IPPB- HDFC Bank Partnership: ಗೃಹ ಸಾಲ ವಿತರಣೆಗಾಗಿ ಐಪಿಪಿಬಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್ ಒಪ್ಪಂದ

ಎಚ್​ಡಿಎಫ್​ಸಿ ಬ್ಯಾಂಕ್ ಸ್ಟ್ರಾಟೆಜಿಕ್ ಒಪ್ಪಂದವನ್ನು ಮಾಡಿಕೊಂಡಿದ್ದುಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗ್ರಾಹಕರಿಗೆ ಗೃಹ ಸಾಲವನ್ನು ಒದಗಿಸಲಾಗುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

IPPB- HDFC Bank Partnership: ಗೃಹ ಸಾಲ ವಿತರಣೆಗಾಗಿ ಐಪಿಪಿಬಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್ ಒಪ್ಪಂದ
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್
Follow us
TV9 Web
| Updated By: Srinivas Mata

Updated on: Oct 26, 2021 | 7:43 PM

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ ಕಾರ್ಯತಂತ್ರ (ಸ್ಟ್ರಾಟೆಜಿಕ್) ಒಪ್ಪಂದವನ್ನು ಮಾಡಿಕೊಂಡಿವೆ. ಪೇಮೆಂಟ್ಸ್ ಬ್ಯಾಂಕ್​ನ ಸುಮಾರು 4.7 ಕೋಟಿ ಗ್ರಾಹಕರಿಗೆ ಗೃಹ ಸಾಲವನ್ನು ನೀಡಲು ಈ ಒಪ್ಪಂದವನ್ನು ಮಾಡಿಕೊಂಡಿವೆ. ದೇಶಾದ್ಯಂತ 650 ಶಾಖೆಗಳು ಮತ್ತು 1,36,000ಕ್ಕೂ ಹೆಚ್ಚು ಬ್ಯಾಂಕಿಂಗ್ ಆಕ್ಸೆಸ್ ಪಾಯಿಂಟ್‌ಗಳ (ಪೋಸ್ಟ್ ಆಫೀಸ್‌ಗಳು) ಜಾಲವನ್ನು ಇಟ್ಟುಕೊಂಡು, ಎಚ್​ಡಿಎಫ್​ಸಿಯ ಗೃಹ ಸಾಲ ಉತ್ಪನ್ನಗಳು ಮತ್ತು ಅದರ ಪರಿಣತಿಯನ್ನು ಭಾರತದಾದ್ಯಂತ ತನ್ನ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವ ಗುರಿಯನ್ನು IPPB ಹೊಂದಿದೆ ಎಂದು ಎಚ್​ಡಿಎಫ್​ಸಿ ಹೇಳಿಕೆಯಲ್ಲಿ ತಿಳಿಸಿದೆ. ಐಪಿಪಿಬಿ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್ ನಡುವೆ ಸೋಮವಾರದಂದು ಕಾರ್ಯತಂತ್ರದ ಮೈತ್ರಿ ಕುರಿತು ತಿಳಿವಳಿಕೆ ಪತ್ರಕ್ಕೆ (MoU) ಸಹಿ ಮಾಡಲಾಗಿದೆ.

”ಈ ಪಾಲುದಾರಿಕೆಯು ಗ್ರಾಹಕರಿಗೆ ಎಚ್‌ಡಿಎಫ್‌ಸಿಯ ಗೃಹ ಸಾಲಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಬ್ಯಾಂಕ್​ ಸೇವೆ ದೊರೆಯದ ಮತ್ತು ಕಡಿಮೆ ಸೌಲಭ್ಯ ಇರುವ ಪ್ರದೇಶಗಳಲ್ಲಿ ಹಣಕಾಸಿನ ಸಂಪರ್ಕ ಹೊಂದಿಲ್ಲದವರಿಗೆ ಅನುಕೂಲ ಒದಗಿಸಲು ಬಯಸಿದೆ. ಅಂಥವರ ಸ್ವಂತ ಮನೆ ಕನಸನ್ನು ನನಸು ಮಾಡಲು IPPB ಸುಮಾರು 1,90,000 ಬ್ಯಾಂಕಿಂಗ್ ಸೇವಾ ಪೂರೈಕೆದಾರರ (ಪೋಸ್ಟ್‌ಮೆನ್ ಮತ್ತು ಗ್ರಾಮೀಣ ಡಾಕ್ ಸೇವಕ್) ಮೂಲಕ ಗೃಹ ಸಾಲವನ್ನು ನೀಡುತ್ತದೆ,” ಎಂದು ಅದು ಹೇಳಿದೆ. ಎಂಒಯು ಪ್ರಕಾರ, ಕ್ರೆಡಿಟ್, ತಾಂತ್ರಿಕ ಮತ್ತು ಕಾನೂನು ಮೌಲ್ಯಮಾಪನಗಳು, ಎಲ್ಲ ಗೃಹ ಸಾಲಗಳ ಪ್ರಕ್ರಿಯೆ ಮತ್ತು ವಿತರಣೆಯನ್ನು ಎಚ್‌ಡಿಎಫ್‌ಸಿ ಲಿಮಿಟೆಡ್ ನಿರ್ವಹಿಸುತ್ತದೆ. ಐಪಿಪಿಬಿ ಸಾಲಗಳ ಸೋರ್ಸಿಂಗ್ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.

ಈ ಒಪ್ಪಂದದ ಮಹತ್ವದ ಕುರಿತು ಐಪಿಪಿಬಿ ಎಂ.ಡಿ. ಜೆ ವೆಂಕಟರಾಮು ಮಾತನಾಡಿ, ಗ್ರಾಹಕರು ತಮ್ಮ ಸಮೀಪ ಗೃಹ ಸಾಲ ನೀಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಹೊಂದಿಲ್ಲದ ಕಾರಣ ಸಾಲದ ಲಭ್ಯತೆಯನ್ನು ಸಕ್ರಿಯಗೊಳಿಸದೆ ಆರ್ಥಿಕ ಸೇರ್ಪಡೆ ಸಾಧಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೈತ್ರಿಯು ಗೃಹ ಸಾಲಗಳನ್ನು ಲಭ್ಯವಾಗುವಂತೆ ಮತ್ತು ಸಂಪರ್ಕ ಸಿಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಡಿಜಿಟಲ್ ಸಕ್ರಿಯಗೊಳಿಸಿದ ಏಜೆಂಟ್ ಬ್ಯಾಂಕಿಂಗ್ ಚಾನೆಲ್ ಮತ್ತು ಐಪಿಪಿಬಿಯನ್ನು ಕ್ರೆಡಿಟ್ ಸೇರಿದಂತೆ ಗ್ರಾಹಕರ ಎಲ್ಲ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಒನ್​ ಸ್ಟಾಪ್ ವೇದಿಕೆಯಾಗಿ ಇರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿದ ಎಚ್​ಡಿಎಫ್​ಸಿ ಎಂ.ಡಿ. ರೇಣು ಸುದ್ ಕಾರ್ನಾಡ್, ಈ ಮೈತ್ರಿಯು ನಮ್ಮ ದೇಶದ ದೂರದ ಸ್ಥಳಗಳಲ್ಲಿ ಎಲ್ಲರಿಗೂ ವಸತಿ ಸಿಗಲಿ ಎಂಬ ಪ್ರಧಾನಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ಮನೆಗಳನ್ನು ದೊರೆಯುವಂತೆ ಉತ್ತೇಜಿಸುವ ಕಡೆಗೆ ಬಹಳ ದೂರ ಸಾಗುತ್ತದೆ ಎಂದು ಹೇಳಿದ್ದಾರೆ. ಆರಂಭದಿಂದಲೂ ಇಲ್ಲಿಯವರೆಗೆ IPPB ವಿವಿಧ ಗ್ರಾಹಕರ ವಿಭಾಗಗಳ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವ ನವೀನ ಮತ್ತು ಅನನ್ಯ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಶ್ರೇಣಿಯನ್ನು ಪರಿಚಯಿಸಿದೆ. ಸಹಾಯಕ ಬ್ಯಾಂಕಿಂಗ್ ಮಾದರಿಯ ಮೂಲಕ ಕೊನೆಯ ಹಂತದ ತನಕ ಸುಲಭವಾದ ಡಿಜಿಟಲ್ ಅಳವಡಿಕೆ ಸಕ್ರಿಯಗೊಳಿಸುತ್ತಿದೆ.

ಇದನ್ನೂ ಓದಿ: ಐಪಿಪಿಬಿ- ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸಹಯೋಗ; ಶೇ 6.66ರ ಬಡ್ಡಿ ದರದ ಗೃಹ ಸಾಲ