೊದಲ ಬಾರಿಗೆ 1 ಟ್ರಿಲಿಯನ್ ಯುಎಸ್​ಡಿ ದಾಟಿದೆ. ಈ ಮೂಲಕ ಅಮೆರಿಕನ್ ಇವಿ (ಎಲೆಕ್ಟ್ರಿಕ್ ವಾಹನ) ತಯಾರಕರನ್ನು ಮೈಕ್ರೋಸಾಫ್ಟ್, ಆಲ್ಫಾಬೆಟ್ (ಗೂಗಲ್‌ನ) ಕಂಪೆನಿಗಳ ಕ್ಲಬ್‌ಗೆ ಸೇರಿಸಿದೆ. ಆಪಲ್, ಅಮೆಜಾನ್, ಫೇಸ್​ಬುಕ್​ 1 ಟ್ರಿಲಿಯನ್‌ ಯುಎಸ್​ಡಿಗಿಂತಲೂ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಫೇಸ್​ಬುಕ್ ನಂತರ 1 ಟ್ರಿಲಿಯನ್ ಯುಎಸ್​ಡಿ ಮಾರುಕಟ್ಟೆ ಬಂಡವಾಳ ಮೌಲ್ಯದ ಗಡಿಯನ್ನು ದಾಟಿದ ಎರಡನೇ ವೇಗದ ಕಂಪೆನಿ ಟೆಸ್ಲಾ. ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ 2010ರ ಜೂನ್​ನಲ್ಲಿ ಸಾರ್ವಜನಿಕವಾಗಿ ಪದಾರ್ಪಣೆ ಮಾಡಿತು. ಈ ಮೈಲುಗಲ್ಲನ್ನು ದಾಟಲು 11 ವರ್ಷಗಳನ್ನು ತೆಗೆದುಕೊಂಡಿದೆ. ಟೆಸ್ಲಾ ಷೇರುಗಳು ಸುಮಾರು ಶೇ 13ರಷ್ಟು ಏರಿಕೆಯೊಂದಿಗೆ ದಾಖಲೆಯ 1,024.86 ಯುಎಸ್​ಡಿಯಲ್ಲಿ ವಹಿವಾಟು ನಡೆಸಿದೆ. ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 1 ಟ್ರಿಲಿಯನ್ ಯುಎಸ್​ಡಿ ದಾಟಿದೆ. ಟೆಸ್ಲಾ ಷೇರಿನ ಬೆಲೆಯು ಪ್ರತಿ ಷೇರಿಗೆ 1,000 ಯುಎಸ್​ಡಿ ತಲುಪಿದ ಸಂದರ್ಭ ಇದಾಗಿದೆ. ಕಾರು ಬಾಡಿಗೆ ದೈತ್ಯ ಹರ್ಟ್ಜ್​ನಿಂದ ಟೆಸ್ಲಾದ 100,000 EVಗಳನ್ನು ಖರೀದಿಸಲಿದೆ ಎಂಬ ಸುದ್ದಿಯಿಂದ ಈ ಪ್ರಮುಖ ಬೆಳವಣಿಗೆ ಆಗಿದೆ.

ಟೆಸ್ಲಾದಿಂದ ಮಾಡೆಲ್ 3, ಮಾಡೆಲ್ ವೈ, ಮಾಡೆಲ್ ಎಸ್ ಮತ್ತು ಮಾಡೆಲ್ ಎಕ್ಸ್‌ನಂತಹ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತದೆ. ವಾಹನ ತಯಾರಕ ಸಂಸ್ಥೆಯು 2019ರ ನವೆಂಬರ್​ನಲ್ಲಿ ಸೈಬರ್‌ಟ್ರಕ್ ಅನ್ನು ಪ್ರದರ್ಶಿಸಿತು. ಆದರೆ ಅದರ ಉತ್ಪಾದನೆಯು 2022ರ ಕೊನೆಯಲ್ಲಿ ಪ್ರಾರಂಭವಾಗುತ್ತದೆ ಎಂದು ವರದಿಯಾಗಿದೆ.

ಭಾರತದಲ್ಲಿ ಟೆಸ್ಲಾ ಮಾಡೆಲ್ 3 ಬಿಡುಗಡೆ
ವಿಶ್ವದಲ್ಲೇ ಅತಿ ಹೆಚ್ಚು ಮಾರಾಟ ಆಗುವ ಎಲೆಕ್ಟ್ರಿಕ್ ಕಾರ್ ಆಗಿರುವ ಮಾಡೆಲ್ 3 ಅನ್ನು ಟೆಸ್ಲಾ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಮೆರಿಕ ಮಾರುಕಟ್ಟೆಯಲ್ಲಿ ಮಾಡೆಲ್ 3 ಸ್ಟ್ಯಾಂಡರ್ಡ್ ಪ್ಲಸ್ (RWD), ಲಾಂಗ್ ರೇಂಜ್ (AWD) ಮತ್ತು ಪರ್ಫಾರ್ಮನ್ಸ್ (AWD) ವೇರಿಯಂಟ್​ಗಳಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ ಪ್ಲಸ್ 423 ಕಿಮೀ ವ್ಯಾಪ್ತಿ ಮತ್ತು 225 ಕಿಮೀ ವೇಗವನ್ನು ಹೊಂದಿದೆ. ಲಾಂಗ್ ರೇಂಜ್ 568 ಕಿ.ಮೀ. ಮತ್ತು ಗಂಟೆಗೆ 233 ಕಿಲೋಮೀಟರ್ ಗರಿಷ್ಠ ವೇಗವನ್ನು ಹೊಂದಿದೆ. ಪರ್ಫಾರ್ಮೆನ್ಸ್ 507 ಕಿಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು ಗಂಟೆಗೆ 261 ಕಿಮೀ ವೇಗವನ್ನು ಹೊಂದಿದೆ.

ಟೆಸ್ಲಾದಿಂದ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ತೆರಿಗೆಗಳನ್ನು ಕಡಿತಗೊಳಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಹೆಚ್ಚಿನ ಆಮದು ತೆರಿಗೆಗಳನ್ನು ಚರ್ಚಿಸಲು ಟೆಸ್ಲಾ ಅಧಿಕಾರಿಗಳು ಇತ್ತೀಚೆಗೆ ಭಾರತೀಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಮತ್ತು ಆಮದು ತೆರಿಗೆಗಳನ್ನು ಕಡಿಮೆ ಮಾಡಲು ವಿನಂತಿಸಿದ್ದರು.

40,000 ಯುಎಸ್​ಡಿವರೆಗಿನ ಬೆಲೆಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ 60ರಷ್ಟು ಆಮದು ತೆರಿಗೆಯನ್ನು ಮತ್ತು 40,000 ಯುಎಸ್​ಡಿಗಿಂತ ಹೆಚ್ಚು ಬೆಲೆಯ ಎಲೆಕ್ಟ್ರಿಕ್​ ವಾಹನಗಳ ಮೇಲೆ ಶೇ 100ರಷ್ಟು ಆಮದು ತೆರಿಗೆಯನ್ನು ವಿಧಿಸಲಾಗುತ್ತದೆ. ಉದಾಹರಣೆಗಾಗಿ, ಭಾರತ-ಮೂಲದ ಟೆಸ್ಲಾ ಮಾಡೆಲ್ 3 43,990 ಮತ್ತು 57,990 ಯುಎಸ್​ಡಿ (ಖರೀದಿ ಬೆಲೆ) ಮಧ್ಯೆ ಇದೆ.

ಟೆಸ್ಲಾ ಮಾಡೆಲ್ 3 ವಿವಿಧ ವೇರಿಯಂಟ್​ ಬೆಲೆಗಳು (ಖರೀದಿ ಬೆಲೆಗಳು, ಅಮೆರಿಕ)
ಸ್ಟ್ಯಾಂಡರ್ಡ್ ಪ್ಲಸ್ – 43,990 ಯುಎಸ್​ಡಿ
ಲಾಂಗ್ ರೇಂಜ್ – 49,990 ಯುಎಸ್​ಡಿ
ಪರ್ಫಾಮೆನ್ಸ್ – 57,990 ಯುಎಸ್​ಡಿ

ಇದನ್ನೂ ಓದಿ: Tesla: ಎಲೆಕ್ಟ್ರಿಕ್​ ವಾಹನಗಳ ಆಮದು ಸುಂಕ ಇಳಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಟೆಸ್ಲಾ ಒತ್ತಾಯ